Asianet Suvarna News Asianet Suvarna News

ಉಪಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ: ಸಿಎಂ ಬಿಎಸ್‌ವೈ ಪ್ರತಿಕ್ರಿಯೆ

ಮಸ್ಕಿ ಹಾಗೂ‌ ಬಸವಕಲ್ಯಾಣದಲ್ಲಿ ಬಿಜೆಪಿ ಈಗಾಗಲೇ ಗೆದ್ದಾಗಿದೆ| ಬೆಳಗಾವಿಯಲ್ಲಿ ಗೆಲ್ಲುವ ತಯಾರಿ ಮಾಡುತ್ತಿದ್ದೇವೆ| ಉಪಚುನಾವಣೆ ಬಳಿಕ ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡದ ಸಿಎಂ ಯಡಿಯೂರಪ್ಪ| 

CM BS Yediyurappa React on BY Vijayendra Contest in Byelection grg
Author
Bengaluru, First Published Mar 21, 2021, 1:24 PM IST

ರಾಯಚೂರು(ಮಾ.21): ಮಸ್ಕಿ ಉಪಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಅಭ್ಯರ್ಥಿ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. 

ಶನಿವಾರ ರಾತ್ರಿ ಮಸ್ಕಿ ಪ್ರಚಾರ ಸಮಾವೇಶ ಬಳಿಕ ಜಿಲ್ಲೆಯ ಸಿಂಧನೂರಿನಲ್ಲಿ ವಾಸ್ತವ್ಯ ಉಳಿದಿದ್ದ ಸಿಎಂ ಇಂದು(ಭಾನುವಾರ) ಬೆಳಿಗ್ಗೆ ಕೆ.ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಉಪಹಾರ ಸೇವನೆಗೆ ಬಂದಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಸ್ಕಿ ಉಪಚುನಾವಣೆ ರಣಕಹಳೆ: ಮೋದಿ ಅಭಿವೃದ್ಧಿ ನೆನೆದು ಮತ ನೀಡಿ, ಯಡಿಯೂರಪ್ಪ

ಮೈಸೂರಿನಲ್ಲಿಯೇ ಉಳಿದುಕೊಳ್ಳುವಂತೆ ಒತ್ತಾಯ ಇರುವುದರಿಂದ, ವಿಜಯೇಂದ್ರ ಅಲ್ಲಿ ಮನೆ ಮಾಡಿಕೊಳ್ಳಲಿದ್ದಾರೆ. ಅಲ್ಲಿದ್ದುಕೊಂಡು ಸುತ್ತಲಿನ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡಲಿದ್ದಾರೆ. ಮಸ್ಕಿ ಹಾಗೂ‌ ಬಸವಕಲ್ಯಾಣದಲ್ಲಿ ಬಿಜೆಪಿ ಈಗಾಗಲೇ ಗೆದ್ದಾಗಿದೆ. ಬೆಳಗಾವಿಯಲ್ಲಿ ಗೆಲ್ಲುವ ತಯಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಉಪಚುನಾವಣೆ ಬಳಿಕ ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಹೇಳಿಕೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಬಳಿಕ ಸಿಂಧನೂರು ತಾಲೂಕಿನ ಗೋರೆಬಾಳ ಗ್ರಾಮದ ಶರಣ ಬಸವೇಶ್ವರ ‌ದೇವಸ್ಥಾನಕ್ಕೆ ತೆರಳಿ ಸಿಎಂ ಬಿ.ಎಸ್ವೈ ದರ್ಶನವನ್ನ ಪಡೆದುಕೊಂಡಿದ್ದಾರೆ. 
 

Follow Us:
Download App:
  • android
  • ios