ಮೈಸೂರು, [ಫೆ.21]: ಸಿದ್ದರಾಮಯ್ಯ ಅವರು ಕ್ಲೀನ್ ಇಮೇಜ್ ರಾಜಕಾರಣಿ ಎಂದು ಬಿಂಬಿಸಿಕೊಂಡಿದ್ದಾರೆ. ಆದ್ರೆ, ಮುಂದಿನ 6 ತಿಂಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಣ್ಣ ಬಯಲು ಮಾಡುತ್ತೇನೆ ಎಂದು ಸಿಎಂ ಬಿ.ಎಸ್​ ಯಡಿಯೂರಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಿನ್ನೆ ಸದನದಲ್ಲಿ ಬಿಜೆಪಿಗೆ ಜನರು ಬಡಿಗೆ ತೆಗೆದುಕೊಂಡು ಹೊಡಿತಾರೆಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿಎಸ್ ವೈ, ಸಿದ್ದರಾಮಯ್ಯ ಅವರು 5 ವರ್ಷ ಆಡಳಿತ ಮಾಡಿದರು. ಕುಮಾರಸ್ವಾಮಿ ಒಂದೂವರೆ ವರ್ಷ ಆಡಳಿತ ಮಾಡಿದರು. ನಿಮ್ಮ ಕೆಲಸ ಮೆಲುಕು ಹಾಕಿದರೆ, ಜನರು ಯಾರಿಗೆ ಬಡಿಗೆ ತೆಗೆದುಕೊಂಡು ಹೊಡಿತಾರೆ ಗೊತ್ತಾಗುತ್ತದೆ ಎಂದು ಟಾಂಗ್  ಕೊಟ್ಟರು.

ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಹಾಲಿ ಮುಖ್ಯಮಂತ್ರಿ ಪುತ್ರ ದಿಢೀರ್ ಭೇಟಿ..!

ನಿಮ್ಮ ಆಡಳಿತದಲ್ಲಿ ನೀವು ಏನ್ ಮಾಡಿದ್ರಿ? ಎಂದು ಎಲ್ಲರಿಗೂ ಗೊತ್ತಿದೆ. 6 ತಿಂಗಳಲ್ಲಿ ನಮ್ಮ ಆಡಳಿತ ಹೇಗಿರಲಿದೆ ಎಂದು ಕಾಂಗ್ರೆಸ್​ಗೆ ಗೊತ್ತಾಗಲಿದೆ. 6 ತಿಂಗಳಲ್ಲಿ ಸಿದ್ದರಾಮಯ್ಯನವರ ಬಣ್ಣ ಬಯಲು ಮಾಡುತ್ತೇನೆ ಎಂದು ಕಿಡಿಕಾರಿದರು.

ಈ ಬಾರಿ ಬಜೆಟ್​ನಲ್ಲಿ ರೈತರಿಗೆ ಹಾಗೂ ಕೃಷಿಗೆ ಆದ್ಯತೆಯ ನೀಡುತ್ತೇವೆ. ನೆರೆ ಸಂತ್ರಸ್ತರಿಗೆ ನಾವು ಎಲ್ಲ ಸಹಾಯ ಮಾಡಿದ್ದೇವೆ. ಚಿಕ್ಕ ಪುಟ್ಟ ಲೋಪವಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಸಿದ್ದು ಕ್ಷೇತ್ರ ಬಾದಾಮಿಗೆ 600 ಕೋಟಿ ರು. ಬಂಪರ್‌!

 ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳುವ ಉದ್ದೇಶ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ 600 ಕೋಟಿ ರು.ಗಳ ಅನುದಾನ ನೀಡಲು ಹಸಿರು ನಿಶಾನೆ ತೋರಿದ್ದನ್ನ ಇಲ್ಲಿ ಸ್ಮರಿಸಬಹದು.