Asianet Suvarna News Asianet Suvarna News

ದೆಹಲಿ ಭೇಟಿ ಯಶಸ್ವಿಯಾಗಿದೆ.. ಬೆಂಗ್ಳೂರಿಗೆ ಹೊರಟ ರೇಣುಕಾಚಾರ್ಯ ಸಂದೇಶ

* ನಾನು ಬಿ.ಎಸ್‌ ಯಡಿಯೂರಪ್ಪ ಕ್ಯಾಂಪ್ ಬದಲಾಯಿಸಿಲ್ಲ
* ಮಂತ್ರಿಸ್ಥಾನಕ್ಕೆ ಲಾಬಿ ಮಾಡಲು ದೆಹಲಿಗೆ ಬಂದಿಲ್ಲ
*ನವದೆಹಲಿಯಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿಕೆ
* ದೆಹಲಿಯಿಂದ ಬೆಂಗಳೂರಿಗೆ ಹೊರಟ ಹೊನ್ನಾಳಿ ಶಾಸಕ

CM BS Yediyurappa political secretary mla mp renukacharya meets BJP High Command mah
Author
Bengaluru, First Published Jul 23, 2021, 3:49 PM IST
  • Facebook
  • Twitter
  • Whatsapp

ನವದೆಹಲಿ(ಜು. 23)  ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿದ್ದರೆ ಅತ್ತ ನವದೆಹಲಿಯಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ.

ನಾನು ಬಿ.ಎಸ್‌ ಯಡಿಯೂರಪ್ಪ ಕ್ಯಾಂಪ್ ಬದಲಾಯಿಸಿಲ್ಲ. ಮಂತ್ರಿಸ್ಥಾನಕ್ಕೆ ಲಾಬಿ ಮಾಡಲು ದೆಹಲಿಗೆ ಬಂದಿಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕಾಗಿ ದೆಹಲಿಗೆ ಬಂದಿದ್ದೇನೆ. ರಾಜ್ಯದ ಕೇಂದ್ರ ಸಚಿವರು ಮತ್ತು ಉಸ್ತುವಾರಿ ಅರುಣ್ ಸಿಂಗ್ ಭೇಟಿಯಾಗಿದ್ದೇನೆ. ಸಂಘಟನೆಯ ಇಬ್ಬರು ಮುಖಂಡರನ್ನು ಭೇಟಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಅವರ ಜೊತೆಗೆ ಯಾವ ವಿಚಾರದ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳಲ್ಲ. ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ದೆಹಲಿ ಭೇಟಿ ಯಶಸ್ವಿಯಾಗಿದೆ ಎಂದು ದೆಹಲಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಚಾರ್ಯ  ತಿಳಿಸಿದ್ದಾರೆ.

ಮಿತ್ರ ಮಂಡಳಿಯಲ್ಲಿಯೂ ನಡುಕ.. ಯಾರಿಗೆಲ್ಲ ಆತಂಕ

ದೆಹಲಿ ಯಾತ್ರೆ ಮುಗಿಸಿರುವ ರೇಣುಕಾಚಾರ್ಯ  ಬೆಂಗಳೂರಿಗೆ ತೆರಳುವ ಮುನ್ನ ಮಾತನಾಡಿದರು. ಸಿಡಿ ಸಂಕಷ್ಟದಲ್ಲಿ ರೇಣುಕಾಚಾರ್ಯ ಸಿಲುಕಿಕೊಳ್ಳುತ್ತಾರೆಯೇ ಎಂಬ ವದಂತಿಗಳು ಎದ್ದಿದ್ದವು.

ಕೊರೋನಾ ಸಂಕಷ್ಟ ಕಾಲದಲ್ಲಿ ಜನರೊಂದಿಗೆ ಬೆರೆತ ಶಾಸಕ ರೇಣುಕಾಚಾರ್ಯ ಪ್ರತಿ ಕ್ಷಣ ಸ್ಪಂದಿಸುವ ಕೆಲಸ ಮಾಡಿದ್ದರು. ಹೊನ್ನಾಳಿ ಶಾಸಕರ ಕೆಲಸ ಮನ್ನಣೆಗೆ ಪಾತ್ರವಾಗಿತ್ತು. 

 

Follow Us:
Download App:
  • android
  • ios