ಕಾಂಗ್ರೆಸ್‌ನದ್ದು ಗ್ಯಾರೆಂಟಿ ಕಾರ್ಡ್ ಅಲ್ಲ; ಜಸ್ಟ್ ವಿಸಿಟಿಂಗ್ ಕಾರ್ಡ್: ಸಿಎಂ ಲೇವಡಿ
ಕಾಂಗ್ರೆಸ್ ಯಾಕೆ ಗ್ಯಾರೆಂಟಿ ಕಾರ್ಡ್ ಕೊಡುತ್ತಿದ್ದಾರೆ? ಅವರ ಮಾತಿಗೆ ಗ್ಯಾರೆಂಟಿ ಇಲ್ಲದ್ದಕ್ಕೆ ಕೊಡುತ್ತಿದ್ದಾರೆ. ಕೊಡಲಿ ಅದಕ್ಕಾಗಿ ಯಾಕೆ ಹತಾಶೆ ಆಗಬೇಕು? ಕಾಂಗ್ರೆಸ್ ಏನು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ ಜನರೇ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಾವ್ಯಾಕೆ ತಲೆಕೆಡಿಸಿಕೊಳ್ಳುವದು? ಗ್ಯಾರಂಟಿ ಕಾರ್ಡ್, ಅದು ಜಸ್ಟ್ ವಿಸಿಟಿಂಗ್ ಕಾರ್ಡ್ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಸಿಎಂ ಬೊಮ್ಮಾಯಿ ಲೇವಡಿ
ಮಂಗಳೂರು (ಮಾ.16) : ತಾಪಮಾನ ಏರಿಕೆಯಿಂದ ಬೇಸಿಗೆಯಲ್ಲಿ ಪಶ್ಚಿಮಘಟ್ಟ ಸೇರಿದಂತೆ ಹಲವೆಡೆ ಕಾಡ್ಗಿಚ್ಚು ಹೊತ್ತಿಕೊಂಡಿದೆ. ಬೆಂಕಿ ನಂದಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj bommai) ಹೇಳಿದರು.
ಪಶ್ಚಿಮಘಟ್ಟದ ಭಾಗದಲ್ಲಿ ಭಾರೀ ಕಾಡ್ಗಿಚ್ಚು ಹಬ್ಬಿರುವ ಕುರಿತು ಮಂಗಳೂರಿನಲ್ಲಿ ಮಾಧ್ಯಗಳಿಗೆ ಪ್ರತಿಕ್ರಿಯಿಸಿದ ಅವರು, ಸಾಮಾನ್ಯವಾಗಿ ಬೇಸಿಗೆ ಕಾಲವಾದ್ದರಿಂದ ಅಲ್ಲಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈಗಾಗಲೇ ಬೆಂಕಿ ನಂದಿಸುವ ಕಾರ್ಯ ನಡೆದಿದೆ ಎಂದರು.
ಬೆಳಗಾವಿ: ಘಟಪ್ರಭಾ ದಡದಲ್ಲಿ 108 ಅಡಿ ಬಸವಣ್ಣ ಪ್ರತಿಮೆ, ಸಿಎಂ ಬೊಮ್ಮಾಯಿ
ಪಶ್ಚಿಮಘಟ್ಟ ಭಾಗದಲ್ಲಿ ಹೆಚ್ಚಾಗಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಬೆಂಕಿ ಬೀಳದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಡಿಸಿ ಜೊತೆ ಸಭೆಯನ್ನು ಮಾಡಿದ್ದೇವೆ. ಸಾಂಪ್ರದಾಯಿಕ ಕಾರಣದಿಂದ ಅಲ್ಲಲ್ಲಿ ಬೆಂಕಿ ಬೀಳುತ್ತಿದೆ. ಬೆಂಕಿ ನಂದಿಸುವ ಬದಲು ಬೆಂಕಿ ಬೀಳದಂತೆ ಕ್ರಮ ಕೈಗೊಳ್ಳುತ್ತೇವೆ. ಅರಣ್ಯ ಇಲಾಖೆಗೆ ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಕೆ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದರು.
ಇದೇ ವೇಳೆ ಸಚಿವ ಸೋಮಣ್ಣ(V Somanna) ಅಸಮಾಧಾನಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೋಮಣ್ಣ ಮತ್ತು ಯಡಿಯೂರಪ್ಪ(BS Yadiyurappa) ಅವರದ್ದು ತಂದೆ-ಮಗನ ಸಂಬಂಧ. ಸೋಮಣ್ಣ ಅವರು ದೆಹಲಿಗೆ ವೈಯಕ್ತಿಕ ಕಾರಣಗಳಿಗೆ ಹೋಗಿದ್ದಾರೆ. ಸೊಮಣ್ಣ ಅವರಿಗೆ ಯಾರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಡಿಯೂರಪ್ಪ ಅವರು ಎಲ್ಲರಿಗಿಂತ ಹಿರಿಯರು, ನಮ್ಮ ನಾಯಕರು ಎಂದರು.
ಪ್ರತಿವರ್ಷ ಬೇಸಿಗೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ನೀರಿಗಾಗಿ ಹಾಹಾಕಾರ ವಿಚಾರವಾಗಿ ಪ್ರತಿಕ್ರಿಯಿಸಿದರು. ಕುಡಿಯುವ ನೀರಿನ ವಿಚಾರವಾಗಿ ಟಾಸ್ಕ್ ಫೊರ್ಸ್ ಮಾಡಲಾಗಿದೆ. ನೀರಿಗಾಗಿ ಕೆಲವು ಕಡೆ ತುಂಬಾ ಸಮಸ್ಯೆಗಳಿವೆ. ಕೆಲವು ಭಾಗದಲ್ಲಿ ಬೋರ್ ವೆಲ್ ಗಳು ಬತ್ತಿ ಹೋಗಿದೆ. ಈ ಬಗ್ಗೆ ವರದಿ ತರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್(Mysuru-Bengaluru expressway) ಹೈವೇ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಟೋಲ್ ಸಂಗ್ರಹಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ಅವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ. ಸಮಸ್ಯೆ ಇದ್ದರೆ ಕೂತು ಬಗೆಹರಿಸಿಕೊಳ್ಳಬಹುದು. ಕಾಂಗ್ರೆಸ್ ಸರ್ಕಾರ ಇದ್ದಾಗ ಟೋಲ್ ಆಗಿಲ್ವಾ? ಎಂದು ಪ್ರಶ್ನಿಸಿದರು. ಮುಂದುವರಿದು, ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಪರಂಪರೆಯಿದೆ. ಎಲ್ಲದರಲ್ಲೂ ರಾಜಕೀಯ ಮಾಡುವುದು. ಇದು ಕಾಂಗ್ರೆಸ್‌ನ ಸಭ್ಯತೆಯ ದಿವಾಳಿತನ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದಲ್ಲಿ ಹಿರಿಯರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಟಿಕೆಟ್ ಹಂಚಿಕೆ ಬಗ್ಗೆ ಹಿರಿಯರು ನಿರ್ಧಾರ ಕೈಗೊಳ್ಳುತ್ತಾರೆ. ಅಭ್ಯರ್ಥಿಗಳ ಪಟ್ಟಿ ಶೀಘ್ರವಾಗಿ ಬಿಡುಗಡೆಯಾಗಲಿದೆ. ಚುನಾವಣೆಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದರು.
ಮಹಾರಾಷ್ಟ್ರದ ಅನುದಾನ ತಡೆಯಲು ಕ್ರಮ: ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಮಾತಿಗೆ ಗ್ಯಾರೆಂಟಿ ಇಲ್ಲ:
ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡೋದು, ಬಿಡೋದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದರು. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನಿಂದ ಗ್ಯಾರಂಟಿ ಕಾರ್ಡ್(Congress Guarantee card) ಕೊಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು,. ಯಾಕೆ ಕೊಡುತ್ತಿದ್ದಾರೆ? ಅವರ ಮಾತಿಗೆ ಗ್ಯಾರೆಂಟಿ ಇಲ್ಲದ್ದಕ್ಕೆ ಕೊಡುತ್ತಿದ್ದಾರೆ. ಕೊಡಲಿ ಅದಕ್ಕಾಗಿ ಯಾಕೆ ಹತಾಶೆ ಆಗಬೇಕು? ಕಾಂಗ್ರೆಸ್ ಏನು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ ಜನರೇ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಾವ್ಯಾಕೆ ತಲೆಕೆಡಿಸಿಕೊಳ್ಳುವದು? ಗ್ಯಾರಂಟಿ ಕಾರ್ಡ್, ಅದು ಜಸ್ಟ್ ವಿಸಿಟಿಂಗ್ ಕಾರ್ಡ್ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಸಿಎಂ ಬೊಮ್ಮಾಯಿ ಲೇವಡಿ