Asianet Suvarna News Asianet Suvarna News

'ನಾವು ಹೇಳ್ತಿದ್ದುದ್ದನ್ನೇ ಈಶ್ವರಪ್ಪ ಹೇಳಿದ್ದಾರೆ'  ಸಚಿವರ ಬೆಂಬಲಕ್ಕೆ ನಿಂತ ಕೈಪಡೆ!

ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ/  ಬಿಜೆಪಿ ಹೈಕಮಾಂಡ್ ಗೆ  ಈಶ್ವರಪ್ಪ ದೂರು/   ನಾವು ಹೇಳಿದ್ದನೇ ಈಶ್ವರಪ್ಪ ಹೇಳಿದ್ದಾರೆ/  ಕಾಂಗ್ರೆಸ್ ಪ್ರತಿಕ್ರಿಯೆ

complaint against CM BS Yediyurappa Congress Supports minister KS Eshwarappa mah
Author
Bengaluru, First Published Mar 31, 2021, 9:28 PM IST | Last Updated Mar 31, 2021, 9:28 PM IST

ನವದೆಹಲಿ(ಮಾ.  31) ಸಚಿವ ಸ್ಥಾನ ಹಂಚಿಕೆ ವೇಳೆ, ಸಂಪುಟ ವಿಸ್ತರಣೆ ವೇಳೆ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿತ್ತು. ಇದೀಗ ಹಿರಿಯ ಸಚಿವರೊಬ್ಬರು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧವೇ ಹೈಕಮಾಂಡ್ ಗೆ ದೂರು ಸಲ್ಲಿಸಿರುವ ಸುದ್ದಿ ಸ್ಫೋಟವಾಗಿದೆ.

ಯಡಿಯೂರಪ್ಪ ವಿರುದ್ಧ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಗೆ ಸಚಿವ ಕೆಎಸ್ ಈಶ್ವರಪ್ಪದೂರು ನೀಡಿದ ನಂತರ ಕಾಂಗ್ರೆಸ್ ಸಹ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದೆ.

ಗೆಳೆಯನ ವಿರುದ್ಧ ಈಶ್ವರಪ್ಪ ದೂರು ಕೊಡಲು ಕಾರಣವೇನು? 

ಕಳೆದ ಒಂದೂವರೆ ವರ್ಷದಿಂದ ನಾನು ಗ್ರಾಮೀಣಾಭಿವೃದ್ಧಿ ಮಂತ್ರಿ ಆಗಿ ಕೆಲಸ ಮಾಡುತ್ತಿದ್ದೇನೆ. ಒಂದೂವರೆ ವರ್ಷದಿಂದಲೂ ಮುಖ್ಯಮಂತ್ರಿಗಳೇ ನನ್ನ ಗಮನಕ್ಕೆ ತರದೆ, ಇಲಾಖೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು   ಈಶ್ವರಪ್ಪ ಉಲ್ಲೇಖಿಸಿದ್ದರು. 

ಕಾಂಗ್ರೆಸ್ ಏನು ಹೇಳುತ್ತಿತ್ತೋ ಅದೇ ವಿಚಾರವನ್ನು ಯಡಿಯೂರಪ್ಪ ಸಂಪುಟದ ಸಚಿವರೇ ಹೇಳಿದ್ದಾರೆ.  ಕಳ್ಳತನದ ದಾರಿಯಲ್ಲಿ ಅಧಿಕಾರ ಹಿಡಿದಿರುವ ಸರ್ಕಾರ ಇದೆ. ಭ್ರಷ್ಟಾಚಾರದ ಕೂಪವಾಗಿರುವ ಆಡಳಿತವನ್ನು ಒಬ್ಬರೇ ವ್ಯಕ್ತಿ ನಿಯಂತ್ರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣ್ ದೀಪ್ ಸುರ್ಜೇವಾಲಾ ಆರೋಪಿಸಿದ್ದಾರೆ.
 
ಈಶ್ವರಪ್ಪ ಬರೆದ ಪತ್ರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾದರೆ ಅಚ್ಚರಿ ಇಲ್ಲ. ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು ಈಗ ಒಂದು ಹಂತ ಮುಂದಕ್ಕೆ ಹೋಗಿದೆ. 

 

Latest Videos
Follow Us:
Download App:
  • android
  • ios