ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಅವರ ಸಚಿವ ಸಂಪುಟ ಸದಸ್ಯರ ವಿರುದ್ಧವೂ ರಾಜ್ಯಪಾಲರಿಗೆ ದೂರು ದಾಖಲು ಸರಣಿ ಮುಂದುವರೆದಿದ್ದು, ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನಂತರ ಗ್ರಾಮೀಣಾವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ಗೆ ದೂರು ನೀಡಲಾಗಿದೆ. 

ಬೆಂಗಳೂರು (ಆ.28): ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಅವರ ಸಚಿವ ಸಂಪುಟ ಸದಸ್ಯರ ವಿರುದ್ಧವೂ ರಾಜ್ಯಪಾಲರಿಗೆ ದೂರು ದಾಖಲು ಸರಣಿ ಮುಂದುವರೆದಿದ್ದು, ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನಂತರ ಗ್ರಾಮೀಣಾವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ಗೆ ದೂರು ನೀಡಲಾಗಿದೆ. 'ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದವರು ಸಿದ್ದಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಕೆಐಎಡಿಬಿಯಿಂದ ಐದು ಎಕರೆ ಜಾಗ ಪಡೆದುಕೊಂಡಿದಾರೆ. 

ಸಚಿವರಾಗಿ ಪ್ರಿಯಾಂಕ್ ಖರ್ಗೆ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ' ಎಂದು ಆರೋಪಿಸಿ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಂಗಳವಾರ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಸ್ವಜನ ಪಕ್ಷಪಾತ ಅಧಿಕಾರ ದುರುಪಯೋಗ ಮತ್ತು ಹಿತಾಸಕ್ತಿ ಸಂಘರ್ಷದ ಮೂಲಕ ಐದು ಭೂಮಿಯನ್ನು ಕಾನೂನು ಬಾಹಿರವಾಗಿ ಪಡೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. 

ಎಚ್‌ಡಿಕೆ ಸೇರಿದಂತೆ ಪ್ರತಿಪಕ್ಷ ನಾಯಕರ ಪ್ರಾಸಿಕ್ಯೂಷನ್‌ಗಾಗಿ ಆ.31ಕ್ಕೆ ಸಿಎಂ, ಡಿಸಿಎಂ ರಾಜಭವನ ಯಾತ್ರೆ!

ಕೆಐಎಡಿಬಿಯಿಂದ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್‌ ಪಾರ್ಕ್‌ಗಾಗಿ ಮೀಸಲಿಟ್ಟ 45.9 ಎಕರೆ ಜಮೀನಿನಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ಐದು ಎಕರೆ ಜಮೀನು ನೀಡಲಾಗಿದೆ. ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಕುಟುಂಬದವರು ನಡೆಸುತ್ತಿರುವ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಪರಿಶಿಷ್ಟ ಕೋಟಾದಡಿ 5 ಎಕರೆ ಜಮೀನು ನೀಡಲಾಗಿದೆ. ಈ ಟ್ರಸ್ಟ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ, ರಾಹುಲ್ ಖರ್ಗೆ, ಸಂಸದ ಹಾಗೂ ಅಳಿಯ ರಾಧಾಕೃಷ್ಣ ಅವರು ಸದಸ್ಯರಾಗಿದ್ದಾರೆ. ಇದು ನಿಯಮ ಎಂದು ಉಲ್ಲಂಘನೆಯಾಗಿದೆ ರಾಜ್ಯಪಾಲರಿಗೆ ಮನವರಿಕೆ ಮಾಡಿದ್ದಾರೆ.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಕೆಐಎಡಿಬಿಯ ಸಿ.ಎ. ನಿವೇಶನ ಮಂಜೂರು ಮಾಡಲಾಗಿದೆ. ಅದೊಂದೇ ಕುಟುಂಬ ಎಸ್ಸಿ/ ಎಸ್‌ಟಿಗೆ ಸೇರಿದೆಯೇ? ಇದು ಮತ್ತೊಂದು ಮುಡಾ ಪ್ರಕರಣವಾಗಲಿದ್ದು, ಸಿಎ ನಿವೇಶನಕ್ಕೆ ಜಾಗ ಬೇಕು ಎಂದು ಹಲವರು ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಹಿಟ್ ಅಂಡ್ ರನ್ ಮಾಡೋದಿಲ್ಲ. ಎಲ್ಲಾ ದಾಖಲೆಗಳನ್ನಿಡುತ್ತೇನೆ ಎಂದು ಕಿಡಿಕಾರಿದರು.

ಸಿಎ ನಿವೇಶನಗಳಲ್ಲಿ ಆಸ್ಪತ್ರೆ, ಅಂಚೆ ಕಚೇರಿ, ಶಾಲೆ ನಿರ್ಮಾಣಕ್ಕೆ ಅವಕಾಶ ಇದೆ. ಒಂದು ಮನೆಗೆ ಸೀಮಿತವಾಗಿರುವ ಟ್ರಸ್ಟ್ ಇದಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ರಾಧಾಕೃಷ್ಣ ಇವರ ಹೆಸರಲ್ಲಿದ್ದು, ಕಲಬುರಗಿಯಲ್ಲಿ ನೋಂದಣಿಯಾಗಿದೆ. ದಲಿತರು ಎಂದರೆ ಒಂದೇ ಒಂದು ಕುಟುಂಬವಲ್ಲ, ಅನೇಕ ದಲಿತ ಕುಟು೦ಬಗಳು ಸಹ ಇವೆ. ಒಂದೇ ಕುಟುಂಬಕ್ಕೆ ಹಲವು ಎಕರೆ ಜಮೀನು ನೀಡಲಾಗಿದೆ. ಇತರೆ ಟ್ರಸ್ಟ್‌ಗಳಿಗೆ ಅರ್ಧ ಎಕರೆ ಸಿಕ್ಕಿದ್ದರೂ ಅನುಕೂಲವಾಗುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ ಉಪಚುನಾವಣೆ: ಸಿ.ಪಿ.ಯೋಗೇಶ್ವರ್ ಪರ ಇಂದು ಅಂತಿಮ ಕಸರತ್ತು

ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಐದು ಎಕರೆ ಸಿ.ಎ. ನಿವೇಶನವನ್ನು ಕಾನೂನು ಪ್ರಕಾರವೇ ನೀಡಲಾಗಿದೆ. ನಮ್ಮ ಕುಟುಂಬ ಏರೋಸ್ಪೇಸ್ ಉದ್ಯಮಿಗಳು ಆಗುವುದು ತಪ್ಪೇ? ಬಿಜೆಪಿಯವರು ಪ್ರೇರಣಾ ಟ್ರಸ್ಟ್‌, ರಾಷ್ಟ್ರೋತ್ಥಾನ ಸಂಸ್ಥೆಗೆ ಭೂಮಿ ನೀಡಿರುವ ಬಗ್ಗೆ, ಗೋಮಾಳ ಜಾಗ ನೀಡಿರುವ ಬಗ್ಗೆ ಮಾತನಾಡಲಿ.
- ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ