ಸುಳ್ಳು ಘೋಷಣೆ ಮಾಡಿ ಮೋದಿ 2 ಬಾರಿ ಅಧಿಕಾರಕ್ಕೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ

ಮೋದಿ ಕೊಟ್ಟ ಎಲ್ಲಾ ಭರವಸೆಗಳು ಹುಸಿಯಾಗಿವೆ. ಸುಳ್ಳು ಘೋಷಣೆ ಮಾಡಿ 2 ಬಾರಿ ಅಧಿಕಾರಕ್ಕೆ ಬಂದಿದ್ದಾರೆ. ಈ ಬಾರಿ ಅವರ ಸುಳ್ಳು ನಂಬಿ ಅವರಿಗೆ ಓಟು‌ ಹಾಕಬೇಡಿ ಎಂದು ಪಿರಿಯಾಪಟ್ಟಣದಲ್ಲಿ ಪಿಡಬ್ಲೂಡಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. 
 

Lok Sabha Election 2024 Minister Satish Jarkiholi Slams On PM Narendra Modi At Mysuru gvd

ಮೈಸೂರು (ಏ.13): ಮೋದಿ ಕೊಟ್ಟ ಎಲ್ಲಾ ಭರವಸೆಗಳು ಹುಸಿಯಾಗಿವೆ. ಸುಳ್ಳು ಘೋಷಣೆ ಮಾಡಿ 2 ಬಾರಿ ಅಧಿಕಾರಕ್ಕೆ ಬಂದಿದ್ದಾರೆ. ಈ ಬಾರಿ ಅವರ ಸುಳ್ಳು ನಂಬಿ ಅವರಿಗೆ ಓಟು‌ ಹಾಕಬೇಡಿ ಎಂದು ಪಿರಿಯಾಪಟ್ಟಣದಲ್ಲಿ ಪಿಡಬ್ಲೂಡಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಮೋದಿಯವರ 10 ವರ್ಷದ ಸುಳ್ಳನ್ನ ಮನೆ ಮನೆಗೆ ತಲುಪಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.  ವಂದೇ ಭಾರತ್ ಹಾಗೂ ರಾಜಧಾನಿ‌ ಎಕ್ಸ್‌ಪ್ರೆಸ್ ಒಂದೇ. ಹಿಂದೆಯೇ ರಾಜಧಾನಿ ಎಕ್ಸ್‌ಪ್ರೆಸ್ ವಂದೇ ಭಾರತ್ ವೇಗದಲ್ಲಿ ಓಡಿದೆ. ಆದರೆ ಬಿಜೆಪಿಯವರು ಕೇವಲ ಸುಳ್ಳು ಪ್ರಚಾರ ಮಾಡಿದ್ದಾರೆ. ಬಿಜೆಪಿಯವರದ್ದು ಕೇವಲ‌ ಪ್ರಚಾರ ಮಾತ್ರ, ಅಭಿವೃದ್ಧಿ ಇಲ್ಲ. ರಾಜ್ಯದ ಪಾಲನ್ನ ಕೇಂದ್ರ ನೀಡ್ತಿಲ್ಲ ಅಂತ ವಾಗ್ದಾಳಿ ನಡೆಸಿದರು.

ನನಗೆ ಅವಮಾನ ಮಾಡಿದ್ದೀರ: ಕುರುಬ ಸಮುದಾಯದ ಮುಖಂಡರನ್ನ ಸ್ವಾಗತಿಸಿಲ್ಲ ಎಂದು ಕುರುಬ ಸಮಾಜದ ಅಧ್ಯಕ್ಷ ಹೆಚ್ ಡಿ ಗಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೇದಿಕೆಗೆ ಕರೆದು ಕೂರಿಸಿ ಸ್ವಾಗತ ಕೋರಿಲ್ಲ ಎಂದು ಸಿಎಂ, ಡಿಸಿಎಂ ಇದ್ದ ವೇದಿಕೆಯ ಮೇಲೆಯೇ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ನನಗೆ ಕರೆದು ಅವಮಾನ ಮಾಡಿದ್ದೀರ ಎಂದು ಸಿಎಂ ಮುಂದೆ ಹೇಳಿದರು. ಈ ವೇಳೆ ಸಿಎಂ ಹಾಗೂ ಶಾಸಕ ತನ್ವೀರ್ ಸೇಠ್ ಅವರು ಎಚ್.ಡಿ .ಗಣೇಶ್ ಅವರನ್ನ ಸಮಧಾನಿಸಿದರು.

ಸಂಜಯ ಪಾಟೀಲ್ 'ಎಕ್ಸ್‌ಟ್ರಾ ಪೆಗ್' ಹೇಳಿಕೆ ಬಿಜೆಪಿಯ ಹಿಡನ್ ಅಜೆಂಡಾ‌: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಕ್ರೋಶ

ಬಿಜೆಪಿಗೆ ಕಾಂಗ್ರೆಸ್ ಕಂಡರೆ ಭಯವಿದೆ: ಬಿಜೆಪಿ ಕೇಂದ್ರ ಮತ್ತು ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಎರಡು ಮೂರು ಜಿಲ್ಲೆಗಳಿಗೆ ಸೀಮಿತವಾಗಿರುವ ಜೆಡಿಎಸ್ ನೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ. ಅದಕ್ಕೆ ಕಾರಣ ಬಿಜೆಪಿಗೆ ಕಾಂಗ್ರೆಸ್ ಕಂಡರೆ ಭಯವಿದೆ. ಮತ್ತೊಂದೆಡೆ ಮೂರನ್ನೂ ಬಿಟ್ಟಿರುವ ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ. ಅಪ್ಪ, ಮಕ್ಕಳು ಮೊಮ್ಮಕ್ಕಳು ಶಾಸಕರು ಸಂಸದರಾಗಿದ್ದಾರೆ. ಈಗ ಅಳಿಯನನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ನಿಲ್ಲಿಸಿದೆ ಎಂದು  ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಪರವಾಗಿ ನಡೆಯುತ್ತಿರುವ ಪ್ರಚಾರ ಸಭೆಯಲ್ಲಿ ಸಚಿವ ಕೆ.ವೆಂಕಟೇಶ್ ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios