ಬೆಂಗಳೂರು (ಫೆ. 12):  ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಏನಾದರೂ ಹೆಜ್ಜೆ ಇಟ್ಟಾಗ ಅಗತ್ಯಬಿದ್ದರೆ ಅದಕ್ಕೆ ದಿಲ್ಲಿ ನಾಯಕರ ಮೂಲಕ ಲಗಾಮು ಹಾಕಿಸುತ್ತಿದ್ದವರು ಅನಂತಕುಮಾರ್‌. ಆದರೆ ಅನಂತ್‌ ನಿಧನದ ನಂತರ ರಾಜ್ಯದ ಬಿಜೆಪಿಯಲ್ಲಿ ದಿಲ್ಲಿಗೆ ವಿಷಯ ಮುಟ್ಟಿಸುವ ನಾಯಕರೇ ಇಲ್ಲ.

ಸಂತೋಷ್‌ ಅವರಿಗೆ ಮೋದಿ, ಶಾವರೆಗೆ ಲಿಂಕ್‌ ಇದೆಯಾದರೂ ಅವರು ಮೌನವಾಗಿದ್ದಾರೆ. ಇನ್ನು ಯಡಿಯೂರಪ್ಪ ಅವರಿಗೆ ಆಗಾಗ ಬ್ರೇಕ್‌ ಒತ್ತುತ್ತಿದ್ದ ಜಗದೀಶ್‌ ಶೆಟ್ಟರ್‌ ಮತ್ತು ಈಶ್ವರಪ್ಪ ಈಗ ಯಡಿಯೂರಪ್ಪನವರ ಹಿಂದೆ ಹೋಗುವುದೇ ಲಾಭದಾಯಕ ಎಂದುಕೊಂಡಿದ್ದಾರೆ. ಇನ್ನು ಯಡಿಯೂರಪ್ಪ ಜೊತೆ ಅಷ್ಟಕಷ್ಟೇ ಇದ್ದರೂ ಕೂಡ ಸದಾನಂದಗೌಡ, ಪ್ರಹ್ಲಾದ್‌ ಜೋಷಿ ಮತ್ತು ಅನಂತಕುಮಾರ್‌ ಹೆಗಡೆ ದಿಲ್ಲಿಯವರು ಕರೆದು ಮಾತನಾಡಿದಾಗ ನೋಡೋಣ, ಈಗಲೇ ನಾವ್ಯಾಕೆ ಮಾತನಾಡಬೇಕು ಎಂದು ಸುಮ್ಮನಿದ್ದಾರೆ.

- ಇಂಡಿಯಾ ಗೇಟ್, ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ