ಬೆಂಗಳೂರು, (ಫೆ.21): ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರಿಗೆ ಇದೇ ಫೆಬ್ರವರಿ 27ರಂದು ಹುಟ್ಟು ಹಬ್ಬದ ಸಂಭ್ರಮ.   77 ವರ್ಷ ದಾಟಿ 78ನೇ ವರ್ಷಕ್ಕೆ  ಕಾಲಿಡಲಿರುವ ಸಿಎಂ ಯಡಿಯೂರಪ್ಪನವರ  ಜನ್ಮದಿನವನ್ನು  ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ಸಿಎಂ ಪುತ್ರ, ರಾಜ್ಯ ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಅವರು ಇಂದು [ಶುಕ್ರವಾರ] ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹುಟ್ಟು ಹಬ್ಬ ಕಾರ್ಯಕ್ರಮಕ್ಕ ಆಗಮಿಸಬೇಕೆಂದು ಆಹ್ವಾನಿಸಿದರು.

ಸಿದ್ದು ಕ್ಷೇತ್ರ ಬಾದಾಮಿಗೆ 600 ಕೋಟಿ ರು. ಬಂಪರ್‌!

ಅಂದಹಾಗೆ ಮುಖ್ಯಂತ್ರಿಗಳ ಹುಟ್ಟು  ಹಬ್ಬಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವುದು ಮಾಜಿ ಸಿಎಂ ಸಿದ್ದರಾಮಯ್ಯ. ಇಂದು [ಶುಕ್ರವಾರ] ಬಿಎಸ್​ವೈ ಮಗ ಬಿ.ವೈ.ವಿಜಯೇಂದ್ರ ವಿಪಕ್ಷ ನಾಯಕ ಸಿದ್ದರಾಮಯ್ಯನವರ ನಿವಾಸಕ್ಕೆ ಭೇಟಿ ನೀಡಿ ಆಹ್ವಾನಿಸಿದ್ದಾರೆ ಎಂದು ತಿಳಿದು ಬಂದಿದೆ. 

ಭೇಟಿ ಬಳಿಕ ಮಾತನಾಡಿದ ವಿಜಯೇಂದ್ರ, ಫೆ.27ಕ್ಕೆ ನಮ್ಮ ತಂದೆ 77ವರ್ಷ ದಾಟಿ 78ಕ್ಕೆ ಕಾಲಿಡುತ್ತಿದ್ದು,  ಸಿದ್ದರಾಮಯ್ಯನವರೇ  ಹುಟ್ಟುಹಬ್ಬ ಕಾರ್ಯಕ್ರಮದ ಮುಖ್ಯ ಅತಿಥಿಯಾಗಲಿದ್ದಾರೆ. ಹೀಗಾಗಿ ಅವರನ್ನ ಆಹ್ವಾನಿಸಲು ಬಂದಿದ್ದೆ ಎಂದು ಸ್ಪಷ್ಟಪಡಿಸಿದರು.

ಇನ್ನು ಬಿಎಸ್ ವೈ ಜನ್ಮದಿನ ಕಾರ್ಯಕ್ರಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೂ ಆಹ್ವಾನ ನೀಡುತ್ತಾರೆ ಎನ್ನುವ ಮಾಹಿತಿಗಳು ತಿಳಿದುಬಂದಿದೆ.

ಒಟ್ಟಿನಲ್ಲಿ ರಾಜಕೀಯವಾಗಿ ಎಷ್ಟೇ ವಿರೋಧಿಗಳಾಗಿರಲಿ ಇತಂಹ ಸಭೆ ಸಮಾರಂಭಗಳಲ್ಲಿ ಯಾವುದೇ ದ್ವೇಷ, ರಾಜಕೀಯವಿಲ್ಲದೇ ಭಾಗವಹಿಸುತ್ತಿರುವುದು ವಿಶೇಷ.