'ಜು.26ರ ಬಳಿಕ ಬಿಜೆಪಿಗೆ ಹೋದ ವಲಸಿಗರ್ಯಾರಿಗೂ ಸಚಿವ ಸ್ಥಾನವಿಲ್ಲ'

  • ಪಕ್ಷ ಬಿಟ್ಟು ಬಿಜೆಪಿಗೆ ಹೋದ ಬಾಂಬೆ ಟೀಂನ ಯಾರಿಗೂ ಸಚಿವ ಸ್ಥಾನ ನೀಡುವುದಿಲ್ಲ
  • ಕಾಂಗ್ರೆಸ್, ಜೆಡಿಎಸ್‌ಗೆ ಡಿಚ್ ಮಾಡಿ ಹೋದವರ ಕಥೆ ಮುಗಿಯಿತು
  • ಎಲ್ಲಾ ವಿಚಾರ ಸಿಡಿಯಲ್ಲಿದೆ. ಸಿಡಿ ಬಗ್ಗೆ ನ್ಯಾಯಾಲಯದಿಂದ ತಡೆ ತಂದಿದ್ದಾರೆ. 
no portfolio for mumbai team After july 26 says KPCC Leader lakshman snr

ಮೈಸೂರು (ಜು.23): ಪಕ್ಷ ಬಿಟ್ಟು ಬಿಜೆಪಿಗೆ ಹೋದ ಬಾಂಬೆ ಟೀಂನ ಯಾರಿಗೂ ಸಚಿವ ಸ್ಥಾನ ನೀಡುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಹೇಳಿದರು. 

ಗುರುವಾರ ಮೈಸೂರಿನಲ್ಲಿ ಮಾತನಾಡಿದ ಅವರು ಜು. 26ರ ನಂತರ ನೀವೆಲ್ಲಾ ನೋಡಿ  ಏಣಿ ಹತ್ತಿದ ಮೇಲೆ ಒದೆಯುವುದು ಬಿಜೆಪಿ ಕೆಲಸ. ಬಳಸಿ ಬಿಸಾಡುವುದು ಬಿಜೆಪಿ ಡಿಎನ್ಎನಲ್ಲಿ ಇದೆ ಎಂದರು. 

ಮೋದಿ ಅಮಿತ್ ಶಾ ಗುಜರಾತಿ ಬ್ಯುಸಿನೆಸ್ ಮ್ಯಾನ್‌ಗಳು, ಕಾಂಗ್ರೆಸ್, ಜೆಡಿಎಸ್‌ಗೆ ಡಿಚ್ ಮಾಡಿ ಹೋದವರ ಕಥೆ ಮುಗಿಯಿತು. ಮುಂದೆ ಅವರಿಗೆ ಟಿಕೆಟ್ ಸಹ ಕೊಡಲ್ಲ.ಅವರೆಲ್ಲಾ ಪ್ರೇತ ಬೇತಾಳರಾಗಿ ಅಲೆಯುತ್ತಾರೆ. ಅವರ ಎಲ್ಲಾ ವಿಚಾರ ಸಿಡಿಯಲ್ಲಿದೆ. ಸಿಡಿ ಬಗ್ಗೆ ನ್ಯಾಯಾಲಯದಿಂದ ತಡೆ ತಂದಿದ್ದಾರೆ. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ ಎಂದು ಅವರು ಕುಟುಕಿದರು.

ಕ್ಯಾಬಿನೆಟ್ ಸಭೆ ಮುಗಿಯುತ್ತಿದ್ದಂತೆಯೇ ಪತ್ರ ಹಿಡಿದು ಸಿಎಂ ಕಚೇರಿಗೆ ಹೋದ ವಲಸಿಗ ಸಚಿವರು

ರಾಜ್ಯದಲ್ಲಿ ಬಿಜೆಪಿ ಅದಿಕಾರಕ್ಕೆ ಬಂದ ದಿನದಿಂದ ಒಂದಲ್ಲ ಒಂದು ರೀತಿಯ  ಡ್ರಾಮಾ ಪ್ರತಿನಿತ್ಯ ನಡೆಯುತ್ತಿದೆ.  ಇದು ನಾಚಿಕೆಗೇಡಿನ ಸಂಗತಿಯಾಗಿದೆ.  ಯಡಿಯೂರಪ್ಪನವರ ಕುರಿತು ಕಾಂಗ್ರೆಸ್ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ ಪಾಟೀಲ್  ನೀಡಿರುವ ಹೇಳಿಕೆಗಳು ಅವರ ವೈಯಕ್ತಿಕ. ಅವರ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ  ಯಾವುದೇ ಸಂಬಂಧವಿಲ್ಲ. ಆದರೆ ಇದನ್ನು ಟೀಕಿಸಿರುವ ಎಚ್, ವಿಶ್ವನಾಥ್ ಯಾವ ಪಕ್ಷದಲ್ಲಿದ್ದಾರೆ ಎಂದು ಅವರು ಪ್ರಶ್ನಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‌.ಟಿ ಸೋಮಶೇಖರ್ ಅವರು ಕಳೆದ 2 ವರ್ಷದಿಂದ ಮೈಸೂರಿಗೆ ಎಷ್ಟು ಅನುದಾನ ತಂದಿದ್ದಾರೆಂಬುದನ್ನು ಶ್ವೇತಪತ್ರ ಹೊರಡಿಸಲಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡುಬಾಕ್ ಪ್ಯಾಕೇಜ್ ನೀಡುತ್ತಿದೆ. ಆದರೆ ಅದು ಜನರಿಗೆ ತಲುಪುತ್ತಿಲ್ಲ ಎಂದರು.

Latest Videos
Follow Us:
Download App:
  • android
  • ios