ಬೆಂಗಳೂರು, [ಜ.12]:  ಕರ್ನಾಟಕದ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಕ್ಲರ್ಕ್​ ರೀತಿ ನಡೆಸಿಕೊಳ್ಳುತ್ತಿದೆ ಎನ್ನುವ ಮೋದಿ ಹೇಳಿಕೆಗೆ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಕರ್ನಾಟಕ ದೋಸ್ತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್​ ಸೇರಿಕೊಂಡು ಸರ್ಕಾರ ರಚಿಸಿವೆ.  ಆದ್ರೆ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿಯನ್ನ, ಒಬ್ಬ ಕ್ಲರ್ಕ್​ ರೀತಿ ನಡೆಸಿಕೊಳ್ಳುತ್ತಿದೆ ಎಂದು ಲೇವಡಿ ಮಾಡಿದ್ದರು.

ಕುಮಾರಸ್ವಾಮಿ ಮೇಲೆ ಮೋದಿ ಅನುಕಂಪದ ಮಾತು: ಹಿಂದಿನ ಮರ್ಮವೇನು?

 ಈ ಹೇಳಿಕೆ ಕುಮಾರಸ್ವಾಮಿ ಪರ ಅನುಕಂಪದ ಮಾತುಗಳಾಗಿದ್ದವೋ ಅಥವಾ ಲೇವಡಿ ಮಾಡಿ ಕಾಲೆಳೆದ್ರೋ ಎನ್ನುವುದು ಮೋದಿ ಅವರಿಗೇ ಗೊತ್ತು. ಆದ್ರೆ ಇದಕ್ಕೆ ಸಿಎಂ ಕುಮಾರಸ್ವಾಮಿ ವರು ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ.

ಕುಮಾರಣ್ಣ ಸಿಎಂ? ಅಥವಾ ಕ್ಲರ್ಕ್?: ಮೋದಿ ಲೇವಡಿ!

ಪ್ರಧಾನಿ ಮೋದಿ ಹೇಳಿಕೆ ತಮಾಷೆಯಾಗಿದೆ. ಪ್ರಧಾನಿ ಮೋದಿ ಎರಡನೆಯ ಬಾರಿಗೆ ಹೀಗೆ ಹೇಳಿದ್ದಾರೆ. ಇಂತಹ ಹೇಳಿಕೆಗಳು ನಮ್ಮ ಸಮ್ಮಿಶ್ರ ಸರ್ಕಾರವನ್ನು ಅಭಿವೃದ್ಧಿ ಪಥದಿಂದ ದೂರ ಮಾಡುವುದಿಲ್ಲ. ನಮ್ಮ ಮೈತ್ರಿಯನ್ನ ಅಸ್ಥಿರಗೊಳಿಸುವುದಿಲ್ಲ ಎಂದು ಮೋದಿಗೆ ಪ್ರತಿಬಾಣ ಬಿಟ್ಟಿದ್ದಾರೆ.