Asianet Suvarna News Asianet Suvarna News

MLC Election| ಕಣದಲ್ಲಿ ಇಬ್ಬರಿದ್ದರೆ ಗೊಂದಲ: ಜಗದೀಶ ಶೆಟ್ಟರ್‌

*  ಹಿಂದಿನ ಎರಡೂ ಚುನಾವಣೆಯಲ್ಲೂ ಒಬ್ಬ ಅಭ್ಯರ್ಥಿ ಹಾಕಿದ್ದೇವೆ
*  25 ಕ್ಷೇತ್ರಗಳ ಪೈಕಿ 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು 
*  ವಿಪ ಚುನಾವಣೆಲಿ 15ಕ್ಕಿಂತ ಹೆಚ್ಚಿನ ಸ್ಥಾನ ಗೆಲ್ತೇವೆ: ಸಿಸಿಪಿ 

Confusion If There Are Two Candidates in Vidhan Parishat Election Says Jagadish Shettar grg
Author
Bengaluru, First Published Nov 24, 2021, 11:56 AM IST
  • Facebook
  • Twitter
  • Whatsapp

ಧಾರವಾಡ(ನ.24): ಧಾರವಾಡ(Dharwad) ವಿಪ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳನ್ನು ನಿಲ್ಲಿಸಿ ಪ್ರಯೋಗ ಮಾಡಿದ್ದೇವೆ. ಆಗ ನಮ್ಮಲ್ಲೇ ಗೊಂದಲಗಳಾಗಿದ್ದು, ಒಬ್ಬರೇ ಆಯ್ಕೆಯಾಗಿದ್ದರು. ಹೀಗಾಗಿ ಒಬ್ಬರನ್ನೇ ಕಣಕ್ಕಿಳಿಸುವ ನಿರ್ಧಾರವನ್ನು ಈ ಬಾರಿಯೂ ಕೈಗೊಳ್ಳಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌(Jagadish Shettar) ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಹಿಂದಿನ ಎರಡೂ ಚುನಾವಣೆಯಲ್ಲೂ(Election) ಒಬ್ಬ ಅಭ್ಯರ್ಥಿ ಹಾಕಿದ್ದೇವೆ. ಕಾಂಗ್ರೆಸ್‌(Congress) ಸಹ ಒಬ್ಬರನ್ನೇ ನಿಲ್ಲಿಸಿದೆ. ಧಾರವಾಡ ವಿಪ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳನ್ನು ನಿಲ್ಲಿಸಿದಾಗ ನಮ್ಮಲ್ಲಿ ಒಬ್ಬರೇ ಆಯ್ಕೆಯಾಗಿದ್ದಾರೆ. ಹೀಗಾಗಿ ಪಕ್ಷ ಒಬ್ಬರನ್ನೇ ನಿಲ್ಲಿಸುವ ನಿರ್ಧಾರ ಮಾಡಿದೆ ಎಂದರು.

Council Election : SM ಕೃಷ್ಣ ಮೂಲಕ ನನ್ನ ಆಪ್ತಗೆ ಕಾಂಗ್ರೆಸ್ ಟಿಕೆಟ್‌ : ಗೊತ್ತಾಗಿ ವಜಾ ಮಾಡಿದೆ

ವಿಧಾನ ಪರಿಷತ್‌(Vidhan Parishat) ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಬಿಜೆಪಿ(BJP) ಅಭ್ಯರ್ಥಿಯಾಗಿ ಪ್ರದೀಪ ಶೆಟ್ಟರ್‌(Pradeep Shettar) ನಾಮಪತ್ರ(Nomination) ಸಲ್ಲಿಸಿದ್ದಾರೆ. ಹಿಂದಿನ ಚುನಾವಣೆಯಂತೆ ಈ ಬಾರಿಯೂ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಈಗಾಗಲೇ 8 ಜಿಲ್ಲೆಗಳಲ್ಲಿ ಜನ ಸ್ವರಾಜ್‌(JanSwaraj) ಯಾತ್ರೆ ನಡೆಸಿದ್ದು, ಉತ್ತಮ ಜನ ಬೆಂಬಲ ಸಿಗುತ್ತಿದೆ. ನಮ್ಮ ಸಂಘಟನೆ, ಶಕ್ತಿ ಕಡಿಮೆ ಇರುವ ಕಡೆಗಳಲ್ಲಿ ಸಹ ಈ ಬಾರಿ ಖಾತೆ ತೆರೆಯುತ್ತೇವೆ. 25 ಕ್ಷೇತ್ರಗಳ ಪೈಕಿ 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.

ಪ್ರದೀಪ ಶೆಟ್ಟರ್‌ ದಂಪತಿ ಕೋಟ್ಯಧಿಪತಿ

ಹು-ಧಾ(Hubballi-Dharwad) ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೈಗಾರಿಕಾ ಉದ್ಯಮಿ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಸಹೋದರ ಪ್ರದೀಪ್‌ ಶೆಟ್ಟರ್‌ ಕೋಟ್ಯಾಧಿಪತಿ.

ಅವರ ಪತ್ನಿ ಸ್ನೇಹಾ ಶೆಟ್ಟರ್‌ ಹೆಸರಿನಲ್ಲಿ 1,12,89,269, ಪ್ರದೀಪ ಶೆಟ್ಟರ್‌ ಹೆಸರಲ್ಲಿ 2,14,04,666 ಹಾಗೂ ಇಬ್ಬರು ಮಕ್ಕಳ ಹೆಸರಿನಲ್ಲಿ 1,32,654 ಸೇರಿದಂತೆ 1,35,62,389 ಚರಾಸ್ತಿ ಇದೆ.
ಹಾಗೆಯೇ ಪ್ರದೀಪ ಶೆಟ್ಟರ್‌ 6,75,06,910 ಹಾಗೂ ಪತ್ನಿ ಹೆಸರಿನಲ್ಲಿ 25 ಲಕ್ಷ ಸೇರಿದಂತೆ 7,00,06,910 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ತಮ್ಮ ಹೆಸರಿನಲ್ಲಿ 1,10,32,916, ಪತ್ನಿ ಹೆಸರಿನಲ್ಲಿ 96,22,470, ಮನೆಗಾಗಿ ಕರ್ನಾಟಕ ಬಾಾ್ಯಂಕಲ್ಲಿ 86 ಲಕ್ಷ ಸಾಲ ಮಾಡಿದ್ದರೆ, ಪತ್ನಿ ಕಾರಿಗಾಗಿ ಎಚ್‌ಡಿಎಫ್‌ಸಿಯಲ್ಲಿ 5.96 ಲಕ್ಷ ಸಾಲ ಮಾಡಿದ್ದಾರೆ. ವಿಶೇಷವೆಂದರೆ ಇಬ್ಬರು ಮಕ್ಕಳ ಹೆಸರಲ್ಲಿ ಶಿಕ್ಷಣಕ್ಕಾಗಿ ತಲಾ 19.42 ಲಕ್ಷ ಸಾಲವಿದೆ(Loan). ಒಟ್ಟು 2,45,40,246 ಸಾಲವನ್ನು ಪಡೆದಿದ್ದಾರೆ ಎಂದು ಅವರು ಅಫಿಡವಿಟ್‌ನಲ್ಲಿ(Affidavit) ಮಾಹಿತಿ ನೀಡಿದ್ದಾರೆ.

Council Election : 'ಸುಮಲತಾ ಬಿಜೆಪಿ ಜೊತೆಗಿದ್ದಾರೆ : ಚುನಾವಣಾ ಪ್ರಚಾರಕ್ಕೆ ಬರುತ್ತಾರೆ'

ವಿಪ ಚುನಾವಣೆಲಿ 15ಕ್ಕಿಂತ ಹೆಚ್ಚಿನ ಸ್ಥಾನ ಗೆಲ್ತೇವೆ: ಸಿಸಿಪಿ

ಪ್ರದೀಪ್‌ ಶೆಟ್ಟರ್‌ ಅವರಿಗೆ ಗದಗ ಜಿಲ್ಲೆಯಲ್ಲಿ ಶೇ. 75ಕ್ಕಿಂತ ಹೆಚ್ಚು ಮತ ಕೊಡಿಸುತ್ತೇವೆ. ರಾಜ್ಯದಲ್ಲಿ(Karnataka) ಕನಿಷ್ಠ 15 ಸ್ಥಾನ ಗೆಲ್ಲುತ್ತೇವೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಹೇಳಿದರು.

ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪ್ರದೀಪ್‌ ಶೆಟ್ಟರ್‌ ಉಮೇದುವಾರಿಕೆ ಸಲ್ಲಿಕೆ ವೇಳೆ ಅವರು ಮಾಧ್ಯಮಗಳ ಜತೆ ಮಾತನಾಡಿ, ಸ್ಥಳೀಯ ಸಂಸ್ಥೆಗಳಿಂದ ಎಂಎಲ್ಸಿ(MLC) ಚುನಾವಣೆ ನಡೆಯುತ್ತಿದ್ದು, ಧಾರವಾಡ ಅಭ್ಯರ್ಥಿ ಪ್ರದೀಪ ಶೆಟ್ಟರ್‌ ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ(BS Yediyurappa) ನೇತೃತ್ವದದಲ್ಲಿ ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಜನ ಸ್ವರಾಜ್‌ ಯಾತ್ರೆ ನಡೆಸಿ ಯಶಸ್ವಿಯಾಗಿದ್ದೇವೆ. ಪ್ರದೀಪ್‌ ಶೆಟ್ಟರ್‌ ಅವರಿಗೆ ಗದಗ ಜಿಲ್ಲೆಯಲ್ಲಿ ಶೇ. 75ಕ್ಕಿಂತ ಹೆಚ್ಚು ಮತ ಕೊಡಿಸುತ್ತೇವೆ ಎಂದರು.

ರಾಜ್ಯದಲ್ಲಿ ಕನಿಷ್ಠ 15 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವ ಸಿ.ಸಿ.ಪಾಟೀಲ್‌(CC Patil), ಮೇಲ್ಮನೆಯಲ್ಲಿನ ಬಹುಮತ ಕೊರತೆ ನೀಗಿಸಿಕೊಳ್ಳುತ್ತೇವೆ. ವಿಧಾನ ಪರಿಷತ್‌ನಲ್ಲಿಯೂ ಬಹುಮತ ಸಾಬೀತು ಮಾಡುತ್ತೇವೆ ಎಂದರು.
 

Follow Us:
Download App:
  • android
  • ios