Asianet Suvarna News Asianet Suvarna News

ರಾಜೀನಾಮೆ ಕೇಳಲು ಬಿಎಸ್‌ವೈಗೆ ನಾಚಿಕೆ ಆಗಲ್ವಾ?: ಸಿದ್ದರಾಮಯ್ಯ

ಮಾನ ಮರ್ಯಾದೆ ಇದ್ದಿದ್ದರೆ ಅವರು ರಾಜಕೀಯ ನಿವೃತ್ತಿ ಪಡೆಯಬೇಕಿತ್ತು‌‌. ಅವರ ಮೇಲೆ ಈಗಾಗಲೇ 18 ಹಗರಣ ಇದೆ. ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಹಗರಣಗಳಿಗೆ ತಡೆಯಾಜ್ಞೆ ತಂದಿದ್ದಾರೆ. ಇವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಇವರಿಗೆ ನಾಚಿಕೆ ಆಗಲ್ವಾ? ಎಂದು ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ 

cm Siddaramaiah slams former cm bs yediyurappa grg
Author
First Published Aug 10, 2024, 5:19 AM IST | Last Updated Aug 12, 2024, 11:51 AM IST

ಮೈಸೂರು(ಆ.10): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 82 ವರ್ಷದ ಇಳಿ ವಯಸ್ಸಿನಲ್ಲಿ ಅಪ್ತಾಪ್ತ ಬಾಲಕಿ ಮೇಲೆ ಲೈಂಗಿಕ ಶೋಷಣೆ ಮಾಡಿರುವ ಪೋಕ್ಸೊ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಹಲವು ಹಗರಣ ಮಾಡಿ ಈಗ ಪೋಕ್ಸೋ ದೋಷಾರೋಪ ಪಟ್ಟಿ ಹಾಕಿಸಿಕೊಂಡಿರುವ ಇವರಿಗೆ ನನ್ನ ರಾಜೀನಾಮೆ ಕೇಳುವ ನೈತಿಕತೆ ಎಲ್ಲಿದೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಜನಾಂದೋಲನ ಸಮಾವೇಶದಲ್ಲಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಅವರು, ಮಾನ ಮರ್ಯಾದೆ ಇದ್ದಿದ್ದರೆ ಅವರು ರಾಜಕೀಯ ನಿವೃತ್ತಿ ಪಡೆಯಬೇಕಿತ್ತು‌‌. ಅವರ ಮೇಲೆ ಈಗಾಗಲೇ 18 ಹಗರಣ ಇದೆ. ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಹಗರಣಗಳಿಗೆ ತಡೆಯಾಜ್ಞೆ ತಂದಿದ್ದಾರೆ. ಇವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಇವರಿಗೆ ನಾಚಿಕೆ ಆಗಲ್ವಾ? ಎಂದು ಕಿಡಿಕಾರಿದರು.

ಸಾಲ ತೀರಿಸಲಾಗದೆ ಮನೆ ಮಾರಿದ್ದೇನೆ, ನನಗೆ ಹಣದ ಮೋಹವಿಲ್ಲ: ಸಿದ್ದರಾಮಯ್ಯ ಭಾವುಕ ಟ್ವೀಟ್‌

ಯಡಿಯೂರಪ್ಪ ಅವರು ಚೆಕ್ ನಲ್ಲಿ ಲಂಚ ಪಡೆದು ಜೈಲಿಗೆ ಹೋದರು. ನಾನು ಯಡಿಯೂರಪ್ಪ ಅವರಂತೆ ಡಿನೋಟಿಫೀಕೆಷನ್ ಮಾಡಿದ್ದೀನಾ? ಚೆಕ್‌ನಲ್ಲಿ ಲಂಚದ ಹಣ ಪಡೆದಿದ್ದೀನಾ? ಅಕ್ರಮಗಳು ಮಾಡಿದ್ದೇನಾ? ಎಂದು ಪ್ರಶ್ನಿಸಿದರು.
ಅವರ ಮಗ ವಿಜಯೇಂದ್ರ ಸಹ ಹಲವು ಹಗರಣಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ವಿಜಯೇಂದ್ರ ಸಾವಿರಾರು ಕೋಟಿ ಹೊಡೆದಿದ್ದಾರೆ ಎಂದು ಅವರದ್ದೇ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಇವರೆಲ್ಲರೂ ಜೈಲಿಗೆ ಹೋಗಬೇಕಾದವರು ಎಂದರು.

Latest Videos
Follow Us:
Download App:
  • android
  • ios