Asianet Suvarna News Asianet Suvarna News

ಜೆಡಿಎಸ್ ಬಿಡುವ ಶಾಸಕರ ಸಂಖ್ಯೆ 12 ದಾಟಲಿದೆ, ಶೀಘ್ರದಲ್ಲೇ ಕ್ಲಿಯರ್ ಪಿಚ್ಚರ್ ಸಿಗಲಿದೆ: ಸಿಎಂ ಇಬ್ರಾಹಿಂ

ಬಿಜೆಪಿಯವರು EVM ಹ್ಯಾಕ್ ಮಾಡಿದ್ದಾರೆ. ಅಮೆರಿಕ ಸೇರಿದಂತೆ ಇತರ ದೇಶಗಳಲ್ಲಿ EVM ಇಲ್ಲ. EVM ಇರುವ ಕಡೆ ಬಿಜೆಪಿ ಗೆದ್ದಿದೆ. ಎಲ್ಲಿ ಬೇಕೋ ಅಲ್ಲೇ ಬಿಜೆಪಿ ಬರ್ತಿದೆ. ಲೋಕಸಭಾ ಚುನಾವಣೆ EVM ನಲ್ಲಿ ನಡೆಯಬಾರದು: ಸಿಎಂ ಇಬ್ರಾಹಿಂ 

CM Ibrahim Talks Over Karnataka JDS grg
Author
First Published Dec 8, 2023, 5:07 PM IST

ಬೆಂಗಳೂರು(ಡಿ.08):  ಡಿ.11ರಂದು ಜೆಡಿಎಸ್‌ ರಾಷ್ಟ್ರೀಯ ಉಪಾಧ್ಯಕ್ಷರು ಸಭೆ ಕರೆದಿದ್ದಾರೆ. ಪಕ್ಷದ ಎಲ್ಲಾ ಪದಾಧಿಕಾರಿಗಳು, ಪ್ರಮುಖ ಮುಖಂಡರು ಸಭೆ ಕರೆದಿದ್ದಾರೆ. ಬೆಂಗಳೂರಿನಲ್ಲೇ ಸಭೆ ಮಾಡೋಣ ಅಂತ ಹೇಳಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರಿಗೆ ಭೇಟಿಯಾಗಿ ಹೇಳ್ತಿವಿ ಅಂದಿದ್ದಾರೆ. ದೇವೇಗೌಡರು ಏನು ತೀರ್ಮಾನ ತೆಗೆದುಕೊಳ್ತಾರೆ ತೆಗೆದುಕೊಳ್ಳಲಿ. ಬೆಳಗಾವಿ, ತೆಲಂಗಾಣ, ಯುಪಿ ಸೇರಿದಂತೆ ವಿವಿಧ ರಾಜ್ಯಗಳ ಅಧ್ಯಕ್ಷರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಜೆಡಿಎಸ್‌ನಿಂದ ಅಮಾನತ್ತಾದ ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.

ಮಧ್ಯಪ್ರದೇಶ ಚುನಾವಣೆ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಇಬ್ರಾಹಿಂ ಅವರು, ಬಿಜೆಪಿಯವರು EVM ಹ್ಯಾಕ್ ಮಾಡಿದ್ದಾರೆ. ಅಮೆರಿಕ ಸೇರಿದಂತೆ ಇತರ ದೇಶಗಳಲ್ಲಿ EVM ಇಲ್ಲ. EVM ಇರುವ ಕಡೆ ಬಿಜೆಪಿ ಗೆದ್ದಿದೆ. ಎಲ್ಲಿ ಬೇಕೋ ಅಲ್ಲೇ ಬಿಜೆಪಿ ಬರ್ತಿದೆ. ಲೋಕಸಭಾ ಚುನಾವಣೆ EVM ನಲ್ಲಿ ನಡೆಯಬಾರದು ಅಂತ ಹೇಳಿದ್ದಾರೆ. 

'ಸಿಎಂ ಇಬ್ರಾಹಿಂಗೂ ಹಣ ಕೊಟ್ಟಿದ್ದೆ'; ಎಚ್‌ಡಿಕೆ ಹಣ ಪಡೆದಿದ್ದಾರೆ ಎಂಬ ಇಬ್ರಾಹಿಂ ಆರೋಪಕ್ಕೆ ಶರವಣ ತಿರುಗೇಟು!

I.N.D.I.A  ಗೆ ಬೆಂಬಲ ನೀಡ್ತೇವೆ. ನಿತೀಶ್ ಕುಮಾರ್, ಅಖಿಲೇಶರನ್ನ ಭೇಟಿ ಆಗ್ತೇನೆ. ದೇವೇಗೌಡರ ನಂತರ ನಾನೇ ಮೋಸ್ಟ್ ಸೀನಿಯರ್ ಆಗಿದ್ದೇನೆ. ಮಧ್ಯಪ್ರದೇಶ, ರಾಜಸ್ಥಾನಕ್ಕೆ ಹೋಗಿದ್ರೂ ಸಿದ್ಧಾಂತ ಬಿಡಲ್ಲ. ಡಿ. 11ರ ನಂತರ ರಾಜ್ಯ ಪ್ರವಾಸ ಮಾಡುವೆ. ಮಾಜಿ ಶಾಸಕರಾದ ನಾಡಗೌಡರು, ಮಹೀಮಾ ಪಟೇಲ್ ರ ಜೊತೆಗೆ ಹಾಲಿ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ತೇವೆ. ಜಾತ್ಯಾತೀತ ಶಕ್ತಿಗಳನ್ನ ಒಂದುಗೂಡಿಸ್ತೇವೆ ಎಂದು ತಿಳಿಸಿದ್ದಾರೆ. 

ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ. ರಾಹುಲ್ ಗಾಂಧಿಯವರು ಕರ್ನಾಟಕದಿಂದ ಸ್ಪರ್ಧೆ ಮಾಡೋದಾದ್ರೆ ಸ್ವಾಗತ. ಇಂದಿರಾ ಗಾಂಧಿ ಗೆದ್ರು, ಅವರ ಮೊಮ್ಮಗ ಕೂಡ ರಾಜ್ಯದಿಂದ ಗೆಲ್ಲಲಿ. ಯತ್ನಾಳ್ ಕುಟುಂಬದವರು ದರ್ಗಾಕ್ಕೆ ಹೋಗ್ತಾರೆ. ಜನರ ಸಮಸ್ಯೆ, ಬರಗಾಲ, ಉದ್ಯೋಗ ಸೇರಿದಂತೆ ಸಾಕಷ್ಟು ಸಮಸ್ಯೆಗಳಿದಾವೆ. ಉಡುಪಿ ಹೋಟೆಲ್‌ಗೆ ಹೋಗಿ ಬಿರಿಯಾನಿ ಕೇಳಬೇಡಿ. ನಿಮ್ಮ ಕೆಲಸ ನೀವು ಮಾಡಿ, ನಮ್ಮ ಕೆಲಸ ನಾವು ಮಾಡ್ತೇವೆ ಎಂದಿದ್ದಾರೆ ಸಿಎಂ ಇಬ್ರಾಹಿಂ. 
ಡಿ. 11 ರಂದು ರಾಷ್ಟ್ರೀಯ ಉಪಾಧ್ಯಕ್ಷ, ಎಲ್ಲಾ ರಾಜ್ಯದ ಅಧ್ಯಕ್ಷರು, ಉಪಾಧ್ಯಕ್ಷರು ಸಭೆ ಕರೆದಿದ್ದಾರೆ. ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇರುವ ಎಲ್ಲರೂ ವೀಕ್ಷಕರಾಗಿ ಬರಬಹುದು. ಸಮ್ಮೇಳನಕ್ಕೆ ಎಲ್ಲರೂ ಬನ್ನಿ ಎಂದು ವಿನಂತಿ ಮಾಡಿಕೊಂಡಿದ್ದಾರೆ. 

ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಬಿಜೆಪಿ ನಾಯಕರು ವಿಧಾನಸೌಧದ ಬದಲಿಗೆ ಮೋದಿ ಮನೆ ಮುಂದೆ ಕುಳಿತು ಮನವಿ ಮಾಡಲಿ. ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮಿತಿ ಮಾಡಿ, ವಾರಕ್ಕೆ ಒಂದು ಬಾರಿ ಸಭೆ ಸೇರಿ ರೈತರಿಗೆ ಪರಿಹಾರ ತಲುಪಿಸಿ. ಒಂದು ಕಮಿಟಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಎಂ ಇಬ್ರಾಹಿಂ ಮನವಿ ಮಾಡಿಕೊಂಡಿದ್ದಾರೆ. 

ಕುಮಾರಸ್ವಾಮಿ ಹೇಳಿಕೆ ಸಮಂಜಸವಲ್ಲ

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗಳು ಸಮಂಜಸವಲ್ಲ. ಭಜರಂಗದಳದವರೂ ಈ ರೀತಿಯ ಹೇಳಿಕೆ ನೀಡಲ್ಲ. ನೀವು ಕೇಶವಕೃಪಾದಲ್ಲಿ ಬಾಳಲಾರರಿ-ತಾಳಲಾರರಿ. ನೀವು ಇಲ್ಲಿಗೇ ಬರಬೇಕು, ಬೇರೆ ವಿಧಿ ಇಲ್ಲ. ದೇವೇಗೌಡರು ಒತ್ತಡಕ್ಕೆ ಒಳಗಾಗಿದ್ದಾರೆ. ರೇವಣ್ಣ ಚಿಂತಾಜನಕವಾಗಿದ್ದಾರೆ. 5 ಮಂದಿ ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಜನವರಿ ನಂತರ ಕ್ಲಿಯರ್ ಪಿಚ್ಚರ್ ಸಿಗಲಿದೆ. ಜೆಡಿಎಸ್ ಬಿಡುವ ಶಾಸಕರ ಸಂಖ್ಯೆ 12 ದಾಟಲಿದೆ. ನಾವು ಆತುರ ಮಾಡಲ್ಲ, ದೇವೇಗೌಡರ- ಕುಮಾರಸ್ವಾಮಿಯವರ ಆರೋಗ್ಯ ಮುಖ್ಯ ಅಂತ ಇಬ್ರಾಹಿಂ ತಿಳಿಸಿದ್ದಾರೆ. 

ಪಕ್ಷ ವಿರೋಧಿ ಚಟುವಟಿಕೆ; ಜೆಡಿಎಸ್‌ನಿಂದ ಸಿ.ಎಂ.ಇಬ್ರಾಹಿಂ ಅಮಾನತ್ತು!

ನಾನೇ ಜನತಾದಳದ ಅಧ್ಯಕ್ಷ

ನಾನೇ ಜನತಾದಳ ಅಧ್ಯಕ್ಷನಾಗಿದ್ದೇನೆ. ಯಾವ ಆಧಾರದ ಮೇಲೆ ಉಚ್ಛಾಟನೆ ಮಾಡ್ತಾರೆ?. ಜಿಟಿ ದೇವೇಗೌಡರನ್ನ ನಾನೇ ಕಮಿಟಿ ಅಧ್ಯಕ್ಷರನ್ನಾಗಿ ಮಾಡಿದ್ದು, ನಮ್ಮ ಮೀಟಿಂಗ್ ಹಾಗೂ ಅವರ ಮೀಟಿಂಗ್ ಗೆ ಯಾರು ಬರ್ತಾರೆ ನೋಡಿ. 12 ಮಂದಿ ಶಾಸಕರ ಸಂಖ್ಯೆ ನಮ್ಮ ಪರವಾಗಲಿದೆ  ಎಂದು ಇಬ್ರಾಹಿಂ ತಿಳಿಸಿದ್ದಾರೆ. 

ನನಗೆ ಕಾಂಗ್ರೆಸ್ ಮೇಲೆ ಸಿಟ್ಟಿಲ್ಲ. ಕಾಂಗ್ರೆಸ್ ನಾಯಕರು ಸಂಪರ್ಕದಲ್ಲೂ ಇಲ್ಲ. ರಾಹುಲ್ ಗಾಂಧಿಯವರು ರಾಜ್ಯದಿಂದ ಸ್ಪರ್ಧೆಗೆ ಸ್ವಾಗತ. ಮೂರನೇ ಶಕ್ತಿಯನ್ನು ಕಟ್ಟಲು ಹೊರಟಿದ್ದೇವೆ ಎಂದು ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ. 

Follow Us:
Download App:
  • android
  • ios