ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು. ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ಬೆಂಗಳೂರು (ಸೆ.01): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು. ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಸಿದ್ದರಾಮಯ್ಯ, ನಾರಾಯಣಗುರು ಜಯಂತಿ ‌ಮಾಡಲು ನಾನು ಆದೇಶ ಮಾಡಿದ್ದೆ. ಅಂದಿನಿಂದ ಜಯಂತೋತ್ಸವ ನಿರಂತರವಾಗಿ ನಡೆಯುತ್ತಿದೆ. ಬುದ್ದ, ಬಸವ, ಅಂಬೇಡ್ಕರ್ ಧಾರ್ಮಿಕ ಸುಧಾರಣೆ ಮಾಡಿದ್ರು. 

ನಾರಾಯಣ ಗುರುಗಳು ಕೂಡ ಕಂದಾಚಾರ ವಿರೋಧಿಸಿದ್ರು. ದೇವರ ಹೆಸರಲ್ಲಿ ಜಾತಿ ಮಾಡಿದ್ರು, ಆಗಲೂ ಇದ್ರು ಈಗಲೂ ಇದ್ದಾರೆ. ನಾನು. ಕೇರಳದ ಒಂದು ದೇವಸ್ಥಾನಕ್ಕೆ ಹೋಗಿದ್ದೆ. ಬಟ್ಟೆ ಬಿಚ್ಚಿ ಒಳಗೆ ಬನ್ನಿ ಅಂದ್ರು. ನಾನು ದೇವಸ್ಥಾನ ಒಳಗೆ ಹೋಗಲೇ ಇಲ್ಲ.ಕೆಲವರು ಬಟ್ಟೆ ಬಿಚ್ಚದೆಯೇ ಕೆಲವರು ಒಳಗೆ ಹೋಗ್ತಾರೆ. ಕುವೆಂಪು ಹೇಳಿದಂತೆ ವಿಶ್ವ ಮಾನವರಾಗಬೇಕು. ಅಲ್ಪ ಮಾನವರಾಗಿ ನಾವು ಬದುಕಬಾರದು ಎಂದರು. 

ಸುಪ್ರೀಂಕೋರ್ಟ್​ನಲ್ಲಿ ನಾಳೆ ಕಾವೇರಿ ನೀರು ವಿಚಾರಣೆ ಅನುಮಾನ?: ಯಾಕೆ ಗೊತ್ತಾ

ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ನಾರಾಯಣ ಗುರುಗಳ ಬಗ್ಗೆ ಪಠ್ಯ ಪುಸ್ತಕದಲ್ಲಿ ಸೇರಿಸಬೇಕು. ಈ ಬಗ್ಗೆ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದ್ವಿ. ಅದನ್ನು ಸಹಕಾರ ‌ಮಾಡಬೇಕು. ಈಗಾಗಲೇ ನಿಗಮ ಮಂಡಳಿ ಮಾಡಲಾಗಿದೆ. ಇನ್ನಷ್ಟು ಬೇಡಿಕೆ ನಮ್ಮ ಸಮಾಜದ್ದು ಇದೆ. ಅವುಗಳನ್ನು ಈಡೇರಿಸಲು ಸಿಎಂಗೆ ಮನವಿ ಮಾಡಿದರು. ಸಿಎಂ ನನ್ನ ಮೇಲೆ ನಂಬಿಕೆ ಇಟ್ಟು ಶಿಕ್ಷಣ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ. ಪಠ್ಯದಲ್ಲಿ ಕೆಲವೊಂದು ಬದಲಾವಣೆ ಮಾಡಲು ನನಗೆ ಅವಕಾಶ ನೀಡಿದರು. ಅವರೇ ಖುದ್ದು ಮುತುವರ್ಜಿ ವಹಿಸಿ ನನಗೆ ಶಿಕ್ಷಣ ಇಲಾಖೆಯ ಖಾತೆ ನೀಡಿದ್ದಾರೆ. ಪಠ್ಯದಲ್ಲಿ ಒಳ್ಳೆಯತನ ತರಬೇಕೆಂದು ಅವಕಾಶ ನೀಡಿದ್ದಾರೆ. 

ದತ್ತಪೀಠವನ್ನ ಬೇಲಿ ರಹಿತ ಮಾಡುವುದೇ ನಮ್ಮ ಸಂಕಲ್ಪ: ಶೋಭಾ ಕರಂದ್ಲಾಜೆ

ಕೆಲವೊಂದು ಪಠ್ಯದಲ್ಲಿ ಬದಲಾವಣೆ ಮಾಡಬೇಕಾಯಿತು. ನಮ್ಮ ತಂದೆ ಬಂಗಾರಪ್ಪ ಮನೆಗಳಿಗೆ ಬೆಳಕು ನೀಡಿದ್ದರು. ಈಗ ಸಿಎಂ ಸಿದ್ದರಾಮಯ್ಯ ರಾಜ್ಯದ ಎಲ್ಲಾ ಮನೆಗಳಿಗೆ ಬೆಳಕು‌ ನೀಡಿದ್ದಾರೆ. ನಾರಾಯಣ ಗುರುಗಳ ಜಯಂತಿಯನ್ನ ಸರ್ಕಾರದ ವತಿಯಿಂದಲೇ ಆಚರಿಸಬೇಕೆಂದು ಒತ್ತಾಯಿಸಿದ್ದೆ. ಅದನ್ನ ಮುಖ್ಯಮಂತ್ರಿಗಳು ಮಾಡುತ್ತಾರೆ ಎಂದರು. ಇನ್ನು ಕಾರ್ಯಕ್ರಮದಲ್ಲಿ ಸಚಿವ ಶಿವರಾಜ್ ತಂಗಡಗಿ, ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್‌, ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ, ಬಿಲ್ಲವ ಸಂಘದ ವೀರ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.