Breaking: ಕಾಂಗ್ರೆಸ್‌ ಪಕ್ಷದ 2ನೇ ಪಟ್ಟಿ ಬಿಡುಗಡೆ, 43 ಅಭ್ಯರ್ಥಿಗಳ ಘೋಷಣೆ


ಕಾಂಗ್ರೆಸ್‌ ಪಕ್ಷ ಮುಂದಿನ ಲೋಕಸಭೆ ಚುನಾವಣೆಗಾಗಿ 2ನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. 2ನೇ ಪಟ್ಟಿಯಲ್ಲಿ ಒಟ್ಟು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.
 

Congress announces second list of 43 candidates for 2024 Loksabha Election san

ನವದೆಹಲಿ (ಮಾ.12): 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟಟು 43 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗಿದ್ದು, ಕರ್ನಾಟಕದ ಯಾವುದೇ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಾಗಿಲ್ಲ. ಮೊದಲ ಪಟ್ಟಿಯಲ್ಲಿ 39 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿತ್ತು. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಅಸ್ಸಾಂ ರಾಜ್ಯದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಗೌರವ್‌ ಗೊಗೋಯ್‌ ಅಸ್ಸಾಂ ಜೋರ್ಹತ್‌ನಿಂದ ಸ್ಪರ್ಧೆ ಮಾಡಲಿದ್ದರೆ, ಕಮಲ್‌ನಾಥ್‌ ಪುತ್ರ ನಕುಲ್‌ನಾಥ್‌ ಮಧ್ಯಪ್ರದೇಶದ ಚಿಂದ್ವಾರಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. 'ಸಿಇಸಿ ಸೋಮವಾರ ಸಭೆ ನಡೆಸಿ ಅಸ್ಸಾಂ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಸುಮಾರು 43 ಹೆಸರುಗಳ (ಲೋಕಸಭಾ ಅಭ್ಯರ್ಥಿಗಳ) ಪಟ್ಟಿಯನ್ನು ಬಿಡುಗಡೆ ಮಾಡಿದೆ' ಎಂದು ಕಾಂಗ್ರೆಸ್ ನಾಯಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ. ಇನ್ನು ಅಶೋಕ್‌ ಗ್ಲೆಹೋಟ್‌ ಪುತ್ರ ವೈಭವ್‌ ಗೆಹ್ಲೋಟ್‌ ರಾಜಸ್ಥಾನದ ಜಲೋರ್‌ನಿಂದ ಸ್ಪರ್ಧೆ ಮಾಡಲಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕ ಸಚಿನ್‌ ಪೈಲಟ್‌ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಎಂದು ಸುದ್ದಿಯಾಗಿತ್ತು. ಆದರೆ, ಅವರಿಗೆ ಆಸಕ್ತಿ ಇಲ್ಲದ ಕಾರಣ ಟಿಕೆಟ್‌ ನೀಡಲಾಗಿಲ್ಲ. ಗುಜರಾತ್‌ನ ಅಹಮದಾಬಾದ್ ಪೂರ್ವ ಕ್ಷೇತ್ರದಿಂದ ರೋಹನ್‌ ಗುಪ್ತಾ ಸ್ಪರ್ಧೆ ಮಾಡಲಿದ್ದಾರೆ.

Congress announces second list of 43 candidates for 2024 Loksabha Election san 

Congress announces second list of 43 candidates for 2024 Loksabha Election san

Latest Videos
Follow Us:
Download App:
  • android
  • ios