ಶಾಸಕರು ಹಾಗೂ ಸಚಿವರ ನಡುವೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿರುವ ಕಾರಣ ಶೀಘ್ರದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ಕರೆಯಲು ಮುಂದಾಗಿದ್ದಾರೆ.
ಬೆಂಗಳೂರು, (ಡಿ.5): ಸಂಪುಟ ವಿಸ್ತರಣೆ, ನಾಯಕತ್ವದ ಬದಲಾವಣೆ ಕೂಗು ಸೇರಿದಂತೆ ಹಲವು ವಿಚಾರಗಳ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಕಳೆದ 15 ದಿನಗಳಿಂದ ರಾಜಕೀಯ ಗರಿಗೆದಿದ್ದು, ನಾಯಕರುಗಳಲ್ಲಿ ಮುಸುಕಿನ ಗುದ್ದಾಟಗಳು ಶುರುವಾಗಿವೆ.
ಇದೀಗ ಆ ಒಂದೇ ಒಂದು ಲೆಟರ್‌ನಿಂದ ರಾಜ್ಯ ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಇವೆಲ್ಲವೂಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ.
ಹೌದು... ಶಾಸಕರು ಹಾಗೂ ಸಚಿವರ ನಡುವೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿರುವ ಕಾರಣ ಶೀಘ್ರದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ಕರೆಯಲು ಮುಂದಾಗಿದ್ದಾರೆ. ಮೂರು ದಿನಗಳ ಹಿಂದೆಯಷ್ಟೆ ವಿಧಾನಸಭೆಯ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟಿಲ್‍ಗೆ ಪತ್ರ ಬರೆದು ಸಭೆ ಕರೆಯಬೇಕೆಂದು ಮನವಿ ಮಾಡಿದ್ದರು.
ಸಂಪುಟ ಪ್ರಹಸನಕ್ಕೆ ಬಿಜೆಪಿ ಸಂಘನಿಷ್ಠ ಶಾಸಕರ ಅಸಮಾಧಾನ ಸ್ಫೋಟ..!
ಶಾಸಕರು ಹಾಗೂ ಸಚಿವರ ಬಹಿರಂಗ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ. ಮಂತ್ರಿ ಮಂಡಲ ರಚನೆ, ನಿಗಮ-ಮಂಡಳಿಗಳಿಗೆ ನೇಮಕ ಕುರಿತು ಚರ್ಚಿಸಲು ಪಕ್ಷದ ಶಾಸಕರ ಸಭೆ ಕರೆಯಬೇಕು ಎಂದು ಪತ್ರದ ಮೂಲಕ ತಿಳಿಸಿದ್ದರು.
ಸುನಿಲ್ ಕುಮಾರ್ ಪತ್ರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸುನಿಲ್‍ಕುಮಾರ್ ಪ್ರಸ್ತಾಪಿಸಿದ ವಿಷಯವನ್ನು ಕಟಿಲ್ ಅವರು ನೂತನ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಕೂಡಲೇ ಸಿಎಂ ಬಿಎಸ್‍ವೈ ಅವರ ಜತೆ ಚರ್ಚಿಸಿ ಶಾಸಕರ ಸಭೆ ಕರೆಯಬೇಕೆಂದು ನಿರ್ದೇಶನ ನೀಡಿದ್ದಾರೆ.
ಉಸ್ತುವಾರಿಯವರ ಸೂಚನೆಯಂತೆ ಮುಂದಿನ ವಾರದ ಮಧ್ಯಭಾಗದಲ್ಲಿ ಶಾಸಕರು ಮತ್ತು ಸಚಿವರ ಸಭೆ ಕರೆದು ಅವರ ಸಮಸ್ಯೆಗಳನ್ನು ಸಿಎಂ ಆಲಿಸಲಿದ್ದಾರೆ ಎನ್ನಲಾಗುತ್ತಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 5, 2020, 2:44 PM IST