100% ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಅಂತಾ ಪ್ರೂವ್ ಆಗೋಯ್ತು; ದೇವೇಗೌಡರ ವಿರುದ್ಧ ಇಬ್ರಾಹಿಂ ಕಿಡಿ
ಗೌಡ್ರೇ ನಿಮ್ಮನ್ನು ತಂದೆ ಸಮಾನ ಅಂದ್ಕೊಂಡಿದ್ದೆ. ಇದೇನಾ ಮಗನಿಗೆ ಕೊಡೋ ಪ್ರೀತಿ, ಗೌರವ? ನಾನು ಆರು ವರ್ಷ ಎಂಎಲ್ಸಿ ಬಿಟ್ ನಿಮ್ ಜೊತೆ ಬಂದ್ನಲ್ರೀ? ಹೇಳದೇ ಕೇಳದೇ ಉಚ್ಚಾಟಿಸಿದ್ದೀರಿ. ನನ್ನ ಹೋರಾಟ ಈಗ ಶುರುವಾಗಿದೆ ಎಂದು ಜೆಡಿಎಸ್ ವರಿಷ್ಠರ ವಿರುದ್ಧ ಸಿ.ಎಂ.ಇಬ್ರಾಹಿಂ ಕಿಡಿಕಾರಿದರು.

ಬೆಂಗಳೂರು (ಅ.19): ನನ್ನ ಹೋರಾಟ ಶುರುವಾಗಿದೆ. ಅವರ ನೊಟೀಸ್ ನನ್ನ ಕೈಗೆ ಬರಲಿ ಮೊದಲು ಆಮೇಲೆ ಮಾತಾಡುತ್ತೇನೆ. ಒರಿಜಿನಲ್ ಜೆಡಿಎಸ್ ನಮ್ಮದೇ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಅವರ ಉಚ್ಛಾಟಿಸಿರುವ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ದೇವೇಗೌಡರ ವಿರುದ್ಧ ಕಿಡಿಕಾರಿದ ಅವರು, ಅವರಿಗೆ ಅಧಿಕಾರ ಇದೆ ಮೀಟಿಂಗ್ ಕರ್ದು ನನ್ ಮೇಲೆ ಅವಿಶ್ವಾಸ ನಿರ್ಣಯ ಮಾಡ್ಬೇಕಿತ್ತು. ಇಂದು ಗುರುವಾರ ಉಪವಾಸ ಇದೀನಿ. ಗುರುವಾರ ನನ್ನ ಮಗನನ್ನು ಕಳ್ಕೊಂಡಿದ್ದೇನೆ. ದೇವೆಗೌಡರಿಗೆ ಒಂದು ಮಾತು ಹೇಳೋಕಿಷ್ಟಪಡ್ತಿನಿ. ಇವತ್ತು ನಿಮ್ಮ ಮಗನ ಸಲುವಾಗಿ ಬೇರೆಯವರ ಮಕ್ಕಳನ್ನು ಬಲಿ ಕೊಡ್ತಾ ಇದೀರಿ. ನಿಮಗೆ ಪುತ್ರವ್ಯಾಮೋಹ ಇದೆ ಅಂತಾಯ್ತು. ನನಗೆ ಈ ನಿರ್ಣಯ ಖುಷಿ ಕೊಟ್ಟಿದೆ. ಇದರ ವಿರುದ್ದ ಕೋರ್ಟ್ ನಲ್ಲಿ ಸ್ಟೇ ಕೊಡ್ತೀನಿ. ಒಂದು ರೀತಿ ನನ್ನ ಹೋರಾಟ ಈಗ ಶುರು ಆಗಿದೆ ಎಂದರು.
ಎಚ್‌ಡಿಕೆ, ನಿಖಿಲ್ ವಜಾ ಎಂಬ ಪತ್ರ ನಕಲಿ: ಇಬ್ರಾಹಿಂ ದೂರು
ಗೌಡ್ರೇ ನಿಮ್ಮನ್ನು ತಂದೆ ಸಮಾನ ಅಂದ್ಕೊಂಡಿದ್ದೆ. ಇದೇನಾ ಮಗನಿಗೆ ಕೊಡೋ ಪ್ರೀತಿ, ಗೌರವ? ನಾನು ಆರು ವರ್ಷ ಎಂಎಲ್ಸಿ ಬಿಟ್ ನಿಮ್ ಜೊತೆ ಬಂದ್ನಲ್ರೀ? ನಾನು ಕಾನೂನು ಹೋರಾಟ ಮಾಡ್ತೀನಿ. ದೇವರು ಮತ್ತು ಜನ ನನ್ ಜೊತೆಗಿದ್ದಾರೆ. ನಾನು ಮಗನ ಸಮಾಧಿ ಹತ್ರ ಹೋಗ್ತಿದೀನಿ. ಹೇಳದೇ ಕೇಳದೆ ವಿಸರ್ಜನೆ ಮಾಡಿದ್ದು ತಪ್ಪು. 100% ಜೆಡಿಎಸ್ ಕುಟುಂಬದ ಪಕ್ಷ ಅಂತ ಪ್ರೂವ್ ಆಯ್ತು. ನನ್ನ ಮುಂದಿನ ನಡೆ ಜನತಾದಳ. ಜನತಾದಳ ನಮ್ಮದೇ. ನನ್ನ ಮುಂದಿನ ನಡೆ ಜನತಾ ದಳ. ಜನತಾ ದಳವನ್ನು ವಿಸರ್ಜನೆ ಮಾಡಕ್ಕೇ ಆಗಲ್ಲ. ಇದನ್ನು ಚುನಾವಣಾ ಆಯೋಗದಲ್ಲಿ ಪ್ರಶ್ನೆ ಮಾಡ್ತೇನೆ ಎಂದರು.
ಒರಿಜಿನಲ್ ಜೆಡಿಎಸ್‌ಗೆ ನಾನೇ ಅಧ್ಯಕ್ಷ, ಇಂಡಿಯಾಕ್ಕೆ ನಮ್ಮ ಬೆಂಬಲ: ಇಬ್ರಾಹಿಂ
ಈಗಲೂ ಹೇಳ್ತೇನೆ ನಿಜವಾದ ಜನತಾ ದಳ ನಮ್ಮದೇ. ಬಹುತೇಕ ಶಾಸಕರು ನಮ್ಮ ಜತೆ ಇದ್ದಾರೆ. ಸಮಯ ಸಂದರ್ಭ ಬಂದಾಗ ಶಾಸಕರ ಸಭೆ ಕರೀತೀನಿ. ಶಾಸಕರನ್ನು ಎಲ್ಲ ಬಲಗಳಿಂದಲೂ ಅವರು ಹೆದರಿಸಿ ಇಟ್ಕೊಂಡಿದ್ದಾರೆ. ಲಾಲೂ,ಕೇಜ್ರಿವಾಲ್, ನಿತೀಶ್ ಕುಮಾರ್ ನನ್ನ ಸಂಪರ್ಕದಲ್ಲಿ ಇದ್ದಾರೆ. ಕಾಂಗ್ರೆಸ್ ಗೆ ಘರ್ ವಾಪ್ಸಿ ಆಗೋ ವಿಚಾರ ಈಗಲೇ ಹೇಳೋಕೆ ಆಗಲ್ಲ. ನಾನಿನ್ನೂ ಡೈವರ್ಸ್ ಆಗಿಲ್ಲ ಎಂದ ಸಿಎಂ ಇಬ್ರಾಹಿಂ.
ನಾನು ಎಲ್ಲಿಗೂ ಹೋದ್ರೂ ಹೋಲ್‌ಸೇಲ್ ಆಗಿಯೇ ಹೋಗೋದು. ನಾನು ಸಿದ್ದರಾಮಯ್ಯ ಅವರನ್ನು ಬೈತಿಲ್ಲ ಅಂತ ದೇವೇಗೌಡರಿಗೆ ಬೇಸರ ಇದೆ. ಸುಮ್ಮಸುಮ್ಮನೆ ನಾನ್ಯಾಕೆ ಸಿದ್ದರಾಮಯ್ಯರನ್ನು ಬೈಯಲಿ? ಸಿದ್ದರಾಮಯ್ಯ ಜತೆ ಯಾವುದೇ ವೈಷಮ್ಯ ಇಲ್ಲ. ಅವರು ಅವರ ಪಾಡಿಗೆ ಅಧಿಕಾರ ಮಾಡ್ತಿದ್ದಾರೆ. ನನಗೆ ಕಾಂಗ್ರೆಸ್ ಬಿಟ್ಟಿದ್ದು ತಪ್ಪು ಅನಿಸಿಲ್ಲ. ಮುಂದೆ ಕಾಂಗ್ರೆಸ್ ಆಹ್ವಾನಿಸಿದ್ರೆ ಘರ್ ವಾಪ್ಸಿ ಆಗುವ ಸುಳಿವು ನೀಡಿದ ಸಿಎಂ ಇಬ್ರಾಹಿಂ.