Asianet Suvarna News Asianet Suvarna News

ಕುರಿ ಕಾಯೋನ ಮಗ 2ನೇ ಬಾರಿಗೆ ಸಿಎಂ ಆಗಿಬಿಟ್ನಲ್ಲ ಅಂತ ಹೊಟ್ಟೆ ಉರಿ: ವಿಪಕ್ಷಗಳ ವಿರುದ್ಧ ಹರಿಹಾಯ್ದ ಸಿದ್ದು

ಕರ್ನಾಟಕ ಹಸಿವು ಮುಕ್ತ ರಾಜ್ಯ ಆಗಬೇಕು ಅಂತ ಅನ್ನಭಾಗ್ಯ ಯೋಜನೆ ಮಾಡಿದೆ. ಬಡವರಿಗೆ ಅನುಕೂಲವಾಗಲಿ ಅಂತ ಇಂದಿರಾ ಕ್ಯಾಂಟೀನ್ ಮಾಡಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ‌ಆಗಿ ಏನು ಮಾಡಲಿಲ್ಲ. ಅದಕ್ಕೆ ಹೇಳುತ್ತಾರೆ ಕೊಟ್ಟ ಕುದುರೆ ಏರದವರು ವೀರರೂ ಅಲ್ಲ. ಧೀರರೂ ಅಲ್ಲ ಎಂದು ಸಮ್ಮಿಶ್ರ ಸರ್ಕಾರದ ಕಥೆ ಹೇಳಿದ ಸಿಎಂ ಸಿದ್ದರಾಮಯ್ಯ

CM Siddaramaiah Slams BJP JDS Leaders grg
Author
First Published Oct 5, 2024, 4:22 PM IST | Last Updated Oct 5, 2024, 4:22 PM IST

ರಾಯಚೂರು(ಅ.05): ಮಾನ್ವಿ ಮತಕ್ಷೇತ್ರದ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಮಾಡಿದ್ದೇವೆ. ಹಂಪಯ್ಯ ನಾಯಕ ಶಾಸಕರಾದ ಬಳಿಕ 405 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಈ ಸರ್ಕಾರ ಅಭಿವೃದ್ಧಿ ಪರವಾಗಿದೆ. ವಿರೋಧ ಪಕ್ಷಗಳು ಸುಮ್ಮನೇ ಆರೋಪ ಮಾಡುತ್ತಾರೆ. ಸರ್ಕಾರದ ಬಳಿ ದುಡ್ಡು ಇಲ್ಲ ಅಂದರೆ 1,695 ಕೋಟಿ ರೂ. ರಸ್ತೆಗೆ ಉದ್ಘಾಟನೆ ‌ಮಾಡಲು ಆಗುತ್ತಿರಲಿಲ್ಲ. ಇದನ್ನ ಸಹಿಸಿಕೊಳ್ಳಲು ಆಗದೇ ನನ್ನ ಮೇಲೆ ಸುಳ್ಳು ಆರೋಪ ಮಾಡಲು ಶುರು ಮಾಡಿದ್ದಾರೆ. ಈ ಸ್ವಾಭಿಮಾನ ಸಮಾವೇಶ ಮಾಡಲು ರವಿ ಬೋಸರಾಜು ಮತ್ತು ಅವರ ತಂಡ. ರವಿ ಬೋಸರಾಜು ಮತ್ತು ಇತರೆ ಶಾಸಕರಿಗೆ ನನ್ನ ಧನ್ಯವಾದಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಇಂದು(ಶನಿವಾರ) ಜಿಲ್ಲೆಯ ಮಾನ್ವಿಯಲ್ಲಿ ನಡೆದ ಕಾಂಗ್ರೆಸ್ ಸ್ವಾಭಿಮಾನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ದೇವರಾಜ್ ಅರಸು ಬಿಟ್ಟರೇ ನಾನು ಮಾತ್ರ ಐದು ವರ್ಷ ಪೂರ್ಣಗೊಳಿಸಿದ್ದೇನೆ. ಅಷ್ಟೇ ಅಲ್ಲ ಭಾಗ್ಯಗಳ ಸರಮಾಲೆಯನ್ನೇ ಹೇಳಿದ್ದಾರೆ. 

ಉಡಾಫೆ ಮಾತು ಬಿಟ್ಟು ಜನ ಕೊಟ್ಟಿರೋ ಅಧಿಕಾರ ಸರಿಯಾಗಿ ನಿಭಾಯಿಸಲಿ: ಹೆಚ್‌ಡಿಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ಕಿಡಿ

ಕರ್ನಾಟಕ ಹಸಿವು ಮುಕ್ತ ರಾಜ್ಯ ಆಗಬೇಕು ಅಂತ ಅನ್ನಭಾಗ್ಯ ಯೋಜನೆ ಮಾಡಿದೆ. ಬಡವರಿಗೆ ಅನುಕೂಲವಾಗಲಿ ಅಂತ ಇಂದಿರಾ ಕ್ಯಾಂಟೀನ್ ಮಾಡಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ‌ಆಗಿ ಏನು ಮಾಡಲಿಲ್ಲ. ಅದಕ್ಕೆ ಹೇಳುತ್ತಾರೆ ಕೊಟ್ಟ ಕುದುರೆ ಏರದವರು ವೀರರೂ ಅಲ್ಲ. ಧೀರರೂ ಅಲ್ಲ ಎಂದು ಸಮ್ಮಿಶ್ರ ಸರ್ಕಾರದ ಕಥೆ ಹೇಳಿದ್ದಾರೆ ಸಿಎಂ ಸಿದ್ದರಾಮಯ್ಯ. 

3 ವರ್ಷ 10 ತಿಂಗಳು ‌ಬಿಜೆಪಿಯವರು ಏನು ಮಾಡಲಿಲ್ಲ. ರಾಜ್ಯ ದಿವಾಳಿ ಮಾಡಿ 2023ರಲ್ಲಿ ಸೋತರು. 2023ರಲ್ಲಿ ನೀವು ಆಶಿರ್ವಾದ ಮಾಡಿ 136 ಸ್ಥಾನ ನೀಡಿದ್ರಿ. ಬಿಜೆಪಿ ಯಾವಾಗಲೂ ಜನರ ಆರ್ಶಿವಾದದಿಂದ ಅಧಿಕಾರಕ್ಕೆ ಬಂದಿಲ್ಲ. ವಾಮಾಮಾರ್ಗದ ಮುಖಾಂತರವೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯದ 7 ಕೋಟಿ ಜನರಲ್ಲಿ 3 ಕೋಟಿ ಜನರು ಬಸ್ ನಲ್ಲಿ ಫ್ರೀಯಾಗಿ ಪ್ರಯಾಣ ಮಾಡುತ್ತಿದ್ದಾರೆ. 300 ಕೋಟಿ ಟ್ರಿಪ್ ಗಳಲ್ಲಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ. 5 ಕೆಜಿ ಅಕ್ಕಿಗೆ ತಲುಗುವ ಹಣ ಫಲಾನುಭವಿಗಳ ಖಾತೆಗೆ 170 ರೂ.‌ಜಮಾ ಮಾಡುತ್ತಿದ್ದೇವೆ. ನಾವು ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಕೊಟ್ಟಿದ್ದೆವು. ಇದನ್ನ ತಡೆದುಕೊಳ್ಳಲು ಬಿಜೆಪಿ ಆಗುತ್ತಿಲ್ಲ ಎಂದು ಬಿಜೆಪಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. 

ನನ್ನ ಹೆಂಡತಿ ಯಾವತ್ತು ‌ರಾಜಕೀಯಕ್ಕೆ ಬಂದವಳು ಅಲ್ಲ. ಅಂತವಳನ್ನ ಬೀದಿಗೆ ತಂದರಲ್ಲ. ನಾನು ಏನ್ ತಪ್ಪು ಮಾಡಿದ್ದೇನೆ. ನನ್ನ ಮೇಲೆ ಕಪ್ಪು ‌ಚುಕ್ಕಿ ಇಡಬೇಕು, ರಾಜಕೀಯವಾಗಿ ಹಣಿಯಬೇಕು. ಕುರಿ ಕಾಯುವನ ಮಗ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿಬಿಟ್ಟಲ್ಲ ಅಂತ ಹೊಟ್ಟೆ ಉರಿ. ಅಶೋಕಗೆ ಹೊಟ್ಟೆ ಉರಿ, ಯಡಿಯೂರಪ್ಪಗೆ ಹೊಟ್ಟೆ ಉರಿ, ಯಡಿಯೂರಪ್ಪ ಮಗನಿಗೆ ಹೊಟ್ಟೆ ಉರಿ, ಕುಮಾರಸ್ವಾಮಿಗೆ ಹೊಟ್ಟೆ ಉರಿ ಎಂದು ವಿಪಕ್ಷಗಳ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. 

Latest Videos
Follow Us:
Download App:
  • android
  • ios