ಸತ್ತುಹೋದ ದಲಿತ ವ್ಯಕ್ತಿಯ ಜಮೀನು ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಿಗೆ ವರ್ಗ; ಆರ್. ಅಶೋಕ್
ಮೈಸೂರಿನಲ್ಲಿ ಮೃತ ದಲಿತ ವ್ಯಕ್ತಿಯ ಜಮೀನನ್ನು ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಿಗೆ ಮಾಡಿಕೊಂಡು, ಅದನ್ಮು ಮುಡಾಗೆ ಕೊಟ್ಟು 14 ನಿವೇಶನ ಪಡೆದು ಹಗರಣ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪ ಮಾಡಿದ್ದಾರೆ.
ಬೆಂಗಳೂರು (ಜು.24): ಮೈಸೂರಿನಲ್ಲಿ ಮೃತ ದಲಿತ ವ್ಯಕ್ತಿಯ ಜಮೀನನ್ನು ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಿಗೆ ಮಾಡಿಕೊಂಡು, ಅದನ್ಮು ಮುಡಾಗೆ ಕೊಟ್ಟು 14 ನಿವೇಶನ ಪಡೆದು ಹಗರಣ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ದಲಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ ನಂತರ ಆತನ ನಾಲ್ಕು ಮಕ್ಕಳ ಪೈಕಿ ಒಬ್ಬ ಮಗನಿಂದ ಸಹಿ ಹಾಕಿಸಿಕೊಂಡು ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ಜಮೀನು ಮಾಡಿಕೊಳ್ಳಲಾಗಿದೆ. ಈ ಜಮೀನನ್ನು ಮೂಡಾ ನಿವೇಶನವಾಗಿ ಹಂಚಿಕೆ ಮಾಡಿದ್ದು, ಇದಕ್ಕೆ ಬದಲಿಯಾಗಿ ಸಿದ್ದರಾಮಯ್ಯ ಪತ್ನಿಗೆ ಅಕ್ರಮವಾಗಿ ಬೆಲೆಬಾಳುವ ಪ್ರದೇಶದಲ್ಲಿ 14 ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಮುಡಾ ಹಗರಣದಲ್ಲಿ 3 ಸಾವಿರ ಕೋಟಿ ಹಗರಣ ನಡೆದಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಕರ್ನಾಟಕದ ವಿಧಾನಸಭೆಯಲ್ಲಿ 136 ಶಾಸಕರಿರೋ ಕಾಂಗ್ರೆಸ್ ಪಕ್ಷದ ನಾಯಕರು ಉತ್ತರ ಕೊಡದೇ ಓಡಿ ಹೋಗಿದ್ದಾರೆ. ಇವರು ಫೈನಾನ್ಸ್ ಬಿಲ್ ಕೂಡ ತಂದಿದ್ದಾರೆ. ಅವರಿಗೆ ಧಮ್ಮು, ತಾಖತ್ ಇದ್ರೆ ಮುಡಾದಿಂದ ಪಡೆದ 14 ಸೈಟ್‌ಗಳನ್ನು ನ್ಯಾಯಯುತವಾಗಿ ಪಡೆದಿದ್ದೇವೆ ಅಂತ ಹೇಳಬೇಕಿತ್ತು. ಹೊರಗೆ ಮಾಧ್ಯಮಗಳ ಮುಂದೆ ಹೇಳುವ ಬದಲ ಸದನದಲ್ಲಿ ಹೇಳಬೇಕಿತ್ತು ಎಂದು ಕಿಡಿಕಾರಿದರು.
ಬೆಂಗಳೂರಿನಿಂದ ರಾಮನಗರ ಜಿಲ್ಲೆಗೂ ಮೆಟ್ರೋ ವಿಸ್ತರಣೆ; ಡಿಸಿಎಂ ಡಿ.ಕೆ. ಶಿವಕುಮಾರ್ ತವರು ಜಿಲ್ಲೆಗೆ ಗುಡ್ ನ್ಯೂಸ್
ಮುಂದುವರೆದು, ಇವರು ದಲಿತರ ಜಮೀನು ಲೂಟಿ ಹೊಡೆದಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ದಲಿತರ ಜಮೀನು ಹೊಡೆದುಕೊಂಡಿದ್ದಾರೆ. ಮೈಸೂರಿನಲ್ಲಿ ಜಮೀನು ಹೊಂದಿದ್ದ ದಲಿತ ರೈತ ಸತ್ತಿದ್ದಾನೆ. ಆದರೆ, ದಲಿತನಿಗಿದ್ದ ನಾಲ್ಕು ಮಕ್ಕಳ ಪೈಕಿ ಒಬ್ಬನ ಕೈಯಲ್ಲಿ ಸಹಿ ಹಾಕಿಸಿಕೊಂಡು ಜಮೀನನ್ನು ಪಡೆದುಕೊಂಡಿದ್ದಾರೆ. ಅಂದರೆ ದಲಿತರಿಗೆ ಯಾಮಾರಿಸಿ ಜಮೀನು ಬರೆಸಿಕೊಂಡಿದ್ದಾರೆ ಅಂತ ದೂರು ಕೊಟ್ಟಿರೋ ಕಾಪಿ ಇದೆ. ರಾಜ್ಯದ ಜನ ಇವರ ಭ್ರಷ್ಟಾಚಾರ ನೋಡ್ತಿದ್ದಾರೆ. ದಲಿತರ ಚಾಂಪಿಯನ್ ಈ ಸರ್ಕಾರ, ದಲಿತರ ಬಾಳಿಗೆ ಬೆಂಕಿ ಇಟ್ಟಿದೆ ಎಂದು ವಾಗ್ದಾಳಿ ಮಾಡಿದರು.
ಅಧಿವೇಶನದಲ್ಲಿ ನಿಯಮ 60ರಡಿ ಮುಡಾ ಹಗರಣದ ಬಗ್ಗೆ ಚರ್ಚೆ ಮಾಡಲು ನಿಲುವಳಿ ಸಲ್ಲಿಸಿದ್ದರೂ ನಾವು, ಚರ್ಚೆಗೆ ಅವಕಾಶ ಕೊಡಲಿಲ್ಲ. ಹಗರಣ ಆಗಿದೆ ಅಂತ ಒಪ್ಪಿ, ತನಿಖೆಗೆ ನೀಡಿದ್ದಾರೆ. ಮೊದಲು ಹಗರಣವೇ ಆಗಿಲ್ಲ ಎಂದು ಹೇಳಿದವರು ಈಗ ಹಗರಣ ಆಗಿದೆ ಅಂತಾ ತನಿಖೆಗೆ ಕೊಟ್ಟಿದ್ದಾರೆ. ಮತ್ತೊಂದೆಡೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ರಣಭೀಕರ ಮಳೆಯಿಂದ ಉತ್ತರ ಕನ್ನಡದಲ್ಲಿ ಇನ್ನೂ ತಗ್ಗದ ಸಾವಿನ ಸರಣಿ; ಸ್ಥಳದಲ್ಲೇ ಅಪ್ಪಚ್ಚಿಯಾದ ಸ್ಕೂಟರ್ ಸವಾರ
ಇದರ ಜೊತೆಗೆ, ಬೋವಿ ಹಗರಣ ಕೂಡ ಹಳೆಯದು, ಜೈಲಿಗೆ ಸೇರಿದ್ದಾರೆ. ಆದರೆ, ಸ್ಪೀಕರ್ ಅದನ್ನ ಚರ್ಚೆ ಮಾಡಲು ಯಾಕೆ ಅವಕಾಶ ಕೊಟ್ಟರು ತಿಳಿಯುತ್ತಿಲ್ಲ. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ. ಕಾಂಗ್ರೆಸ್ ಸರ್ಕಾರ ಹೇಡಿಯ ರೀತಿ ಫಲಾಯನ ಮಾಡ್ತಿದೆ. ಅತಿರಥ ಮಹಾನಾಯಕರೆಲ್ಲಾ ಬಾಯಿ ಮುಚ್ಚಿ ಕುಳಿತಿದ್ದಾರೆ. ಸಿಎಂ ಬೆಂಬಲಕ್ಕೆ ಯಾರೂ ನಿಲ್ತಿಲ್ಲ. ಇದನ್ನ ಸದನದಲ್ಲಿ ಹೇಳಿದ್ರೆ ಮರ್ಯಾದೆ ಹೋಗುತ್ತೆ ಎಂದು ಸ್ಪೀಕರ್ ಯು.ಟಿ. ಖಾದರ್ ಶೆಲ್ಟರ್ ಸೇರಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದರು.