Asianet Suvarna News Asianet Suvarna News

ಸಿದ್ದರಾಮಯ್ಯರಂಥ ರಾಷ್ಟ್ರದ್ರೋಹಿಯನ್ನು ಕಂಡಿಲ್ಲ: ಈಶ್ವರಪ್ಪ

ಸಿದ್ದರಾಮಯ್ಯ.. ಸಿದ್ರಾಮಯ್ಯ ಎನ್ನುವ ಕೆಟ್ಟಪದ ಕೇಳಿ ಕೇಳಿ ನನಗೆ ಸಾಕಾಗಿಹೋಗಿದೆ. ಅವರ ಹೆಸರು ಹೇಳಿದರೆ ನನ್ನ ಬಾಯಲ್ಲಿ ಹುಳ ಬೀಳುತ್ತದೆ ಅನಿಸುತ್ತದೆ. ಆ ಕೆಟ್ಟ ಹೆಸರನ್ನು ನನ್ನ ಬಾಯಲ್ಲಿ ಏಕೆ ಹೇಳಿಸುತ್ತೀರಾ? ಹೀಗೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಉಪ ಮುಖ್ಯಮಮತ್ರಿ ಕೆ.ಎಸ್‌.ಈಶ್ವರಪ್ಪ ಹರಿಹಾಯ್ದರು.

ex minister ks eshwarappa slams to siddaramaiah at shivamogga gvd
Author
Bangalore, First Published Aug 18, 2022, 5:10 AM IST

ಶಿವಮೊಗ್ಗ (ಆ.18): ಸಿದ್ದರಾಮಯ್ಯ.. ಸಿದ್ರಾಮಯ್ಯ ಎನ್ನುವ ಕೆಟ್ಟಪದ ಕೇಳಿ ಕೇಳಿ ನನಗೆ ಸಾಕಾಗಿಹೋಗಿದೆ. ಅವರ ಹೆಸರು ಹೇಳಿದರೆ ನನ್ನ ಬಾಯಲ್ಲಿ ಹುಳ ಬೀಳುತ್ತದೆ ಅನಿಸುತ್ತದೆ. ಆ ಕೆಟ್ಟ ಹೆಸರನ್ನು ನನ್ನ ಬಾಯಲ್ಲಿ ಏಕೆ ಹೇಳಿಸುತ್ತೀರಾ? ಹೀಗೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಉಪ ಮುಖ್ಯಮಮತ್ರಿ ಕೆ.ಎಸ್‌. ಈಶ್ವರಪ್ಪ ಹರಿಹಾಯ್ದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಎನ್ನುವುದು ಒಂದು ಕೆಟ್ಟಹೆಸರು. ಆ ಕೆಟ್ಟಹೆಸರನ್ನು ನನ್ನ ಬಾಯಲ್ಲಿ ಹೇಳಿಸಬೇಡಿ. ಸಿದ್ಧರಾಮಯ್ಯ ಅವರ ಬಗ್ಗೆ ಈ ಹಿಂದೆ ಅಲ್ಪಸ್ವಲ್ಪ ಗೌರವ ಇತ್ತು. ಮುಸಲ್ಮಾನರ ಏರಿಯಾದಲ್ಲೇಕೆ ವೀರ ಸಾವರ್ಕರ್‌ ಭಾವಚಿತ್ರ ಹಾಕಬೇಕಿತ್ತು ಎಂದು ಯಾವಾಗ ಹೇಳಿಕೆ ನೀಡಿದರೋ ನಿಜಕ್ಕೂ ಅವರ ಮೇಲೆ ಬೇಸರವಾಗಿದೆ. ಇಂತಹ ರಾಷ್ಟ್ರದ್ರೋಹಿಯನ್ನು ನನ್ನ ಜೀವನದಲ್ಲಿ ಕಂಡಿರಲಿಲ್ಲ. ಸಿದ್ದರಾಮಯ್ಯ ಇಂತಹ ನೀಚ ಎಂದು ಗೊತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮೋತ್ಸವ ಕಾಂಗ್ರೆಸ್‌ಗೇ ತಿರು​ಗು​ಬಾಣ ಆಗ​ಲಿ​ದೆ: ಈಶ್ವರಪ್ಪ ಹೇಳಿ​ಕೆ

ಇಡೀ ದೇಶದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲ ಕಡೆಗೂ ಸ್ವಾತಂತ್ರ್ಯವೀರರ ಭಾವಚಿತ್ರವನ್ನು ಹಾಕುತ್ತೇವೆ. ಇದು ನಮ್ಮ ದೇಶದ ಜಾಗ. ಮುಸಲ್ಮಾನರ ಜಾಗ ಎಂದು ಪ್ರತ್ಯೇಕವಾಗಿ ಎಲ್ಲಿಯೂ ಇಲ್ಲ. ಮುಸಲ್ಮಾನರು ಇರುವ ಜಾಗ ಎಂದ್ರೆ ಅವರಪ್ಪನಿಗೆ ಬರೆದುಕೊಟ್ಟಿದ್ದೇವಾ? ಸಿದ್ದರಾಮಯ್ಯ ಏನಾದರೂ ಈ ಜಾಗವನ್ನು ಮುಸಲ್ಮಾರಿಗೆ ಬರೆದುಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.

ಸಾವರ್ಕರ್‌ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ 21 ವರ್ಷ ಅಂಡಮಾನ್‌ ಜೈಲಿನಲ್ಲಿದ್ದು ದೇಶಕ್ಕೆ ಸ್ವಾತಂತ್ರ್ಯ ತಂದೇ ತರುತ್ತೇನೆ ಎಂದು ಪ್ರತಿಪಾದಿಸಿದ್ದರು. ಮುಸ್ಲಿಂ ಗೂಂಡಾಗಳಿಗೆ ಸಾವರ್ಕರ್‌ ಎಂದರೆ ಸಿಟ್ಟು. ಇಂತಹ ಮುಸ್ಲಿಂ ಗೂಂಡಾಗಳಿಗೆ ಕಾಂಗ್ರೆಸ್‌ ಬೆಂಬಲ ನೀಡುತ್ತದೆ. ಮುಸ್ಲಿಮರ ಓಟ್‌ಗಾಗಿ ಇಂತಹ ಕೆಳಮಟ್ಟಕ್ಕೆ ಇಳಿಯುತ್ತೇನೆ ಎಂದು ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ. ಇಂತಹ ಮುಖ್ಯಮಂತ್ರಿ ಅವರನ್ನು ಕಂಡಿರುವುದು ನಮ್ಮ ದೇಶ ಹಾಗೂ ರಾಜ್ಯದ ದುರ್ದೈವವೇ ಸರಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇವರಿಗೆ ಏನೋ ಉತ್ತರ ಕೊಡಬೇಕೋ ಅದನ್ನು ರಾಜ್ಯದ ಜನ ಕೊಡುತ್ತಾರೆ ಎಂದರು.

ಪಿಎಫ್‌ಐ ಮತ್ತು ಎಸ್‌ಡಿಪಿಐ ಯಾವಾಗ ಬ್ಯಾನ್‌ ಮಾಡಬೇಕೆಂಬುದಕ್ಕೆ ಸಿದ್ದರಾಮಯ್ಯ ಅವರ ಒಪ್ಪಿಗೆ ಬೇಕಾಗಿಲ್ಲ. ಯಾವಾಗ ಬ್ಯಾನ್‌ ಮಾಡಬೇಕೋ ಆವಾಗ ಬ್ಯಾನ್‌ ಆಗಿಯೇ ಆಗುತ್ತದೆ. ಹೊಳೆ ದಾಟೋದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ಈ ಸಂಘಟನೆಗಳು ಮತ್ತು ಕಾಂಗ್ರೆಸ್‌ ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಶಾಂತಿ ಇರದಂತೆ ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಇದೇ ರೀತಿ ಕರ್ನಾಟಕದಲ್ಲಿಯೂ ಶಾಂತಿ ನೆಲೆಸದಂತೆ ಯತ್ನಿಸುತ್ತಿದೆ. ಆದರೆ ಇಂತಹ ರಾಷ್ಟ್ರದ್ರೋಹಿಗಳನ್ನು ಹತ್ತಿಕ್ಕುವುದು ಬಿಜೆಪಿಗೆ ಗೊತ್ತಿದೆ ಎಂದರು.

ಬೆಲೆ ತೆರಬೇಕಾಗುತ್ತದೆ: ಗಣಪತಿ ಹಬ್ಬ ಹತ್ತಿರದಲ್ಲಿದೆ. ನಾವು ಯಾರ ಹಬ್ಬಕ್ಕೂ ತೊಂದರೆ ಕೊಡುವುದಕ್ಕೆ ಹೋಗುವುದಿಲ್ಲ. ಅವರ ಪಾಡಿಗೆ ಅವರು ಹಬ್ಬ ಮಾಡಿಕೊಳ್ಳುತ್ತಾರೆ. ಹಾಗೆಯೇ ನಮ್ಮ ಪಾಡಿಗೆ ನಮ್ಮ ಹಬ್ಬವನ್ನು ಮಾಡಿಕೊಳ್ಳಲು ಬಿಡಬೇಕು. ಇದಕ್ಕೆ ಅಡ್ಡಿಪಡಿಸಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಚಿವ ಸ್ಥಾನ ಬಗ್ಗೆ ವರಿಷ್ಠರು ತೀರ್ಮಾನಿಸ್ತಾರೆ: ಈಶ್ವರಪ್ಪ

ಪಿಚ್ಚರ್‌ ಅಭಿ ಬಾಕಿ ಹೈ: ಮುಸಲ್ಮಾನ್‌ ಗೂಂಡಾಗಳಿಂದ ಈ ರೀತಿ ಘಟನೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸವಾಗಬೇಕು. ಸರ್ಕಾರದ ಗಮನಕ್ಕೂ ಇದನ್ನು ತರಲಾಗಿದೆ ಎಂದು ಶಾಸಕ ಈಶ್ವರಪ್ಪ ಹೇಳಿದರು. ಚಾಕು, ಚೂರಿ ಹಾಕುವವರಿಗೆ ಗುಂಡೇಟು ಹೊಡೆದು ಕೂರಿಸಲಾಗಿದೆ. ಇದು ಕೇವಲ ಸ್ಯಾಂಪಲ್‌ ಅಷ್ಟೇ. ಪಿಚ್ಚರ್‌ ಅಭಿ ಬಾಕಿ ಹೈ ಎಂದು ಮಾರ್ಮಿಕವಾಗಿ ನುಡಿದರು. ಮುಸಲ್ಮಾನ್‌ ಗೂಂಡಾಗಳ ಈ ದುಷ್ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ದುಷ್ಕರ್ಮಿಗಳನ್ನು ಮಟ್ಟಹಾಕಲು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ. ಚಾಕು ಇರಿತದಿಂದ ಗಾಯಗೊಂಡಿರುವ ಪ್ರೇಮ್‌ ಸಿಂಗ್‌ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು. ಅದೃಷ್ಟವಶಾತ್‌ ಆತ ಪ್ರಾಣಾಪಾಯದಿಂದ ಪಾರಾಗಿ ಗುಣಮುಖರಾಗುತ್ತಿದ್ದಾರೆ. ಈ ರೀತಿ ನೀಚ ಕೃತ್ಯ ಎಸಗುವವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Follow Us:
Download App:
  • android
  • ios