ಕಾಂಗ್ರೆಸ್ ತೊರೆದು ಅತ್ತ ಇಲ್ಲ ಇತ್ತ ಇಲ್ಲ ಎನ್ನುವ ಅತಂತ್ರ ಸ್ಥಿತಿಯಲ್ಲಿದ್ದ ಮುನಿರತ್ನ ಅವರಿಗೆ ಇಂದು (ಮಂಗಳವಾರ) ಡಬಲ್ ಧಮಾಕಾ ಸಿಕ್ಕಿದ್ದು, ಅವರ ರಾಜಕೀಯ ಹಾದಿ ಸುಗಮವಾಗಿದೆ.

ಬೆಂಗಳೂರು, (ಅ.13): ರಾಜರಾಜೇಶ್ವರಿ ಚುನಾವಣಾ ಆಕ್ರಮ ಆರೋಪ ಹಿನ್ನೆಲೆಯಲ್ಲಿ ಮುನಿರತ್ನ ಅವರ ವಿರುದ್ಧ ದಾಖಲಿಸಲಾಗಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್‌ ಇಂದು (ಮಂಗಳವಾರ) ವಜಾಗೊಳಿಸಿದೆ.

 ಈ ಮೂಲಕ ಮುನಿರತ್ನ ಅವರಿಗೆ ರಾಜಕೀಯ ದಾರಿ ಸುಗಮವಾಗಿದೆ. ಇನ್ನು ನ್ಯಾಯಾಲಯದಿಂದ ತೀರ್ಪು ಬಂದ ಬೆನ್ನೆಲ್ಲೇ ಮುನಿರತ್ನ, ಸ್ವೀಟ್ ತೆಗೆದುಕೊಂಡು ಸಿಎಂ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಕೋರ್ಟ್ ಆದೇಶ ಬಗ್ಗೆ ವಿವರಿಸಿದರು. 

ಮುನಿರತ್ನಗೆ ಬಿಗ್ ರಿಲೀಫ್, ಮುನಿರಾಜು ಗೌಡ ಅರ್ಜಿ ವಜಾ!

ಈ ವೇಳೆ ಆಲ್‌ ದಿ ಬೆಸ್ಟ್ ಗೆದ್ದು ಬನ್ನಿ ಎಂದು ಸಿಎಂ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಈ ಮೂಲಕ ಆರ್‌ ಆರ್‌ ನಗರ ಬೈ ಎಲೆಕ್ಷನ್ ಟಿಕೆಟ್ ಮುನಿರತ್ನ ಅವರಿಗೆ ಫಿಕ್ಸ್ ಆದಂತಾಗಿದ್ದು, ಇಂದು (ಮಂಗಳವಾರ) ಸಂಜೆ ಅಧಿಕೃತ ಘೋಷಣೆಯಾಗಲಿದೆ.

ಇನ್ನು ಆರ್.ಆರ್.ನಗರ ಉಪಚುನಾವಣೆಯ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆಸಿದ್ದ ತುಳಸಿ ಮುನಿರಾಜುಗೌಡ ಅವರ ಜತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಸಿ.ಟಿ. ಮಾತುಕತೆ ನಡೆಸಿ ಮನವೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

"

ಒಟ್ಟಿನಲ್ಲಿ ಮುನಿರತ್ನ ಅವರಿಗೆ ನ್ಯಾಯಾಲದಲ್ಲಿ ಗೆಲ್ಲುವು ಸಿಕ್ಕ ಬೆನ್ನಲ್ಲೇ ಇತ್ತ ಬೈ ಎಲೆಕ್ಷನ್ ಟಿಕೆಟ್ ಕನ್ಷರ್ಮ್ ಆಗಿದ್ದು, ಮಂಗಳವಾರ ಅವರಿಗೆ ಡಬಲ್ ಧಮಾಕಾ ಸಿಕ್ಕಂತಾಗಿದೆ.

ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನವಾಗಿದೆ.