ಮುಡಾ ಹಗರಣ: ಎಫ್‌ಐಆರ್‌ನಿಂದ ಕಂಗಾಲಾದ್ರಾ ಸಿಎಂ ಸಿದ್ದರಾಮಯ್ಯ?
ಮುಡಾ ಹಗರಣ ವಿಚಾರದಲ್ಲಿ ಪೊನ್ನಣ್ಣ ಹಾಗೂ ಭೈರತಿ ಸುರೇಶ್ ಸಿದ್ದರಾಮಯ್ಯ ಅವರನ್ನ ವಹಿಸಿಕೊಂಡು ಮಾತನಾಡಿದ್ದರು. ಮುಂದಿನ ಕಾನೂನು ಹೋರಾಟದ ಬಗ್ಗೆ ಸಿಎಂ ಜೊತೆಗೆ ಗಂಭೀರ ಚರ್ಚೆ ನಡೆಸಿದ್ದಾರೆ ಉಭಯ ನಾಯಕರು. ಭೈರತಿ ಸುರೇಶ್, ಪೊನ್ನಣ್ಣ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ಮೈಸೂರು(ಸೆ.28): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಶನಿವಾರ) ನಿಗದಿಯಾಗಿದ್ದ ಕಾರ್ಯಕ್ರಮವನ್ನ ಮೊಟಕುಗೊಳಿಸಿ ಆಪ್ತರ ಜೊತೆ ಸಭೆ ನಡೆಸುತ್ತಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಹೋಟೆಲ್ ಮೈಸೂರು ರೇಡಿಯನ್ಸ್ ಉದ್ಘಾಟನೆಗೆ ಸಿದ್ದರಾಮಯ್ಯ ತೆರಳಬೇಕಿತ್ತು. ಎಫ್‌ಐಆರ್ ಟೆನ್ಷನ್‌ನಿಂದಾಗಿ ತುರ್ತು ಸಭೆ ನಡೆಸುತ್ತಿದ್ದಾರೆ.
ಮೈಸೂರು ನಿವಾಸದಲ್ಲಿ ಸಚಿವ ಭೈರತಿ ಸುರೇಶ್ ಹಾಗೂ ಕಾನೂನು ಸಲಹೆಗಾರ ಪೊನ್ನಣ್ಣ ಜೊತೆ ಮಾತುಕತೆ ನಡೆಸಿದ್ದಾರೆ. ಮಾತುಕತೆ ನಡೆಸುವ ಸಲುವಾಗಿಯೇ ಇಬ್ಬರನ್ನು ಸಿದ್ದರಾಮಯ್ಯ ಕರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಭ್ರಷ್ಟಾಚಾರ ಆರೋಪ ಹೊತ್ತ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ರಾಮುಲು
ಮುಡಾ ಹಗರಣ ವಿಚಾರದಲ್ಲಿ ಪೊನ್ನಣ್ಣ ಹಾಗೂ ಭೈರತಿ ಸುರೇಶ್ ಸಿದ್ದರಾಮಯ್ಯ ಅವರನ್ನ ವಹಿಸಿಕೊಂಡು ಮಾತನಾಡಿದ್ದರು. ಮುಂದಿನ ಕಾನೂನು ಹೋರಾಟದ ಬಗ್ಗೆ ಸಿಎಂ ಜೊತೆಗೆ ಗಂಭೀರ ಚರ್ಚೆ ನಡೆಸಿದ್ದಾರೆ ಉಭಯ ನಾಯಕರು. ಭೈರತಿ ಸುರೇಶ್, ಪೊನ್ನಣ್ಣ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ಸಿದ್ದರಾಮಯ್ಯ ಮನೆ ಆವರಣ ಖಾಲಿ ಖಾಲಿ.
ಸಿದ್ದರಾಮಯ್ಯ ಮೈಸೂರಿಗೆ ಬಂದಾಗಲೆಲ್ಲಾ ಅವರ ಮನೆ ಮುಂದೆ ಅಪಾರ ಪ್ರಮಾಣದ ಜನರು ಜಮಾಯಿಸುತ್ತಿದ್ದರು. ಆದ್ರೆ ಇಂದು ಮನೆ ಆವರಣ ಸಂಪೂರ್ಣವಾಗಿ ಭನಗುಡುತ್ತಿದೆ. ಇಂದು ಮೈಸೂರಿನ ಮನೆಯಲ್ಲೇ ಸಿಎಂ ಇದ್ದರೂ ಸಿದ್ದರಾಮಯ್ಯ ಅವರನ್ನ ನೋಡಲು ಜನರು ಬಂದಿಲ್ಲ. ಇವತ್ತು ಅತಿ ಹೆಚ್ಚು ಸಂಖ್ಯೆಯಲ್ಲಿ ಜನ ಬರಬಹುದು ಅಂದುಕೊಂಡು ಪೊಲೀಸರು ಭದ್ರತೆ ಹೆಚ್ಚು ಮಾಡಿದ್ದರು. ಆದ್ರೆ ಜನರಿಲ್ಲದೆ ಮೈಸೂರಿನ ಸಿಎಂ ನಿವಾಸದ ಆವರಣ ಬಣಗುಡುತ್ತಿದೆ. ಸಿಎಂ ವಿರುದ್ಧ ಎಫ್ಐಆರ್ ದಾಖಲಾಗುತ್ತಿದಂತೆ ಅಭಿಮಾನಿಗಳು ಕಂಗಾಲಾಗಿದ್ದಾರೆ.