Asianet Suvarna News Asianet Suvarna News

ದೇವರಾಜು ಅರಸು ದಾರಿಯಲ್ಲಿ ಸಿಎಂ ಸಿದ್ದರಾಮಯ್ಯ: ಶಾಸಕ ಆನಂದ್‌

ರೈತರು, ಎಲ್ಲ ಹಿಂದುಳಿದ ವರ್ಗಗಳ, ಶೋಷಿತರ, ದಲಿತರ ಧ್ವನಿಯಾಗಿ ಸಾಮಾಜಿಕ ನ್ಯಾಯ ನೀಡಿದ ದಿ.ದೇವರಾಜು ಅರಸು ಅವರ ದಾರಿಯಲ್ಲಿ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸಾಗುತ್ತಿದ್ದಾರೆ ಎಂದು ಶಾಸಕ ಕೆ.ಎಸ್‌.ಆನಂದ್‌ ಹೇಳಿದರು. 

CM Siddaramaiah on the way to Devaraju Arasu Says KS Anand gvd
Author
First Published Aug 21, 2023, 4:48 PM IST

ಕಡೂರು (ಆ.21): ರೈತರು, ಎಲ್ಲ ಹಿಂದುಳಿದ ವರ್ಗಗಳ, ಶೋಷಿತರ, ದಲಿತರ ಧ್ವನಿಯಾಗಿ ಸಾಮಾಜಿಕ ನ್ಯಾಯ ನೀಡಿದ ದಿ.ದೇವರಾಜು ಅರಸು ಅವರ ದಾರಿಯಲ್ಲಿ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸಾಗುತ್ತಿದ್ದಾರೆ ಎಂದು ಶಾಸಕ ಕೆ.ಎಸ್‌.ಆನಂದ್‌ ಹೇಳಿದರು. ಬಿಸಿಎಂ ಇಲಾಖೆ ಮತ್ತು ತಾಲೂಕು ಆಡಳಿತದಿಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರಸುರವರು ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರ. ಇಂದಿರಾಗಾಂಧಿ ಅವರ 20 ಅಂಶಗಳ ಕಾರ್ಯಕ್ರಮವನ್ನು ರಾಜ್ಯದಲ್ಲಿ ಅನುಷ್ಟಾನಗೊಳಿಸಿದ ಕೀರ್ತಿ ಅರಸುರವರಿಗೆ ಸೇರುತ್ತದೆ. 

ಉಳುವವನೇ ಒಡೆಯ ಎಂಬ ಪರಿಕಲ್ಪನೆಯಲ್ಲಿ ರಾಜ ಮಹಾರಾಜರು, ಗೌಡರು, ಶಾನುಭೋಗರ ಬಳಿಯಿದ್ದ ಭೂಮಿಯನ್ನು ರೈತರಿಗೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಿಸಿಎಂ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳ ಮೂಲಕ ವಸತಿ ನಿಲಯಗಳನ್ನು ತೆರೆದು ಲಕ್ಷಾಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿದ್ದರು. ಇಂದಿರಾ ಗಾಂಧಿಯವರ ರಾಜಕೀಯ ಭವಿಷ್ಯ ಮಸುಕಿನ ಅಂಚಿನಲ್ಲಿದ್ದ ಸಮಯದಲ್ಲಿ ನಮ್ಮ ಚಿಕ್ಕಮಗಳೂರಿಗೆ ಕರೆ ತಂದು ಗೆಲ್ಲಿಸಿ ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಿದ ಕೀರ್ತಿ ಅರಸು ರವರಿಗೆ ಸಲ್ಲುತ್ತದೆ ಎಂದರು.

ರಾಜೀವ್‌ ಗಾಂಧಿ ದೇಶದ ಭವಿಷ್ಯವನ್ನು ರೂಪಿಸಿದ ಮಹಾನ್‌ ನಾಯಕ: ಶಾಸಕ ತಮ್ಮಯ್ಯ

ದೇವರಾಜು ಅರಸು ಅವರ ಹಾದಿಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯವರು ಸಾಗುತ್ತಿದ್ದು ಬಡವರ, ಹಿಂದುಳಿದವರ,ದೀನ ದಲಿತರ ಬದುಕು ಕಟ್ಟಿಕೊಡಲು ಅನ್ನಭಾಗ್ಯ, ಕ್ಷೀರ ಭಾಗ್ಯಗಳಲ್ಲದೆ ಇತ್ತೀಚಿನ 5 ಗ್ಯಾರಂಟಿಗಳಿಂದ ಮಹಿಳೆಯರು, ವಿದ್ಯಾವಂತ ಯುವಕರು, ಬಡವರ ಬದುಕು ಹಸನಾಗಿಸಲು ಶ್ರಮಿಸುತ್ತಿದ್ದಾರೆ. ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಮಾತನಾಡಿ, ನಮ್ಮ ಸಂವಿಧಾನವನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ರಚಿಸಿ ಜಾರಿಗೊಳಿಸಿದರೆ ಅದರಲ್ಲಿನ ಅನೇಕ ಕಾಯಿದೆಗಳನ್ನು ದೇವರಾಜ ಅರಸು ಜಾರಿಗೆ ತಂದು ಹಿಂದುಳಿದವರ ಶೋಷಿತರ ಪರವಾಗಿ ನ್ಯಾಯ ನೀಡಿದ ಧೀಮಂತ ನಾಯಕರು ಎಂದು ಸ್ಮರಿಸಿದರು.

ಜಿಪಂ ಮಾಜಿ ಸದಸ್ಯ ಶರತ್‌ಕೃಷ್ಣಮೂರ್ತಿ, ಕೆ.ಜಿ.ಶ್ರೀನಿವಾಸಮೂರ್ತಿ, ಬಿ.ಟಿ.ಗಂಗಾಧರನಾಯ್ಕ, ನಿವೃತ್ತ ಬಿಸಿಎಂ ಅಧಿಕಾರಿ ಕಾಶೀನಾಥ್‌, ಪುರಸಭೆ ಸದಸ್ಯ ತೋಟದ ಮನೆ ಮೋಹನ್‌, ಶಿಕ್ಷಕ ವಿಜಯಕುಮಾರ್‌, ದಲಿತ ಮುಖಂಡ ಮಂಜಪ್ಪ, ದೇವರಾಜು ಅರಸು ಕುರಿತು ಮಾತನಾಡಿದರು. ತಹಸೀಲ್ದಾರ್‌ ಕವಿರಾಜ್‌, ತಾಲೂಕು ಬಿಸಿಎಂ ಅಧಿಕಾರಿ ಮಂಜುನಾಥ್‌, ಪುರಸಭೆ ಮುಖ್ಯಾಧಿಕಾರಿ ಕೆ. ರುದ್ರೇಶ್‌, ಬಿಸಿಎಂ ಇಲಾಖೆ ಅನಿಲ್‌, ದೇವರಾಜ್‌, ಪ್ರೇಮ, ಮಮತಾ, ಮಂಜುನಾಥ್‌, ಪ್ರದೀಪ್‌, ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

ದೇಶದಲ್ಲೇ ರಾಜ್ಯ ಶೀಘ್ರ ನಂ.1 ಆಗಲಿದೆ: ಗೃಹ ಸಚಿವ ಪರಮೇಶ್ವರ್‌

ದೇವರಾಜು ಅರಸು ಜಯಂತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತಿತ್ತು. ವಿದ್ಯಾರ್ಥಿಗಳು, ಹಾಸ್ಟೆಲ್‌ ವಾರ್ಡನ್‌ಗಳು ಬಿಟ್ಟರೆ ಪ್ರಮುಖ ಇಲಾಖೆಗಳು ಸೇರಿದಂತೆ ಅಧಿಕಾರಿಗಳು ಹಾಜರಾಗಿರಲಿಲ್ಲ. ಈ ಬಗ್ಗೆ ಶಾಸಕ ಕೆ.ಎಸ್‌. ಆನಂದ್‌ ಅಸಮಾಧಾನ ವ್ಕಕ್ತಪಡಿಸಿದರು. ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದ್ದು, ಆದರೆ ಇದು ಕೇವಲ ಬಿಸಿಎಂ ಇಲಾಖೆ ಅಧಿಕಾರಿ ನೌಕರರಿಗೆ ಸಂಬಂಧಿಸಿದ ಕಾರ್ಯಕ್ರಮವೇ ಎಂಬಂತಿತ್ತು.

Follow Us:
Download App:
  • android
  • ios