ಮಂಗಳವಾರ ಚಿತ್ರದುರ್ಗ, ವಿಜಯನಗರ ಜಿಲ್ಲೆಯ ಹೊಸಪೇಟೆ, ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಬಳಿಕ, ಕಲಬುರಗಿಯಲ್ಲಿ ಬೃಹತ್‌ ರೋಡ್‌ ಶೋ ನಡೆಸಿ, ಬಿಜೆಪಿ ಪರ ಮತಯಾಚಿಸಿದ ಮೋದಿ 

ಸಿಂಧನೂರು(ಮೇ.03): ಕಾಂಗ್ರೆಸ್‌ ಕೇವಲ ಒಂದು ವಂಶಕ್ಕೆ ಸೀಮಿತವಾಗಿದೆ. ಜೆಡಿಎಸ್‌ ಕುಟುಂಬದ ಪಕ್ಷವಾಗಿದೆ. ಈ ಎರಡೂ ಪಕ್ಷಗಳಿಗೆ ದೇಶ ಹಾಗೂ ರಾಜ್ಯದ ಜನರ ಹಿತಾಸಕ್ತಿಯ ಬಗ್ಗೆ ಎಳ್ಳಷ್ಟೂಕಾಳಜಿ ಇಲ್ಲ. ರಾಜ್ಯ ಹಾಗೂ ದೇಶದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಹೀಗಾಗಿ, ಬಿಜೆಪಿಗೆ ಈ ಬಾರಿ ಸಂಪೂರ್ಣ ಬಹುಮತ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಜನತೆಗೆ ಮನವಿ ಮಾಡಿದರು.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿರುವ ಮೋದಿ, ಮಂಗಳವಾರ ಚಿತ್ರದುರ್ಗ, ವಿಜಯನಗರ ಜಿಲ್ಲೆಯ ಹೊಸಪೇಟೆ, ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಬಳಿಕ, ಕಲಬುರಗಿಯಲ್ಲಿ ಬೃಹತ್‌ ರೋಡ್‌ ಶೋ ನಡೆಸಿ, ಬಿಜೆಪಿ ಪರ ಮತಯಾಚಿಸಿದರು.

ಬಿಜೆಪಿ ಪ್ರಣಾಳಿಕೆ ಪಂಚರತ್ನ ಯೋಜನೆಯ ಕಾಪಿ: ಕುಮಾರಸ್ವಾಮಿ ಆರೋಪ

ಈ ಮಧ್ಯೆ, ಸಿಂಧನೂರು ತಾಲೂಕಿನ ಹೊಸಳ್ಳಿ ಕ್ಯಾಂಪಿನ ಬಳಿ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು, ಬಿಜೆಪಿಯ 10 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕರು ಈಗಾಗಲೇ ಸಿಎಂ ಕುರ್ಚಿಗಾಗಿ ಕದನ ನಡೆಸಿದ್ದಾರೆ. ಜಾತಿ, ಧರ್ಮಗಳ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಇವರ 60 ವರ್ಷದ ದುರಾಡಳಿತ ಕಂಡಿರುವ ಜನತೆ ಈ ಬಾರಿ ಅವರನ್ನು ಖಂಡಿತವಾಗಿ ತಿರಸ್ಕರಿಸುತ್ತಾರೆ. ಇನ್ನು, ಜೆಡಿಎಸ್‌ ತಂದೆ-ಮಕ್ಕಳ ಪಕ್ಷವಾಗಿದ್ದು, ಅನೇಕ ಮುತ್ಸದ್ಧಿಗಳು ಈಗಾಗಲೇ ಪಕ್ಷಕ್ಕೆ ಗುಡ್‌ಬೈ ಹೇಳಿ ಹೊರಟಿರುವುದೇ ಆ ಪಕ್ಷದ ದುಸ್ಥಿತಿಯನ್ನು ಸಾರಿ, ಸಾರಿ ಹೇಳುತ್ತದೆ ಎಂದು ಲೇವಡಿ ಮಾಡಿದರು.

ಭತ್ತದ ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ಮೋದಿ ಭದ್ರತಾ ಪಡೆಯ ಹೆಲಿಕಾಪ್ಟರ್: ಮೇಲೆತ್ತಲು ಪರದಾಟ!

ಕಾಂಗ್ರೆಸ್‌ ಸರ್ಕಾರದ ಮಾಜಿ ಪ್ರಧಾನಿಯೊಬ್ಬರು ಕೇಂದ್ರದಿಂದ ಬಿಡುಗಡೆಯಾದ ಒಂದು ರೂಪಾಯಿ ಅನುದಾನ ಕಟ್ಟಕಡೆಯ ಫಲಾನುಭವಿಗೆ ತಲುಪುವಾಗ 15 ಪೈಸೆ ಆಗಿರುತ್ತಿತ್ತು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಆ ಮೂಲಕ ಕಾಂಗ್ರೆಸ್‌ ಸರ್ಕಾರ 85% ಸರ್ಕಾರ ಎಂದು ತಾನೇ ಸಾಬೀತು ಪಡಿಸಿಕೊಂಡಿದೆ. ಈಗ ಕರ್ನಾಟಕದ ಐತಿಹಾಸಿಕ ಮತ್ತು ಪಾರಂಪರಿಕ ಹಿನ್ನೆಲೆಯುಳ್ಳ ಸಮುದಾಯದವನ್ನು ಹಾಗೂ ಸಮುದಾಯದ ಮುಖ್ಯಮಂತ್ರಿಗಳನ್ನು ಭ್ರಷ್ಟರೆಂದು ಜರಿಯುವ ಮೂಲಕ ಕಾಂಗ್ರೆಸ್‌ ನಾಯಕರು ತಮ್ಮ ಸಂಸ್ಕೃತಿಯನ್ನು ಬಯಲು ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಕೇಂದ್ರದ ಯೋಜನೆಗಳಿಗೆ ಏಳು ಸುತ್ತಿನ ಭದ್ರತೆ:

ಇದಕ್ಕೂ ಮೊದಲು ಚಿತ್ರದುರ್ಗದಲ್ಲಿ ಮಾತನಾಡಿದ ಮೋದಿ ಚಿತ್ರದುರ್ಗದ ಏಳು ಸುತ್ತಿನ ಕೋಟೆಯಂತೆ ಕೇಂದ್ರದ ಯೋಜನೆಗಳಿಗೆ ಏಳು ಸುತ್ತಿನ ಭದ್ರತೆ ಒದಗಿಸಿದ್ದೇನೆ. ಸರ್ವರಿಗೂ ಮನೆ ನೀಡುವ ಪಿಎಂ ಆವಾಸ್‌, ಮನೆಗೆ ಗ್ಯಾಸ್‌, ನೀರು ಕೊಡುವ ಯೋಜನೆ, ಗರೀಬ್‌ ಕಲ್ಯಾಣ ಯೋಜನೆ ಮೂಲಕ ರೇಷನ್‌, ಅನ್ನದ ಯೋಜನೆ, ಆರೋಗ್ಯಕ್ಕಾಗಿ ಆಯುಷ್ಮಾನ್‌ ಭಾರತ್‌, ಉಚಿತವಾಗಿ ಲಸಿಕೆ ನೀಡುವ ಯೋಜನೆ, ಜನಧನ್‌, ಮುದ್ರಾ ಯೋಜನೆ ಮೂಲಕ ಸಾಲ, ಆರ್ಥಿಕ ಭದ್ರತೆ, ಭೀಮಾ, ಜೀವನ ಜ್ಯೋತಿ, ಅಟಲ… ಪೆನ್ಷನ್‌ ಸೇರಿ ಹಲವು ಯೋಜನೆ ಜಾರಿಗೊಳಿಸಿದ್ದೇನೆ. ಸಹೋದರಿಯರಿಗೆ ಕಾನೂನು ಸುರಕ್ಷೆಯ ಯೋಜನೆ ಕೊಟ್ಟು ಎಲ್ಲರಿಗೂ ಸಾಮಾಜಿಕ ಭದ್ರತೆ ನೀಡಿದ್ದೇವೆ. ಈ ಎಲ್ಲ ಯೋಜನೆಗಳು ಏಳುಸುತ್ತಿನಲ್ಲಿ ಭದ್ರವಾಗಿವೆ ಎಂದರು.