Asianet Suvarna News Asianet Suvarna News

ಉಪ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಫೈನಲ್

ರಾಜ್ಯದಲ್ಲಿ ಉಪ ಚುನಾವಣೆ ದಿನಾಂಕ ನಿಗದಿಯಾಗಿದೆ. ಈನಿಟ್ಟಿನಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯೂ ಜೋರಾಗಿ ನಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ

Congress Candidates List Ready For Karnataka By Election 2021 snr
Author
Bengaluru, First Published Mar 17, 2021, 8:43 AM IST

ಬೆಂಗಳೂರು (ಮಾ.17): ರಾಜ್ಯದ  ಎರಡು ವಿಧಾನಸಭೆ ಹಾಗೂ ಒಂದು ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆಗೆ  ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಕಾಂಗ್ರೆಸ್ ಹೈ ಕಮಾಂಡ್‌ಗೆ ಕಳಿಸಿದೆ. 

ಸಂಭವನೀಯ ಪಟ್ಟಿ ಪ್ರಕಾರ  ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳ ಪೈಕಿ  ಬಸವಕಲ್ಯಾಣದಿಂದ ಬಿ. ನಾರಾಯಣ ರಾವ್ ಪತ್ನಿ ಮಲ್ಲಮ್ಮ ಹಾಗೂ ಮಾಜಿ ಮಾಜಿ ಸಿಎಂ ಧರಂ ಸಿಂಗ್  ಪುತ್ರ ವಿಜಯ್ ಸಿಂಗ್ ಹೆಸರು ಪ್ರಸ್ತಾಪಿಸಲಾಗಿದೆ. ಮಸ್ಕಿಯಲ್ಲಿ  ಬಸವನಗೌಡ ತುರವಿಹಾಳ್ ಕಣಕ್ಕಿಳಿಸುವುದು ಅಂತಿಮವಾಗಿದೆ. 

ಕಾಂಗ್ರೆಸ್‌ನಿಂದ ಗೆದ್ದಿದ್ದ ಪ್ರತಾಪ್‌ ಗೌಡ ಪಾಟೀಲ್ ಬಿಜೆಪಿಗೆ ಓಗುತ್ತಿರುವುದರಿಂದ ಉಪ ಚುನಾವಣೆ ಬಂದಿದೆ. 

ಕರ್ನಾಟಕದ 3 ಕ್ಷೇತ್ರಗಳ ಉಪಚುನಾವಣೆಗಳಿಗೆ ದಿನಾಂಕ ಘೋಷಣೆ .

ಈ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿದ್ದಾಗ ಪ್ರತಾಪ್ ಗೌಡ ಪಾಟೀಲ್ ವಿರುದ್ಧ 213 ಮತಗಳ ಅತ್ಯಲ್ಪ ಅಂತರದಿಂದ ಬಸನಗೌಡ ಸೋತಿದ್ದು ಇದೀಗ ಟಿಕೆಟ್ ನೀಡಲಾಗುತ್ತಿದೆ. 

ಬೆಳಗಾವಿ ಅಭ್ಯರ್ಥಿ ಯಾರು..? : ಬೆಳಗಾವಿ ಲೋಕಸಭೆ ಅಭ್ಯರ್ಥಿ ಆಯ್ಕೆ ಗೊಂದಲಮಯವಾಗಿದ್ದ 2019ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಸಿದ್ದ ಡಾ. ಸಾಧುನವರ್ ಅವರು ಸುರೇಶ್ ಅಂಗಡಿಯವರ ಅರ್ಧದಷ್ಟಯ  ಮತಗಳನ್ನೂ ಪಡೆದಿರಲಿಲ್ಲ. ಈ ಬಾರಿ ಸತೀಶ್ ಜಾರಕಿಹೊಳಿಯನ್ನೇ ಕಣಕ್ಕೆ ಇಳಿಸಬೇಕು ಎಂದು ರಾಜ್ಯ ನಾಯಕರು ಒಲವು ತೋರಿದ್ದಾರೆ. 

Follow Us:
Download App:
  • android
  • ios