Asianet Suvarna News Asianet Suvarna News

ರೆಬೆಲ್‌ ಶಾಸಕರಿಗೆ ಹೊಸ ಹುದ್ದೆಕೊಟ್ಟ ಸರ್ಕಾರ : ರಾಯರೆಡ್ಡಿ, ಬಿ.ಆರ್. ಪಾಟೀಲ್, ದೇಶಪಾಂಡೆಗೆ ಸಂಪುಟ ಸ್ಥಾನಮಾನ

ಕಾಂಗ್ರೆಸ್‌ ಸರ್ಕಾರ ಬಂದು 6 ತಿಂಗಳಾದರೂ ಯಾವುದೇ ಹುದ್ದೆಯಿಲ್ಲದೇ ರೆಬೆಲ್‌ ಆಗಿದ್ದ ಹಿರಿಯ ಶಾಸಕರನ್ನು ತಣಿಸಲು ಸಿಎಂ ಸಿದ್ದರಾಮಯ್ಯ ಹೊಸ ಹುದ್ದೆಗಳನ್ನು ಸೃಷ್ಟಿಸಿ ಸಂಪುಟ ದರ್ಜೆ ಸ್ಥಾನಮಾನ ಕೊಟ್ಟಿದ್ದಾರೆ.

CM Siddaramaiah has given new posts rebel MLAs as Rayareddy Deshpande and BR Patil sat
Author
First Published Dec 29, 2023, 8:28 PM IST

ಬೆಂಗಳೂರು (ಡಿ.29): ರಾಜ್ಯದ ಕಾಂಗ್ರೆಸ್‌ ಹಿರಿಯ ನಾಯಕರಿಗೆ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾದರೂ ತಮಗೆ ಸಚಿವ ಸ್ಥಾನ ಕೊಡದ ಹಿನ್ನೆಲೆಯಲ್ಲಿ ಸ್ವಪಕ್ಷೀಯ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಹಿರಿಯ ನಾಯಕರಾದ ಬಸವರಾಜ್ ರಾಯರೆಡ್ಡಿ, ಆರ್.ವಿ.ದೇಶಪಾಂಡೆ ಹಾಗೂ ಬಿ.ಆರ್.ಪಾಟೀಲ್ ಅವರಿಗೆ ಹೊಸ ಹುದ್ದೆಯನ್ನು ಸೃಷ್ಟಿಸಿ ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ಕೊಟ್ಟಿದ್ದಾರೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ಸಚಿವ ಸ್ಥಾನ ಗಿಟ್ಟಿಸಿ ಅಧಿಕಾರವನ್ನು ಅನುಭವಿಸಿದ ಕೆಲವು ಹಿರಿಯ ನಾಯಕರಿಗೆ ಈ ಬಾರಿ ಕಾಂಗ್ರೆಸ್‌ ಸರ್ಕಾರದಲ್ಲಿ ಯಾವುದೇ ಅಧಿಕಾರ ಸಿಕ್ಕಿಲ್ಲ. ಎರಡು ಮೂರು ಬಾರಿ ಗೆದ್ದವರಿಗೆಲ್ಲಾ ಸಚಿವ ಸ್ಥಾನ ಕೊಟ್ಟಿರುವಾಗ ತಾವು ಹಿರಿಯರಾಗಿದ್ದು, ಅನುಭವ ಇದ್ದರೂ ಸಚಿವ ಸ್ಥಾನ ಕೊಡದಿದ್ದಕ್ಕೆ ಭಾರಿ ಬೇಸರ ವಯಕ್ತಪಡಿಸಿದ್ದರು. ಜೊತೆಗೆ, ವೇದಿಕೆ ಸಿಕ್ಕಾಗೆಲ್ಲ ಸರ್ಕಾರ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದರು. ಇವರ ಕೋಪವನ್ನು ಶಮನ ಮಾಡಲು ನಿಗಮ ಮಂಡಳಿ ಸ್ಥಾನವನ್ನು ಕೊಡಲು ಮುಂದಾದರೂ ಅದನ್ನು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ನಾಯಕರ ಕೋಪ ಶಮನಕ್ಕಾಗಿ ಸರ್ಕಾರದಿಂದ ಸಂಪುಟ ದರ್ಜೆ ಸ್ಥಾನಮಾನವನ್ನು ಹೊಂದಿರುವ ಹೊಸ ಹುದ್ದೆಯನ್ನು ಸೃಷ್ಟಿಸಿ ಹಂಚಿಕೆ ಮಾಡಲಾಗಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಚೆಕ್‌ಬೌನ್ಸ್‌ ಕೇಸ್: 6.96 ಕೋಟಿ ರೂ. ದಂಡ ಅಥವಾ 6 ತಿಂಗಳು ಜೈಲು ವಿಧಿಸಿದ ಕೋರ್ಟ್

ಹಿರಿಯ ನಾಯಕರಾದ ಬಸವರಾಜ್ ರಾಯರೆಡ್ಡಿ ಅವರನ್ನು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾಗಿ, ಬಿ.ಆರ್.ಪಾಟೀಲ್ ಅವರನ್ನು ಮುಖ್ಯಮಂತ್ರಿಯವರ ಸಲಹೆಗಾರರಾಗಿ ಹಾಗೂ ಆರ್.ವಿ.ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಎಲ್ಲ ಹುದ್ದೆಗಳಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನಿತ ಹಿರಿಯ ಶಾಸಕರ ಮನವೊಲಿಕೆ ಮಾಡಿದ್ದಾರೆ. 

ಮೋದಿ ಹ್ಯಾಟ್ರಿಕ್ ಪ್ರಧಾನಿಯಾಗುವುದರಲ್ಲಿ ಅನುಮಾನವಿಲ್ಲ: ಸಂಸದ ಮುನಿಸ್ವಾಮಿ ಭವಿಷ್ಯ

ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಸರ್ಕಾರದ ಹಲವು ದೊಡ್ಡ ಕಾರ್ಯಕ್ರಮಗಳ ವೇದಿಕೆಯಲ್ಲಿ ಇವರಿಗೆ ಆಹ್ವಾನವೇ ಇರುತ್ತಿರಲಿಲ್ಲ. ಕೇವಲ ಶಾಸಕರಾಗಿದ್ದ ಹಿರಿಯ ನಾಯಕರಿಗೆ ತಮ್ಮ ರಾಜಕೀಯ ಅನುಭವದಷ್ಟು ವಯಸ್ಸಾಗಿರದ ಅನೇಕ ಸಚಿವರು ಕವಡೆ ಕಾಸಿನ ಕಿಮ್ಮತ್ತೂ ಕೊಡದೇ ನಡೆಸಿಕೊಂಡಿದ್ದಾರೆಂಬ ದೂರುಗಳು ಕೂಡ ಕೇಳಿಬಂದಿದ್ದವು. ಆದ್ದರಿಂದ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದರು. ಇನ್ನು ಲೋಕಸಭಾ ಚುನಾವಣೆಗೂ ಮುನ್ನ ಈ ಅಸಮಾಧಾನಿತರನ್ನು ತಣಿಸದಿದ್ದರೆ ತಮ್ಮ ಪಕ್ಷಕ್ಕೆ ಮುಳ್ಳಾಗುವುದು ಖಚಿತವೆಂದು ಎಚ್ಚೆತ್ತುಕಂಡು ಅವರನ್ನು ಸಮಾಧಾನ ಮಾಡಲು ವಿಶೇಷ ಹುದ್ದೆ ನೀಡಿ ಸಮಾಧಿನಿಸುವ ಪ್ರಯತ್ನ ‌‌ಮಾಡಲಾಗಿದೆ.

Follow Us:
Download App:
  • android
  • ios