Asianet Suvarna News Asianet Suvarna News

8 ವರ್ಷಗಳ ಮುನಿಸು ಶಮನ: ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಮನೆಗೆ ಸಿದ್ದರಾಮಯ್ಯ ಭೇಟಿ..!

ಶ್ರೀನಿವಾಸ ಪ್ರಸಾದ್ ಅವರಿಗಾಗಿ ಕೊಂಚವು ಬೇಸರ ಮಾಡಿಕೊಳ್ಳದೆ 10 ನಿಮಿಷ ಕಾದು ಕುಳಿತಿದ್ದರು. ಶ್ರೀನಿವಾಸ ಪ್ರಸಾದ್ ಬಂದ ಕೂಡಲೇ ಕುಳಿತಿದ್ದ ಸ್ಥಳದಿಂದ ಮೇಲೆದ್ದು ನಿಂತು ಗೌರವ ತೋರಿದರು. ಅಲ್ಲದೆ, ತಮ್ಮ ಪಕ್ಷದ ನಾಯಕರನ್ನೆಲ್ಲ ಮಾಡಿಕೊಟ್ಟ ಸಿಎಂ ಸಿದ್ದರಾಮಯ್ಯ

CM Siddaramaiah Met Chamarajanagar BJP MP Shrinivas Prasad in Mysuru grg
Author
First Published Apr 14, 2024, 7:30 AM IST

ಮೈಸೂರು(ಏ.14):  8 ವರ್ಷಗಳ ವೈಮನಸ್ಸು ಮರೆತು ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ವಿ. ಶ್ರೀನಿವಾಸಪ್ರಸಾದ್‌ ಅವರ ಮನೆಗೆ ಸಿದ್ದರಾಮಯ್ಯ ಅವರು ತೆರಳಿದ್ದರು.

ಶ್ರೀನಿವಾಸ ಪ್ರಸಾದ್ ಅವರಿಗಾಗಿ ಕೊಂಚವು ಬೇಸರ ಮಾಡಿಕೊಳ್ಳದೆ 10 ನಿಮಿಷ ಕಾದು ಕುಳಿತಿದ್ದರು. ಶ್ರೀನಿವಾಸ ಪ್ರಸಾದ್ ಬಂದ ಕೂಡಲೇ ಕುಳಿತಿದ್ದ ಸ್ಥಳದಿಂದ ಮೇಲೆದ್ದು ನಿಂತು ಗೌರವ ತೋರಿದರು. ಅಲ್ಲದೆ, ತಮ್ಮ ಪಕ್ಷದ ನಾಯಕರನ್ನೆಲ್ಲ ಮಾಡಿಕೊಟ್ಟರು. 

ಬಿಜೆಪಿಗೆ ಸ್ವತಂತ್ರ ಅಸ್ತಿತ್ವ ಇಲ್ಲ, ಜೆಡಿಎಸ್‌ಗೆ ಮಾನ ಮರ್ಯಾದೆ ಇಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರಿಗೆ ಭಾನುವಾರ ಪ್ರಧಾನಿ ಮೋದಿ ಬರಲಿದ್ದು, ಅವರೊಂದಿಗೆ ಶ್ರೀನಿವಾಸ ಪ್ರಸಾದ್ ವೇದಿಕೆ ಹಂಚಿ ಕೊಂಡರೇ ಸಮಸ್ಯೆ ಆಗುತ್ತೆ ಎಂಬ ಕಾರಣಕ್ಕೆ ಅಲರ್ಟ್ ಆದ ಸಿಎಂ ಸಿದ್ದರಾಮಯ್ಯ ಅವರು, ಹಠ-ಪ್ರತಿಷ್ಠೆ ಎರಡನ್ನೂ ಬಿಟ್ಟು ಶ್ರೀನಿವಾಸ ಪ್ರಸಾದ್ ಅವರ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಬಗ್ಗೆ ಸಿಂಪಥಿ ಇರಲಿ: 

ಶ್ರೀನಿವಾಸ ಪ್ರಸಾದ್ ಭೇಟಿಯ ಬಳಿಕ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನೀವು (ಶ್ರೀನಿವಾಸಪ್ರಸಾದ್) ಕಾಂಗ್ರೆಸ್‌ನಲ್ಲಿ ಇದ್ದವರು, ಕಾಂಗ್ರೆಸ್ ಬಗ್ಗೆ ಸಿಂಪಥಿ ಇರಲಿ ಎಂದು ಹೇಳಿದ್ದೇನೆ. ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ ಅಷ್ಟೆ ಎಂದು ಅವರು ಹೇಳಿದರು.

ಸಿದ್ದು ಭೇಟಿ ಖುಷಿ ತಂದಿದೆ- ಪ್ರಸಾದ್: 

ಶ್ರೀನಿವಾಸ ಪ್ರಸಾದ್ ಮಾತನಾಡಿ, ಮೋದಿ ಸಮಾವೇಶಕ್ಕೆ ನನಗೆ ಆಹ್ವಾನ ಬಂದಿಲ್ಲ, ಕರೆದರೆ ನಾನು ಹೋಗಲ್ಲ.ಸಿದ್ದರಾ ಮಯ್ಯ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆ ದಿಲ್ಲ. ಅವರ ಭೇಟಿ ನನಗೆ ಸಹಜವಾಗಿ ಖುಷಿ ಕೊಟ್ಟಿದ್ದೆ. ಅವರು ನನ್ನ ಬೆಂಬಲ ಕೇಳಿದ್ದಾರೆ. ನಾನು ರಾಜಕೀಯ ನಿವೃತ್ತಿಯಾಗಿದ್ದೇನೆ ಅಂತ ಹೇಳಿದ್ದೇನೆ ಅಷ್ಟೆ ಎಂದರು.

ಸುಳ್ಳು ಘೋಷಣೆ ಮಾಡಿ ಮೋದಿ 2 ಬಾರಿ ಅಧಿಕಾರಕ್ಕೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ

ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಯಾಗಿದ್ದ ಶ್ರೀನಿವಾಸ ಪ್ರಸಾದ್ ಅವರನ್ನು 2016ರಲ್ಲಿ ಕೈಬಿಡಲಾಗಿತ್ತು. ಆನಂತರ ಇಬ್ಬರ ನಡುವೆ ವೈಮನಸ್ಯ ಆರಂಭವಾಗಿತ್ತು. ಈ ವೇಳೆ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.

ಮೋದಿ ರ್ಯಾಲಿಗೆ ಆಹ್ವಾನ ಬರಲ್ಲ

ಮೋದಿ ಸಮಾವೇಶಕ್ಕೆ ನನಗೆ ಆಹ್ವಾನ ಬಂದಿಲ್ಲ, ಬರುವುದೂ ಇಲ್ಲ. ಕರೆದಿಲ್ಲ, ಕರೆಯೋದೂ ಇಲ್ಲ. ಕರೆದರೆ ನಾನು ಹೋಗೋದೂ ಇಲ್ಲ. ಸಿದ್ದರಾಮಯ್ಯ ಭೇಟಿ ಖುಷಿ ಕೊಟ್ಟಿದೆ ಎಂದು ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ. 

Follow Us:
Download App:
  • android
  • ios