Asianet Suvarna News Asianet Suvarna News

ತುಂಬಿದ ಸಭೆಯಲ್ಲಿ ಕೈ ಮುಗಿದು ಎಚ್.ಕೆ.ಪಾಟೀಲರನ್ನು ಗೆಲ್ಲಿಸಿ ಎಂದ ಸಿದ್ದರಾಮಯ್ಯ

ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಕರ್ನಾಟಕ ಸಂಭ್ರಮ-50 ಕರ್ನಾಟಕ ಏಕೀಕರಣವಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಹಲವಾರು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು.
 

CM Siddaramaiah Talks Over Minister HK Patil At Gadag gvd
Author
First Published Nov 5, 2023, 7:03 AM IST

ಗದಗ (ನ.05): ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಕರ್ನಾಟಕ ಸಂಭ್ರಮ-50 ಕರ್ನಾಟಕ ಏಕೀಕರಣವಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಹಲವಾರು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ವಿಶೇಷ ಶ್ರಮದಿಂದಾಗಿ ಗದಗ ನಗರದ ಚಿತ್ರಣವೇ ಬದಲಾಗಿ ಹೋಗಿದ್ದು, ಅವಳಿ ನಗರ ಸಂಪೂರ್ಣ ಕನ್ನಡಮಯವಾಗಿತ್ತು. ಬಂದಿದ್ದ ಸಾವಿರಾರು ಮನಸ್ಸಗಳನ್ನು ಮಾತೃ ಭಾಷೆಗೆ ಮತ್ತಷ್ಟು ಹತ್ತಿರಗೊಳಿಸುವ ಕಾರ್ಯಕ್ಕೆ ವೇದಿಕೆ ನಾಂದಿ ಹಾಡಿತು.

ಅಂದು ಕೆಎಚ್ಪಿ-ಇಂದು ಎಚ್ಕೆಪಿ: 1973ರಲ್ಲಿ ದೇವರಾಜ ಅರಸು ಸಿಎಂ ಆಗಿದ್ದರು, ಕೆ.ಎಚ್. ಪಾಟೀಲರು ಮಂತ್ರಿಯಾಗಿದ್ದರು. ಅರಸು ಮೈಸೂರು ಮತ್ತು ನಾನು ಇಬ್ಬರೂ ಮೈಸೂರು ಜಿಲ್ಲೆಯವರು ಹೇಗಿದೆ ನೋಡಿ, ಇದು ಕಾಕತಾಳೀಯ ಎನ್ನಬಹುದು ಆದರೆ ಎಚ್.ಕೆ.ಪಾಟೀಲರ ಕುಟುಂಬ ರಾಜ್ಯದ ಅಭಿವೃದ್ಧಿಗೆ ನೀಡಿದ ಕೊಡುಗೆ ಮಾತ್ರ ಅಪಾರ ಹಾಗಾಗಿಯೇ ಅವರಿಗೆ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದು ಪಾಟೀಲ ಕುಟುಂಬದ ಸಾರ್ವಜನಿಕ ಸೇವೆಯನ್ನು ಸಿಎಂ ಸಿದ್ದರಾಮಯ್ಯ ಸ್ಮರಿಸಿಕೊಂಡರು.

ಬಿಎಸ್‌ವೈದು ಗುಲಾಮಿ ಮನಸ್ಥಿತಿ: ಸಿದ್ದರಾಮಯ್ಯ ಕಿಡಿ

ಐತಿಹಾಸಿಕ ಕ್ಷಣ ಮರು ಸೃಷ್ಟಿಸಿದ ಎಚ್ಕೆ: 1973ರ ನ. 3ರಂದು ನಡೆದ ಕರ್ನಾಟಕ ನಾಮಕರಣ ಸಂಭ್ರಮದ ಕಾರ್ಯಕ್ರಮವನ್ನು 2023ರ ನ. 3ರಂದು 50 ವರ್ಷದ ಸುವರ್ಣ ಸಂಭ್ರಮವನ್ನು ಪುನರಪಿಯಾಗಿ ಆಚರಿಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಗದಗ ನಗರ ಸಾಕ್ಷಿಯಾಯಿತು. ಜೊತೆಗೆ ಗಮನಾರ್ಹ ಸಂಗತಿ ಎಂದರೆ 1973ರ ನ. 3ರಂದು ಸಾಗಿದ ಮೆರವಣಿಗೆಯ ಹಾದಿಯಲ್ಲಿಯೇ 2023ರ ಮೆರವಣಿಗೆ ಸಾಗಿದ್ದು ಕೂಡಾ ವಿಶೇಷವಾಗಿತ್ತು. ಅಂದು ಕಾರ್ಯಕ್ರಮದ ಸ್ಥಳದಲ್ಲಿಯೇ ಇಂದೂ ಕೂಡಾ ಕಾರ್ಯಕ್ರಮ ಆಯೋಜನೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಐತಿಹಾಸಿಕ ಕ್ಷಣವನ್ನು ಮರು ಸೃಷ್ಟಿಸಿದ್ದರು.

ಕೈ ಮುಗಿದು ವಿನಂತಿಸಿದರು: ತಮ್ಮ ಭಾಷಣದ ವೇಳೆಯಲ್ಲಿ ಸಿಎಂ ಸಿದ್ದರಾಮಯ್ಯ ಎಚ್.ಕೆ. ಪಾಟೀಲರು ಗದಗ ಜಿಲ್ಲೆಗೆ ಮಾಡಿದ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳನ್ನು ನೆನಪು ಮಾಡಿಕೊಳ್ಳುತ್ತಾ, ನಾನು ಎರಡು ಬಾರಿ ಮುಖ್ಯಮಂತ್ರಿಯಾದರೂ ನನ್ನ ಜಿಲ್ಲೆಗೆ ಅಷ್ಟೊಂದು ಕೆಲಸ ಮಾಡಲು ಆಗಿಲ್ಲ. ಅಷ್ಟೊಂದು ಅಭಿವೃದ್ಧಿ ಕಾರ್ಯಗಳನ್ನು ಅವರು ಮಾಡಿದ್ದಾರೆ. ಗದಗ ಜನ ಅವರು ನಾಮಪತ್ರ ಸಲ್ಲಿಸಿ ಮನೆಯಲ್ಲಿ ಕುಳಿತರೂ ಅವರನ್ನು ಗೆಲ್ಲಿಸಬೇಕು ಎಂದು ವೇದಿಕೆಯಲ್ಲಿಯೇ ಕೈ ಮುಗಿದು ವಿನಂತಿಸಿದರು.

ಇನ್ನೂ ನಿಲ್ಲದ ಸಿಎಂ ಚರ್ಚೆ: ಹೈಕಮಾಂಡ್ ಸೂಚನೆಗೂ ಡೋಂಟ್‌ಕೇರ್!

ಗದಗ-ಬೆಟಗೇರಿ ನೀರು ಪೂರೈಕೆಗೆ ಅಗತ್ಯವಿದ್ದರೆ ಹಣ: ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಪಕಗೊಳಿಸಲು ಈಗಾಗಲೇ 61 ಕೋಟಿ ನೀಡಿದ್ದೇವೆ. ಅಗತ್ಯಬಿದ್ದರೆ ಮತ್ತಷ್ಟು ಹಣ ಕೊಡಲು ನಮ್ಮ ಸರ್ಕಾರ ಸಿದ್ದವಿದೆ ಎಂದು ಭರವಸೆ ನೀಡಿದರು.

Follow Us:
Download App:
  • android
  • ios