ಉಪಚುನಾವಣಾ ಕದನ: ಎರಡೂ ಕ್ಷೇತ್ರಗಳಲ್ಲಿ ನಾವೇ ಗೆಲ್ಲೋದು, ಸಿಎಂ ಬೊಮ್ಮಾಯಿ
* ಮೇಕೆದಾಟು ವಿಚಾರದಲ್ಲಿ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ
* ಅಡ್ಡಿಪಡಿಸಲು ಅಥವಾ ಕಾನೂನು ರಚನೆ ಮಾಡಲು ತಮಿಳುನಾಡಿಗೆ ಹಕ್ಕಿಲ್ಲ
* ತುಂಗಭದ್ರಾ ನೀರು ನದಿ ಮೂಲಕ ಹರಿದು ಹೋಗೋದನ್ನು ತಡೆದು ಸಮರ್ಪಕವಾಗಿ ಬಳಸಿಕೊಳ್ತೇವೆ
ಬಳ್ಳಾರಿ(ಅ.03): ಸಿಂದಗಿ(Sindagi) ಹಾಗೂ ಹಾನಗಲ್(Hanagal) ಎರಡೂ ಉಪಚುನಾವಣೆ ನಮಗೆ ಸವಾಲಾಗಿದೆ. ಬರೆದಿಟ್ಟುಕೊಳ್ಳಿ ಎರಡರಲ್ಲೂ ನಾವು ಗೆದ್ದೇ ಗೆಲ್ತೇವೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಹೇಳಿದ್ದಾರೆ.
"
ಉಪಚುನಾವಣೆ ಕುರಿತು ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಇವತ್ತು ಕೋರ್ ಕಮೀಟಿಯಲ್ಲಿ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿ ಹೈಕಮಾಂಡ್‌ಗೆ ಕಳುಹಿಸುತ್ತೇವೆ. ಈ ಚುನಾವಣೆ ಸೆಮಿಫೈನಲ್ಸ್ ಅಲ್ಲ. ಯಾಕಂದ್ರೇ ನಂಜನಗೂಡು ಮತ್ತು ಗುಂಡ್ಲುಪೇಟೆ ಚುನಾವಣೆಯಲ್ಲಿ ಕಾಂಗ್ರೆಸ್(Congress) ಗೆದ್ದಿತ್ತು ನಂತರ ಅಧಿಕಾರ ಕಳೆದುಕೊಂಡರು ಎಂದು ತಿಳಿಸಿದ್ದಾರೆ.
ಹಾನಗಲ್ ಉಪಸಮರ : ಶಿವಕುಮಾರ್ ಉದಾಸಿ/ಪತ್ನಿಗೆ ಟಿಕೆಟ್ ಕೊಟ್ಟರೆ ಪರಿಣಾಮವೇನು?
ಮೇಕೆದಾಟು ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಅಂತ ಸ್ಪಷ್ಟಪಡಿಸಿದ ಸಿಎಂ ಬೊಮ್ಮಾಯಿ, ಅಡ್ಡಿಪಡಿಸಲು ಅಥವಾ ಕಾನೂನು ರಚನೆ ಮಾಡಲು ತಮಿಳುನಾಡಿಗೆ ಯಾವುದೇ ಹಕ್ಕಿಲ್ಲ. ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಯೋಜನೆಯಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
"
ತುಂಗಭದ್ರಾ ಜಲಾಶಯ ಹೂಳು ತೆಗೆಯುವ ವಿಚಾರದ ಬಗ್ಗೆ ಮಾತನಾಡಿದ ಅವರು, ಸಮಾನಾಂತರ ಜಲಾಶಯ ಮಾಡಲು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಡಿಪಿಆರ್ ತಯಾರಿಸಲು 20 ಕೋಟಿ ಮಂಜೂರು ಮಾಡಲಾಗಿದೆ. ತುಂಗಭದ್ರಾ ನೀರು ನದಿ ಮೂಲಕ ಹರಿದು ಹೋಗೋದನ್ನು ತಡೆದು ಸಮರ್ಪಕವಾಗಿ ಬಳಸಿಕೊಳ್ತೇವೆ. ಬಳ್ಳಾರಿ ಕಾರ್ಖಾನೆ ಹೆಸರಲ್ಲಿ ಲ್ಯಾಂಡ್ ಬ್ಯಾಂಕ್ ಮಾಡಲಾಗಿದೆ. ಅದನ್ನು ತಡೆದು ಭೂಮಿ ಸದ್ಬಳಕೆ ಮಾಡಿಕೊಳ್ಳುತ್ತೇವೆ ಅಂತ ತಿಳಿಸಿದ್ದಾರೆ.