ನಂದಿ ಧ್ವಜ ಪಡೆದವರು ಚುನಾವಣೆಯಲ್ಲಿ ಗೆಲ್ಲುತ್ತಾರೆಂಬ ನಂಬಿಕೆ, ಧ್ವಜಕ್ಕಾಗಿ ಕಾಂಗ್ರೆಸ್ ಮುಖಂಡರ ಪೈಪೋಟಿ
ತುಮಕೂರಿನ ತಪೋ ಕ್ಷೇತ್ರ ಕಗ್ಗರೆ ಶ್ರೀಸಿದ್ಧಲಿಂಗೇಶ್ವರಸ್ವಾಮಿ ರಥೋತ್ಸವದ ನಂದಿ ಧ್ವಜ ಹರಾಜಿನಲ್ಲಿ ಗೆದ್ದವರೇ ಮುಂದಿನ ಬಾರಿಯ ಶಾಸಕರಾಗಲಿದ್ದಾರೆ ಎಂಬ ಅಚಲ ನಂಬಿಕೆಯಿಂದ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ತೀವ ಪೈಪೋಟಿ ನಡೆದು ನಂದಿ ಧ್ವಜ ದಾಖಲೆ ಬೆಲೆಗೆ ಹರಾಜಾಗಿದೆ.
ವರದಿ : ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ತುಮಕೂರು (ಫೆ.28): ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ತಪೋ ಕ್ಷೇತ್ರ ಕಗ್ಗರೆ ಶ್ರೀಸಿದ್ಧಲಿಂಗೇಶ್ವರಸ್ವಾಮಿ ರಥೋತ್ಸವದ ನಂದಿ ಧ್ವಜ ಹರಾಜಿನಲ್ಲಿ ಗೆದ್ದವರೇ ಮುಂದಿನ ಬಾರಿಯ ಶಾಸಕರಾಗಲಿದ್ದಾರೆ ಎಂಬ ಅಚಲ ನಂಬಿಕೆಯಿಂದ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ತೀವ ಪೈಪೋಟಿ ನಡೆದು ಈ ಬಾರಿಯ ರಥೋತ್ಸವದ ನಂದಿ ಧ್ವಜ ದಾಖಲೆ ಬೆಲೆಗೆ ಹರಾಜಾಗಿದೆ. ಕುಣಿಗಲ್ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಹಾಗೂ ಹಾಲಿ ಶಾಸಕರ ನಡುವೆ ರಾಜಕೀಯ ಪ್ರತಿಷ್ಠೆ ತಿರುವು ಪಡೆದುಕೊಂಡಿದ್ದರಿಂದ ಇದೆ ಮೊದಲ ಬಾರಿಗೆ ಇತಿಹಾಸದಲ್ಲೇ ನಂದಿ ಧ್ವಜ ( ಷಟ್ ಧ್ವಜ ) 16 ಲಕ್ಷ ರೂ.ಗಳಿಗೆ ಹರಾಜಾಗಿದೆ. ಆ ಮೂಲಕ ರಾಜಕೀಯ ಕುತೂಹಲ ಹುಟ್ಟಿಸಿದ್ದ ತಾಲೂಕಿನ ಇತಿಹಾಸ ಪ್ರಸಿದ್ಧ ಕಗ್ಗೆರೆ ತಪೋ ಕ್ಷೇತ್ರದ ಸಿದ್ಧಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವ ಜನಸಾಗರದ ಮಧ್ಯೆ ಜರುಗಿದ್ದು ವಿಶೇಷವಾಗಿತ್ತು.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರದ ನಂದಿ ಧ್ವಜವನ್ನು ಹರಾಜಿನಲ್ಲಿ ಪಡೆಯುವ ಮೂಲಕ ಭಗವಂತನ ಆಶೀರ್ವಾದ ಪಡೆದು ಚುನಾವಣೆಯಲ್ಲಿ ಮೇಲುಗೈ ಸಾಧಿಸುವ ಹಿನ್ನೆಲೆಯಲ್ಲಿ ಈ ಹಿಂದೆ ಎಂದೂ ಆಗದ ಹರಾಜು ಪ್ರಕ್ರಿಯೆ ಈ ಬಾರಿ ಪೈಪೋಟಿಗೆ ಎಡೆಮಾಡಿಕೊಟ್ಟಿತ್ತು.
ಕರ್ತವ್ಯನಿರತ ಟ್ರಾಫಿಕ್ ಎಎಸ್‌ಐಗೆ ಆಟೋ ಡಿಕ್ಕಿ: ಮೆದುಳು ನಿಷ್ಟ್ರಿಯಗೊಂಡು ಸಾವು
ನಂದಿ ಧ್ವಜದ ಹರಾಜು ಪ್ರಕ್ರಿಯೆ ಪ್ರಾರಂಭವಾದಾಗ ಕಾಂಗ್ರೆಸ್‌ನ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ ಹಾಗೂ ಶಾಸಕ ಡಾ.ಎಚ್.ಡಿ.ರಂಗನಾಥ್ ನಡುವೆ ಪೈಪೋಟಿಯ ಹರಾಜು ಶುರುವಾಯಿತು . ಪೈಪೋಟಿ 5 ಲಕ್ಷಕ್ಕೆ ನಿಲ್ಲುತ್ತದೆ , 10 ಲಕ್ಷಕ್ಕೆ ನಿಲ್ಲುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದ ಭಕ್ತರಲ್ಲಿ ಭಾರಿ ಅಚ್ಚರಿ ಮೂಡಿಸಿತು . ಪಟ್ಟು ಬಿಡದೇ ಕೂಗುತ್ತಲೆ ಇದ್ದ ರಾಮಸ್ವಾಮಿ ಗೌಡರ ನಡೆ ಕಂಡ ಭಕ್ತರು ಬೆರಗಾದರು . ಇದಕ್ಕೆ ಸಡ್ಡು ಹೊಡೆದ ಶಾಸಕ ಡಾ.ರಂಗನಾಥ್ ಹಠಕ್ಕೆ ಬಿದ್ದು 16 ಲಕ್ಷ ರೂ . ಹರಾಜು ಕೂಗುವ ಮೂಲಕ ನಂದಿ ಧ್ವಜ ತಮ್ಮದಾಗಿಸಿಕೊಂಡರು.
ವಿಶ್ವಸಂಸ್ಥೆಯಲ್ಲಿ ನಿತ್ಯಾನಂದ ಸಂಚಲನ, UN ಸಭೆಯಲ್ಲಿ ಕೈಲಾಸ ದೇಶದ ಪ್ರತಿನಿಧಿ ಭಾಗಿ, ಭಾರತದ ವಿರುದ್ಧ ದೂರು!
ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲೂ ಡಾ.ರಂಗನಾಥ್ ನಂದಿಧ್ವಜವನ್ನು ಹರಾಜಿನಲ್ಲಿ ಕೂಗಿ ಗೆದ್ದಿದ್ದರು, ಬಳಿಕ ಚುನಾವಣೆಯಲ್ಲೂ ಜಯ ಸಾಧಿಸಿದ್ದರು, ಹರಾಜಿನಲ್ಲಿ ಯಾರಿಗೆ ಧ್ವಜ ಒಲಿಯುತ್ತದೆಯೋ ಅವರಿಗೆ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಕೆ ಸಿದ್ದಲಿಂಗೇಶ್ವರನ ಭಕ್ತರದ್ದು, ಭಕ್ತರ ನಂಬಕೆಯಂತೆ ಇದು ಕೂಡ ನಡೆದಿದೆ.