ಬೆಂಗಳೂರು, (ನ.03): ಲೆಕ್ಚರರ್ ಆಗಿದ್ದ ದಿವಂಗತ ಡಿ.ಕೆ. ರವಿ ಪತ್ನಿ ಕುಸುಮಾ ಅವರು ರಾಜರಾಜೇಶ್ವರಿ ವಿಧಾನಸಭಾ ಉಪಚುನಾವಣೆ ಅಖಾಡಕ್ಕೆ ಇಳಿದು ಸುಮಾರು ಹದಿನೈದರಿಂದ ಇಪ್ಪತ್ತು ದಿನಗಳ ವರೆಗೆ ವಿಶ್ರಾಂತಿ ಇಲ್ಲದೇ ಗೆಲುವಿಗಾಗಿ ಸುತ್ತಾಡಿ ಇದೀಗ ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ.

ಇನ್ನು ಉಪಚುನಾವಣೆಯ ಫಲಿತಾಂಶ ಏನಾಗಲಿದೆ ಎನ್ನುವ ಬಗ್ಗೆ ಸ್ವತಃ ಕುಸುಮಾ ಅವರು ಸುವರ್ಣ ನ್ಯುಸ್ ಜತೆ ಮಾತನಾಡಿದ್ದು, ನಿನ್ನೆ (ನ.03) ಪರೀಕ್ಷೆ ಬರೆದು ಬಂದಿದ್ದೇನೆ. ರಿಸಲ್ಟ್ ಉತ್ತಮವಾಗಿರುವ ವಿಶ್ವಾಸ ನನಗಿದೆ ಎಂದಿದ್ದಾರೆ.

ಬೈ ಎಲೆಕ್ಷನ್: BJP, JDS, ಕಾಂಗ್ರೆಸ್ ಸೋಲು-ಗೆಲುವಿಗೆ ಕಾರಣವಾಗಬಹುದಾದ ಅಂಶಗಳು..

ಆರ್.ಆರ್ ನಗರದ ಜನರು ತೋರಿಸಿರುವ ಪ್ರೀತಿ ವಿಶ್ವಾಸ ನನಗೆ ಸಾಕಷ್ಟು ಆತ್ಮ ವಿಶ್ವಾಸ ಹೆಚ್ಚಿಸಿದೆ.. ನಾನು ರಾಜಕೀಯದಲ್ಲಿ ಸಕ್ರೀಯವಾಗಿರುವ ನಿರ್ಧಾರ ಮಾಡಿದ್ದೇನೆ. ಜನರ ಮಧ್ಯೆ ಕಾರ್ಯನಿರ್ವಹಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಆರ್ ಆರ್ ನಗರದ ಪ್ರತಿ ಮನೆಗಳಲ್ಲೂ ನನ್ನಂತ ಒಬ್ಬ ಹೆಣ್ಣು ಮಗಳು ಇರ್ತಾರೆ ಅಂತ ನನಗೆ ಅನಿಸ್ತು. ಅವರು ಕುಸುಮಾ ಪರ ಮತ ಚಲಾಯಿಸಿದ್ದಾರೆ ಎಂಬ ನಂಬಿಕೆ ನನಗಿದೆ. ಮಹಿಳೆಯರು ನನಗೆ ಹೆಚ್ಚಿನ ಪ್ರೀತಿ ವಿಶ್ವಾಸ ತೋರಿಸಿದ್ದಾರೆ ಎಂದು ಹೇಳಿದರು.

ಜೆಡಿಎಸ್, ಬಿಜೆಪಿ ಇಬ್ಬರು ನನಗೆ ಎದುರಾಳಿಗಳೇ. ಜೆಡಿಎಸ್ ಕಾಂಗ್ರೆಸ್ ಗೆ ಬರುವ ಮತಗಳನ್ನ ವಿಭಜಿಸಿದೆ ಎಂದು ನಾನು ಅಂದುಕೊಂಡಿಲ್ಲ. ಗೆಲ್ಲುವ ವಿಶ್ವಾಸ ನನಗಿದೆ.. ಫಲಿತಾಂಶ ಏನೇ ಆದ್ರು ರಾಜಕೀಯಕ್ಕೆ ಬಂದ ಮೇಲೆ ಜನರ ಸೇವಾ ಕಾರ್ಯದಲ್ಲಿ ತೊಡಗಿಕೊಳ್ತೇನೆ ಎಂದರು.