ಕ್ರಿಕೆಟ್ ನೋಡಿದ್ದಕ್ಕೆ ಟೀಕೆ: ಏನು ಮಾಡಬೇಕು, ಮಾಡಬಾರದು ಎಂದು ಸಿಎಂಗೆ ಗೊತ್ತಿದೆ, ಪರಂ
ಟೀಕೆ ಮಾಡೋದು ವಿರೋಧ ಪಕ್ಷಗಳ ಹಕ್ಕು. ಆದರೆ, ಯಾವ ವಿಚಾರಕ್ಕೆ ಟೀಕೆ ಮಾಡಬೇಕು, ಯಾವ ವಿಚಾರಕ್ಕೆ ಸಲಹೆ ಕೊಡಬೇಕು ಅನ್ನೋದು ತಿಳಿದಿರಬೇಕು. ಮುಖ್ಯಮಂತ್ರಿ ಆದವರು ಕ್ರೀಡೆಗೆ ಪ್ರೊತ್ಸಾಹ ನೀಡಬಾರದೆ? ಒಬ್ಬ ಮುಖ್ಯಮಂತ್ರಿಗಳು ಕ್ರಿಕೆಟ್ ನೋಡುತ್ತಾರೆ ಅಂದರೆ ಎಷ್ಟು ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಆಡಳಿತ ವ್ಯವಸ್ಥೆಯಲ್ಲಿ ಕ್ರೀಡೆ ಕೂಡ ಒಂದು ಭಾಗ. ಕುಮಾರಸ್ವಾಮಿ ಅವರಿಂದ ಹೇಳಿಸಿಕೊಳ್ಳಬೇಕಾಗಿಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು(ಅ.25): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏನು ಮಾಡಬೇಕು, ಏನು ಮಾಡಬಾರದು ಎಂಬುದು ಚೆನ್ನಾಗಿ ಗೊತ್ತಿದೆ. ಅರ್ಧ ಗಂಟೆ ಕ್ರಿಕೆಟ್ ನೋಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಟೀಕೆ ಮಾಡೋದು ವಿರೋಧ ಪಕ್ಷಗಳ ಹಕ್ಕು. ಆದರೆ, ಯಾವ ವಿಚಾರಕ್ಕೆ ಟೀಕೆ ಮಾಡಬೇಕು, ಯಾವ ವಿಚಾರಕ್ಕೆ ಸಲಹೆ ಕೊಡಬೇಕು ಅನ್ನೋದು ತಿಳಿದಿರಬೇಕು. ಮುಖ್ಯಮಂತ್ರಿ ಆದವರು ಕ್ರೀಡೆಗೆ ಪ್ರೊತ್ಸಾಹ ನೀಡಬಾರದೆ? ಒಬ್ಬ ಮುಖ್ಯಮಂತ್ರಿಗಳು ಕ್ರಿಕೆಟ್ ನೋಡುತ್ತಾರೆ ಅಂದರೆ ಎಷ್ಟು ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಆಡಳಿತ ವ್ಯವಸ್ಥೆಯಲ್ಲಿ ಕ್ರೀಡೆ ಕೂಡ ಒಂದು ಭಾಗ. ಕುಮಾರಸ್ವಾಮಿ ಅವರಿಂದ ಹೇಳಿಸಿಕೊಳ್ಳಬೇಕಾಗಿಲ್ಲ ಎಂದರು.
100% ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಅಂತಾ ಪ್ರೂವ್ ಆಗೋಯ್ತು; ದೇವೇಗೌಡರ ವಿರುದ್ಧ ಇಬ್ರಾಹಿಂ ಕಿಡಿ
ಕ್ರಿಕೆಟ್ ಅಸೋಸಿಯೇಷನ್ ನವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಗೆ ಆಹ್ವಾನ ನೀಡುತ್ತಿರುತ್ತಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಅವರಿಗೂ ಆಹ್ವಾನ ನೀಡಿದ್ದರು. ನಾನು ಉಪಮುಖ್ಯಮಂತ್ರಿ ಆಗಿದ್ದಾಗ ನನಗೂ ಕರೆದಿದ್ದರು. ಎಲ್ಲಾ ಕೆಲಸ ಬಿಟ್ಟು ಬರೀ ಕ್ರಿಕೆಟ್ ನೋಡುತ್ತಿದ್ದರೆ ನೀವು ಹೇಳೋದು ಸರಿ ಅನ್ನೋಣ ಎಂದು ಎಂದು ಅಭಿಪ್ರಾಯಪಟ್ಟರು.