Asianet Suvarna News Asianet Suvarna News

ಕೇಜ್ರಿವಾಲ್ ಬಳಿಕ ಇದೀಗ ಪಂಜಾಬ್‌ನಲ್ಲಿ ಭಗವಂತ್ ಮಾನ್ ಹೈಡ್ರಾಮಾ, ಸೆ.22ಕ್ಕೆ ವಿಶ್ವಾಸ ಮತ ಯಾಚನೆ!

ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ ಬಿಜೆಪಿ ವಿರುದ್ದದ ಹಗ್ಗಜಗ್ಗಾಟದ ನಡುವೆ ವಿಶ್ವಾಸ ಮತ ಯಾಚನೆ ಕಾರ್ಡ್ ತಂತ್ರ ಪ್ರಯೋಗಿಸಿತ್ತು. ಈ ಹೈಡ್ರಾಮಾ ಬಳಿಕ ಇದೀಗ ಪಂಜಾಬ್ ಸರದಿ. ಭಗವಂತ್ ಮಾನ್ ಆಪ್ ಸರ್ಕಾರ ಪಂಜಾಬ್‌ನಲ್ಲಿ ಬಹುಮತ ಸಾಬೀತು ಪಡಿಸುವುದಾಗಿ ಘೋಷಿಸಿದ್ದಾರೆ. ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸಿರುವ ಆಪ್ ಸರ್ಕಾರ ಇದೀಗ ಬಿಜೆಪಿಗೆ ಠಕ್ಕರ್ ನೀಡಲು ಈ ತಂತ್ರ ಉಪಯೋಗಿಸಿದೆ.
 

CM bhagwant mann announces majority test in Punjab Assembly on sep 22nd after Arvind kejriwal in delhi ckm
Author
First Published Sep 19, 2022, 4:03 PM IST

ಪಂಜಾಬ್(ಸೆ.19): ಚಂಡೀಘಡ ವಿಶ್ವಿವಿದ್ಯಾಲಯದ ವಿಡಿಯೋ ಲೀಕ್ ಪ್ರಕರಣದ ಕಾವು ಇನ್ನೂ ತಣ್ಣಗಾಗಿಲ್ಲ. ಆದರೆ ಇದರ ನಡುವೆ ಬಿಜೆಪಿ ಆಮಿಷಗಳಿಗೆ ಆಮ್ ಆದ್ಮಿ ಪಾರ್ಟಿ ಯಾವುದೇ ಶಾಸಕರು ಬಲಿಯಾಗಿಲ್ಲ, ಆಪ್ ಸಂಘಟಿತ ಪಕ್ಷ ಎಂಬುದನ್ನು ಸಾಬೀತುಪಡಿಸಲು ಮುಂದಾಗಿದೆ. ಇದಕ್ಕಾಗಿ ಗುರವಾರ(ಸೆ.22) ಪಂಜಾಬ್ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುವುದಾಗಿ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಘೋಷಿಸಿದ್ದಾರೆ.  ಆಪ್ ಶಾಸಕರಿಗೆ ಹಣದ ಆಮಿಷ, ಉಪ ಮುಖ್ಯಂತ್ರಿ ಮನೀಸ್ ಸಿಸೋಡಿಯಾ ಮೇಲೆ ಸಿಬಿಐ ದಾಳಿ, ಬಳಿಕ ಬಿಜೆಪಿ ಸೇರಲು ಆಮಿಷ ಸೇರಿದಂತೆ ಹಲವು ಆರೋಪಗಳನ್ನು ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ ಮಾಡಿತ್ತು. ಈ ಆರೋಪಗಳ ಬಳಿಕ ಆಪ್ ಪಕ್ಷ ಒಗ್ಗಟ್ಟಿನಿಂದ ಇದೆ ಎಂಬುದನ್ನು ತೋರಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಬಹುಮತ ಸಾಬೀತು ಮಾಡಿ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದರು. ಇದೀಗ ಇದೇ ಗೇಮ್ ಪ್ಲಾನ್ ಪಂಜಾಬ್‌ನಲ್ಲೂ ಆಮ್ ಆಡುತ್ತಿದೆ. ಇಲ್ಲೂ ಕೂಡ ನಿರೀಕ್ಷೆಯಂತೆ ಆಪ್ ಗೆಲುವು ಸಾಧಿಸಲಿದೆ.

ಪಂಜಾಬ್ ಸರ್ಕಾರ(Punjab Govt) ಅಲುಗಾಡಿಸುವ ಪ್ರಯತ್ನಕ್ಕೆ ಬಿಜೆಪಿ(BJP) ಕೈಹಾಕಿದೆ. ಆಪ್ ಶಾಸಕರಿಗೆ(AAP MLA) ಕೋಟಿ ಕೋಟಿ ರೂಪಾಯಿ ಆಮಿಷ ನೀಡಿದ್ದಾರೆ. ಬಿಜೆಪಿ ಸೇರಿಕೊಳ್ಳುವಂತೆ ಬೆದರಿಕೆ ಹಾಕಲಾಗುತ್ತಿದೆ ಅನ್ನೋ ಆರೋಪನ್ನು ಆಮ್ ಆದ್ಮಿ ಪಾರ್ಟಿ(Aam Aadmi party) ಮಾಡಿದೆ. ಇದೀಗ ಬಿಜೆಪಿಯ ಯಾವುದೇ ಪ್ರಯತ್ನಕ್ಕೆ ಆಪ್ ಅಲುಗಾಡಿಲ್ಲ ಅನ್ನೋದನ್ನು ತೋರಿಸಿಕೊಳ್ಳಲು ಗುರುವಾರ ಬಹುಮತ ಸಾಬೀತಿಗೆ  ಭಗವಂತ್ ಮಾನ್(Bhagwant Mann) ಮುಂದಾಗಿದ್ದಾರೆ.

ಆಪ್ ಶಾಸಕ ಅಮಾನತುಲ್ಹಾ ಖಾನ್ ಬಂಧನ, 5 ಕಡೆ ದಾಳಿ ನಡೆಸಿ ಅಕ್ರಮ ಪಿಸ್ತೂಲ್, ನಗದು ವಶ!

ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್(Delhi CM Arvind kejriwal) ಮಾಡಿದ ಆರೋಪ ಹಾಗೂ ಕಾರಣವನ್ನು ನೀಡಿ ಪಂಜಾಬ್‌ನಲ್ಲಿ ಭಗವಂತ್ ಸಿಂಗ್ ಮಾನ್ ಬಹುಮತ ಸಾಬೀತಿಗೆ ದಿನಾಂಕ ಘೋಷಿಸಿದ್ದಾರೆ. ಪಂಜಾಬ್‌ನಲ್ಲಿ117 ವಿಧಾನಸಭಾ ಸ್ಥಾನಗಳ ಪೈಕಿ ಆಮ್ ಆದ್ಮಿ ಪಾರ್ಟಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಅತೀ ದೊಡ್ಡ ಪಾರ್ಟಿಯಾಗಿ ಸರ್ಕಾರ ರಚಿಸಿದೆ. ಕಾಂಗ್ರೆಸ್ 18 ಸ್ಥಾನ ಗೆದ್ದಿದ್ದರೆ, ಬಿಜೆಪಿ ಗೆದ್ದಿರುವುದು ಕೇವಲ 2 ಸ್ಥಾನ ಮಾತ್ರ.  ಹೀಗಾಗಿ ಆಮ್ ಆದ್ಮಿ ಪಾರ್ಟಿ ದೆಹಲಿ ರಣತಂತ್ರವನ್ನು ಪಂಜಾಬ್‌ನಲ್ಲಿ ಪ್ರಯೋಗಿಸಿದೆ.

ಭಗವಂತ್ ಮಾನ್ ಬಹುಮತ ಸಾಬೀತು ಅವಶ್ಯಕತೆ ಸದ್ಯಕಿಲ್ಲ. ಬಹುಮತ ಸಾಬೀತು(majority test) ಮಾಡಬೇಕಾದ ಪರಿಸ್ಥಿತಿಯೂ ಬಂದಿಲ್ಲ. ಆದರೆ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಈ ವಿಶ್ವಾಸಮತ ಯಾಚನೆಯನ್ನು ಆಪ್ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಚಂಡೀಘಡ ವಿಶ್ವಾವಿದ್ಯಾಲದ ವಿದ್ಯಾರ್ಥನಿಯರ ವಿಡಿಯೋ ಲೀಕ್ ಪ್ರಕರಣ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಚಂಡೀಘಡ ಕೊತ ಕೊತ ಕುದಿಯುತ್ತಿದೆ. ಈ ಸಂದರ್ಭದಲ್ಲಿ ರಾಜಕೀಯ ಶಕ್ತಿ ಪ್ರದರ್ಶನಕ್ಕಿಂತ ಪರಿಸ್ಥಿತಿಯನ್ನು ನಿಭಾಯಿಸಿ, ಸಂಕಷ್ಟದಲ್ಲಿ ಸಿಲುಕಿರುವ ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು. ಆದರೆ ಆಪ್ ತನ್ನ ರಾಜಕೀಯದಲ್ಲೇ ಮುಳುಗಿದೆ ಅನ್ನೋ ಆರೋಪ ಕೇಳಿಬಂದಿದೆ.

Punjab AAP ಶಾಸಕರ ಖರೀದಿಗೆ ಆಪರೇಷನ್ ಕಮಲ , ಬಿಜೆಪಿ ವಿರುದ್ಧ ಕೇಜ್ರಿವಾಲ್ ಕಿಡಿ!

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ವಿಧಾನಸಭೆಯಲ್ಲಿ ಮಂಡಿಸಿದ ವಿಶ್ವಾಸಮತ ನಿರ್ಣಯವನ್ನು ಗೆದ್ದಿದ್ದಾರೆ. ಆಮ್‌ ಆದ್ಮಿ ಪಕ್ಷದ ಶಾಸಕರು ಸದನದಲ್ಲಿ ಹಾಜರಿದ್ದು ನಿರೀಕ್ಷೆಯಂತೆ ವಿಶ್ವಾಸ ಮತ ನಿರ್ಣಯದ ಪರ ಮತ ಚಲಾಯಿಸಿದರು. ಬಿಜೆಪಿ ಶಾಸಕ ವಿಜೇಂದರ್‌ ಗುಪ್ತಾ, ಅಭಯ ವರ್ಮಾ ಹಾಗೂ ಮೋಹನ್‌ ಸಿಂಗ್‌ ಬಿಶ್‌್ತ ಉಪಸ್ಪೀಕರ್‌ ರಾಖಿ ಬಿರ್ಲಾ ಅವರೊಂದಿಗೆ ವಾಗ್ವಾದ ನಡೆಸಿದ ಕಾರಣ ಅವರಿಗೆ ಸದನದಿಂದ ಹೊರಹೋಗುವಂತೆ ಸೂಚಿಸಲಾಯಿತು. ಇದರ ವಿರುದ್ಧ ಪ್ರತಿಭಟಿಸಿದ ಉಳಿದ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು. ಹೀಗಾಗಿ ಯಾವುದೇ ವಿರುದ್ಧ ಮತ ಬೀಳಲಿಲ್ಲ.

Follow Us:
Download App:
  • android
  • ios