*   ಸಂಪುಟ ವಿಸ್ತರಣೆ ಸಿಎಂ ವಿದೇಶ ಪ್ರವಾಸಕ್ಕೂ ಮೊದಲೋ ಅಥವಾ ನಂತರವೋ?*  ನೀವೆಲ್ಲ ನನ್ನ ಕಣ್ಗಾವಲಿನಲ್ಲಿ ಇದ್ದೀರಿ*  ಜಿಪಂ ಸಿಇಒಗಳಿಗೆ ಸಿಎಂ ಖಡಕ್‌ ವಾರ್ನಿಂಗ್‌

ಬೆಂಗಳೂರು(ಮೇ.10): ಸಾಕಷ್ಟು ಕುತೂಹಲ ಮೂಡಿಸಿರುವ ಸಂಪುಟ ಸರ್ಜರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ವಿದೇಶ ಪ್ರವಾಸಕ್ಕೂ ಮೊದಲೇ ನಡೆಯುತ್ತದೆಯೇ ಅಥವಾ ನಂತರ ನಡೆಯಲಿದೆಯೇ ಎಂಬ ಚರ್ಚೆ ಆಡಳಿತಾರೂಢ ಬಿಜೆಪಿ(BJP) ಪಾಳಯದಿಂದ ಕೇಳಿಬರುತ್ತಿದೆ.

ಕಳೆದ ಹಲವು ತಿಂಗಳುಗಳಿಂದ ಸಂಪುಟ ವಿಸ್ತರಣೆ(Cabnet Expansion) ಅಥವಾ ಪುನಾರಚನೆ ಈಗ ನಡೆಯಲಿದೆ, ಆಗ ನಡೆಯಲಿದೆ ಎಂಬ ಸುದ್ದಿಯೇ ಕೇಳಿಬರುತ್ತಿದೆಯೇ ಹೊರತು ನಿಖರವಾಗಿ ಯಾವಾಗ ಎಂಬುದಕ್ಕೆ ಮುಖ್ಯಮಂತ್ರಿ ಆದಿಯಾಗಿ ಬಿಜೆಪಿಯ ಯಾವ ನಾಯಕರ ಬಳಿಯೂ ಉತ್ತರವಿಲ್ಲ.

ಬಜೆಟ್‌ ಘೋಷಣೆ ಜಾರಿ ವಿಳಂಬ ಸಹಿಸಲ್ಲ: ಸಿಎಂ ಬೊಮ್ಮಾಯಿ

ಈ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಂಗಳವಾರ ದೆಹಲಿಗೆ ತೆರಳುತ್ತಿದ್ದು, ಮತ್ತೆ ಸಂಪುಟ ಕಸರತ್ತಿನ ಬಗ್ಗೆ ಕುತೂಹಲ ಗರಿಗೆದರಿದೆ. ಮುಖ್ಯಮಂತ್ರಿಗಳು ಪ್ರತಿ ಬಾರಿ ದೆಹಲಿಗೆ ತೆರಳುವಾಗಲೂ ಇಂಥದೊಂದು ಚರ್ಚೆ ನಡೆದು, ಕೊನೆಗೆ ಅವರು ವಾಪಸಾದ ಬಳಿಕ ತಣ್ಣಗಾಗುತ್ತದೆ. ಈ ಬಾರಿಯಾದರೂ ಸಂಪುಟ ಕಸರತ್ತು ತಾರ್ಕಿಕ ಹಂತ ತಲುಪುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಮುಂಬರುವ ನವೆಂಬರ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ ಸಂಬಂಧ ರಾಜ್ಯದ ಕೈಗಾರಿಕಾ ಇಲಾಖೆ ವಿವಿಧ ದೇಶಗಳ ರಾಯಭಾರಿಗಳೊಂದಿಗಿನ ಸಂವಾದ ಕಾರ್ಯಕ್ರಮವನ್ನು ಮಂಗಳವಾರ ಸಂಜೆ ದೆಹಲಿಯ ಹೋಟೆಲ್‌ವೊಂದರಲ್ಲಿ ಆಯೋಜಿಸಿದೆ. ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ(Murugesh Nirani) ಅವರು ಸೋಮವಾರವೇ ದೆಹಲಿಗೆ ತೆರಳಿ ಸಿದ್ಧತೆ ಕೈಗೊಂಡಿದ್ದಾರೆ. ಮುಖ್ಯಮಂತ್ರಿಗಳು ಈ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಬೆಳಗ್ಗೆ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಮಂಗಳವಾರ ದೆಹಲಿಯಲ್ಲೇ ವಾಸ್ತವ್ಯ ಹೂಡುವ ಮುಖ್ಯಮಂತ್ರಿಗಳು ಬುಧವಾರ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಹೀಗಾಗಿ, ದೆಹಲಿ ಭೇಟಿ ವೇಳೆ ಮುಖ್ಯಮಂತ್ರಿಗಳು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಸಮಾಲೋಚನೆ ನಡೆಸಬಹುದು ಎನ್ನಲಾಗುತ್ತಿದೆ.

3 ದಿನದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಎಂದ ಯಡಿಯೂರಪ್ಪ

ಆದರೆ, ಕಳೆದ ವಾರ ಬೆಂಗಳೂರಿಗೆ(Bengaluru) ಬಂದಿದ್ದ ಪಕ್ಷದ ಪ್ರಭಾವಿ ನಾಯಕ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರು ದೆಹಲಿಗೆ ತೆರಳಿದ ಬಳಿಕ ಸಂಪುಟ ಕುರಿತು ಸಂದೇಶ ರವಾನಿಸುವುದಾಗಿ ಮುಖ್ಯಮಂತ್ರಿಗಳಿಗೆ ಹೇಳಿದ್ದರು. ಹಾಗಂತ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ತಿಳಿಸಿದ್ದರು. ಆದರೆ, ಇದುವರೆಗೂ ಅಂಥ ಯಾವುದೇ ಸಂದೇಶ ದೆಹಲಿಯ ವರಿಷ್ಠರಿಂದ ಬೊಮ್ಮಾಯಿ ಅವರಿಗಾಗಲಿ ಅಥವಾ ರಾಜ್ಯ ಬಿಜೆಪಿ ನಾಯಕರಿಗಾಗಲಿ ಬಂದಿಲ್ಲ.
ಹೀಗಾಗಿ, ಮುಖ್ಯಮಂತ್ರಿಗಳು ವರಿಷ್ಠರನ್ನು ಭೇಟಿ ಮಾಡುವ ಪ್ರಯತ್ನ ಮಾಡುತ್ತಾರಾ? ಮಾಡಿದರೂ ಅವರು ಸಮಯಾವಕಾಶ ನೀಡುತ್ತಾರಾ? ಸಮಯಾವಕಾಶ ನೀಡಿದರೂ ಸಂಪುಟ ಕಸರತ್ತಿನ ಬಗ್ಗೆ ಏನಾದರೂ ನಿರ್ಧಾರ ಹೊರಬೀಳುತ್ತದಾ ಎಂಬ ಪ್ರಶ್ನೆಗಳಿಗೆ ಮಂಗಳವಾರದ ಬಳಿಕ ಉತ್ತರ ಸಿಗಬಹುದು.

ನೀವೆಲ್ಲ ನನ್ನ ಕಣ್ಗಾವಲಿನಲ್ಲಿ ಇದ್ದೀರಿ: ಜಿಪಂ ಸಿಇಒಗಳಿಗೆ ಸಿಎಂ ಖಡಕ್‌ ವಾರ್ನಿಂಗ್‌

ಬೆಂಗಳೂರು: ಆಡಳಿತಕ್ಕೆ ಚುರುಕು ನೀಡಲು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಮರುದಿನ ಸೋಮವಾರ ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯ್ತಿ ಸಿಇಒಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದರು. ಸಭೆಯಲ್ಲಿ, ‘ಬಜೆಟ್‌ನಲ್ಲಿ ಘೋಷಿತ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬ ಧೋರಣೆ ಸಹಿಸುವುದಿಲ್ಲ. ನೀವೆಲ್ಲರೂ ನನ್ನ ಕಣ್ಗಾವಲಿನಲ್ಲಿದ್ದೀರಿ. ನಾಲ್ಕು ತಿಂಗಳ ಕೆಲಸವನ್ನು 12 ತಿಂಗಳು ಮಾಡುತ್ತಿದ್ದೀರಿ. ಈಗಿನಿಂದಲೇ ಬದಲಾವಣೆ ಮಾಡಿಕೊಳ್ಳಿ. ಜನರಿಗೆ ವಿಶ್ವಾಸ ಬರುವಂತೆ ಕೆಲಸ ಮಾಡಿ’ ಎಂದು ಖಡಕ್‌ ಸೂಚನೆ ನೀಡಿದರು.