ಕಾಂಗ್ರೆಸ್ ಮುಳಗುವಾಗ ಖರ್ಗೆ ಕೈಯಲ್ಲಿ ಸ್ಟಿಯರಿಂಗ್: ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಮುಳುಗಿ ಹೋಗುತ್ತಿರುವ ಹೊತ್ತಲ್ಲಿ ಕನ್ನಡಿಗ ಡಾ.ಮಲ್ಲಿಕಾರ್ಜುನ ಖರ್ಗೆ ಕೈಗೆ ಪಕ್ಷದ ಸ್ಟಿಯರಿಂಗ್ ಕೊಟ್ಟಿದ್ದಾರೆ: ಬೊಮ್ಮಾಯಿ
ಕಲಬುರಗಿ(ಅ.20): ಕಾಂಗ್ರೆಸ್ ಪಕ್ಷ ಮುಳಗುತ್ತಿರುವ ಹಡಗು ಎಂದು ಲೇವಡಿ ಮಾಡಿದ ಬೊಮ್ಮಾಯಿ ಇಡೀ ಕರ್ನಾಟಕದಲ್ಲಿ, ಅದರಲ್ಲೂ ಕಲ್ಯಾಣ ನಾಡಲ್ಲಿ ಬಿಜೆಪಿ ಅಲೆ ಸ್ಪಷ್ಟವಾಗಿದೆ. ವಿಜಯ ಸಂಕಲ್ಪ ಯಾತ್ರೆ ಸಂಚರಿಸಿದ ಕಡೆಗಳಲ್ಲೆಲ್ಲಾ ಸೇರುತ್ತಿರುವ ಸಹಸ್ರಾರು ಜನರೇ ಈ ಮಾತಿಗೆ ಕನ್ನಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ್ ಪಟ್ಟಣದಲ್ಲಿ ಬುಧವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಭಾಗಕ್ಕೆ ಕಾಂಗ್ರೆಸ್ ನಾಯಕರು ದ್ರೋಹ ಮಾಡಿದ್ದಾರೆ. ಈ ಬಾಗದವರು ಈ ಬಾಗದಿಂದಲೇ, ನಿಮ್ಮಿಂದ ಸ್ಥಾನಮಾನ ಪಡೆದುಕೊಂಡರೂ ಕೂಡಾ ಸವಲತ್ತು ನೀಡದೆ ಅನ್ಯಾಯ ಮಾಡಿದ್ದಾರೆ. ಜನ ಇದನ್ನೆಲ್ಲ ಅರಿತಿದ್ದಾರೆ. ಈಗ ಅಂತಹವರ ಆಟ ನಡೆಯೋದಿಲ್ಲ. ಜನರೇ ಅವರನ್ನು ಕೆಳಗಿಳಿಸಲು ಮುಂದಾಗಿದ್ದಾರೆಂದರು. ಕಲ್ಯಾಣ ಕರ್ನಾಟಕಕ್ಕೆ 3 ರಿಂದ 5 ಸಾವಿರ ಕೋಟಿ ರು ಕೊಡೋದಾಗಿ ತಾವು ಘೋಷಿಸಿದರೂ ಸಹ ಕಾಂಗ್ರೆಸ್ಸಿಗರು ಕೆಲವರು ಗೇಲಿ ಮಾಡುತ್ತಿದ್ದಾರೆ. ಅಂತಹವರಿಗೆ ಈ ಭಾಗದ ಪ್ರಗತಿಯಾಗಲಿ, ಇಲ್ಲಿನವರ ಕಲ್ಯಾಣವಾಗಲಿ ಬೇಕಾಗಿಲ್ಲ ಎಂದು ಪರೋಕ್ಷವಾಗಿ ಪ್ರಿಯಾಂಕ್ ಖರ್ಗೆ ಹೆಸರು ಪ್ರಸ್ತಾಪಿಸದೆ ತಿವಿದರು.
ವಕ್ಫ್ ಹಗರಣ ಬಗ್ಗೆ ಶೀಘ್ರ ದೊಡ್ಡ ಮಟ್ಟದ ತನಿಖೆ: ಸಿಎಂ ಬೊಮ್ಮಾಯಿ
ಅಲ್ಪಸಂಖ್ಯಾತರೂ ’ಕೈ’ ಬಿಡೋದು ನಿಶ್ಚಿತ: ಅಲ್ಪಸಂಖ್ಯಾತರ ಬಲದಿಂದ ಕಾಂಗ್ರೆಸ್ ಪಕ್ಷ ಬೀಗುತ್ತಿದೆ. ವಕ್ಫ್ ಆಸ್ತಿ ಗುಳು ಹಗರಣದ ದೊಡ್ಡ ಮಟ್ಟದ ತನಿಖೆ ನಡೆದು, ಕಲಬುರಗಿ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕಾಂಗ್ರೆಸ್ ಮುಖಂಡರು ನಡೆಸಿರುವ ಹಗರಣದ ಬಣ್ಣ ಬಯಲಾದಲ್ಲಿ ಕೈ ಹಿಡಿದಿರುವ ಅಲ್ಪಸಂಖ್ಯಾತ ಸಮುದಾಯ ಸಹ ಆ ಪಕ್ಷದಿಂದ, ಅಲ್ಲಿನ ಮುಖಂಡರಿಂದ ದೂರವಾಗೋದು ನಿಶ್ಚಿತ ಎಂದರು.
ಹಿಂದುಳಿದ ವರ್ಗ, ಎಸ್ಸಿ, ಎಸ್ಟಿಗೆ ದ್ರೋಹ ಮಾಡಿದಂತೆ ಅಲ್ಪಸಂಖ್ಯಾತರಿಗೂ ಕಾಂಗ್ರೆಸಿಗರೂ ದ್ರೋಹ ಮಾಡಿದ್ದಾರೆ. ವಕ್ಫ್ ಆಸ್ತಿಪಾಸ್ತಿ ಕಾಂಗ್ರೆಸ್ಸಿಗರು ನುಂಗಿ ನೀರು ಕುಡಿದಿದದಾರೆ. ತಮ್ಮ ಹೆಸರಿಗೆ, ತಮ್ಮ ಸಹೋದರರ ಹೆಸರಿಗೆ ಬರೆದುಕೊಂಡಿದ್ದಾರೆ. ಈಗಾಗಲೇ ಉಪ ಲೋಕಾಯುಕ್ತದಲ್ಲಿಯೂ ಇವೆಲ್ಲ ಹಗರಣಗಳು ನಮೂದಾಗಿವೆ . ಇನ್ನಷ್ಟುದೊಡ್ಡ ಪ್ರಮಾಣದ ತನಿಖೆ ಅಗತ್ಯವಿದ್ದು ಕೂಡಲೇ ತನಿಖೆಗೆ ವಹಿಸೋದಾಗಿ ಘೋಷಿಸಿದರು.
ಅಲ್ಪಸಂಖ್ಯಾತರನ್ನೇ ಮತಬ್ಯಾಂಕ್ ಮಾಡಿಕೊಂಡು ಅವರಿಗೆ ದ್ರೋಹ ಹೇಗೆ ಮಾಡಿದ್ದಾರೆಂಬುದು ತನಿಖೆಯಿಂದ ಹೊರಬರಲಿದೆ. ಬರುವ ದಿನಗಳಲ್ಲಿ ಅಲ್ಪಸಂಖ್ಯಾರೇ ಅವರ ಬೆಂಬಲಕ್ಕೆ ನಿಲ್ಲದಂತಹ ವಾತಾವರಣ ನಿರ್ಮಾಣವಾಗಲಿದೆ ಎಂದರು.
ರಾಗಾ ಪಾದಯಾತ್ರೆಗೆ ಲೇವಡಿ:
ರಾಹುಲ್ ಗಾಂಧಿ ಪಾದಯಾತ್ರೆಯನ್ನು ಲೇವಡಿ ಮಾಡಿದ ಬೊಮ್ಮಾಯಿ ಗುಜರಾತ್ ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಇದ್ದರೆ ರಾಗಾ ಕರ್ನಾಟಕದಲ್ಲಿ ಮೊಕ್ಕಾಂ ಹೂಡಿದ್ದಾರೆ. ಎಲ್ಲಿ ಯುದ್ಧ ನಡೆಯುತ್ತಿದೆಯೋ ಅಲ್ಲಿ ಹೋರಾಟಕ್ಕೆ ನಿಲ್ಲುವವನೇ ನಿಜವಾದ ನಾಯಕ. ಆದರೆ ರಾಹುಲ್ ಗಾಂಧಿ ಈ ವಿಚಾರದಲ್ಲಿ ಭಿನ್ನ ದಾರಿ ಹಿಡಿದಿದ್ದಾರೆ, ಇಂತಹ ನಾಯಕತ್ವದಿಂದ ಕಾಂಗ್ರೆಸ್ ಬಲ ಹಂದಲು ಸಾಧ್ಯವೆ? ಎಂದು ಮಾತಿನಲ್ಲೇ ಕುಟುಕಿದರು.
ಬೊಮ್ಮಾಯಿಗೆ ಶಾಸಕ ಮತ್ತಿಮಡು ಶಿರ ಸಷ್ಟಾಂಗ ನಮಸ್ಕಾರ
ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಸಿಎಂ ಜೊತೆ ವೇದಿಕೆಯಲ್ಲಿದ್ದು ಅವರಿಗೆ ಕಾಣಿಕೆ ಕೊಟ್ಟು ಹೂವಿನ ಮಾಲೆ ಅರ್ಪಿಸುವಾಗ ಶಿರ ಸಾಷ್ಟಾಂಗ ನಮಸ್ಕಾರ ಮಾಡಿ ಗಮನ ಸೆಳೆದರು. ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯಾ ಗುತ್ತೇದಾರ್, ಕೇಂದ್ರ ಸಚಿವ ಭಗವಂತ ಖಊಬಾ, ಸಚಿವ ಗೋವಿಂದ ಕಾರಜೋಳ್, ಭೈರತಿ ಬಸವರಾಜ, ಮುರುಗೇಶ ನಿರಾಣಿ, ಸಂಸದ ಡಾ. ಉಮೇಶ ಜಾಧವ್, ಶಾಸಕರಾದ ಡಾ. ಅವಿನಾಶ್ ಜಾಧವ್, ದತ್ತಾತ್ರೇಯ ಪಾಟೀಲ್ ರೇವೂರ್, ಸುಭಾಷ ಗುತ್ತೇದಾರ್, ಎಂಎಲ್‌ಸಿ ರವಿಕುಮಾರ್, ಸುನೀಲ ವಲ್ಯಾಪೂರೆ, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್, ದೊಡ್ಡಪ್ಪಗೌಡ ಪಾಟೀಲ್, ಶಿವರಾಜ ಪಾಟೀಲ್ ಇದ್ದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವ ಶ್ರೀರಾಮುಲು, ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬರುವರೆಂದು ಅಬ್ಬರದ ಪ್ರಚಾರ ಮಾಡಲಾಗಿತ್ತಾದರೂ ಇವರೆಲ್ಲರು ಮಹಾಗಾಂವ್ ವಿಜಯ ಸಂಕಲ್ಪ ಯಾತ್ರೆಗೆ ಗೈರಾಗಿದ್ದದ್ದು ಗಮನ ಸೆಳೆಯಿತು.
ಮಳೆಯಿಂದಾಗಿ ವಿಜಯಯಾತ್ರೆ ಮೊಟಕು: ಮಹಾಗಾಂವ್‌ನಲ್ಲಿ ಬುಧವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಮಳೆ ಅಡ್ಡಿಯಾಯ್ತು. ಹುಣಸಗಿಯಿಂದ ಹೆಲಿಕಾಪ್ಟರ್‌ನಲ್ಲಿ ಸಿಎಂ ಇಲ್ಲಿಗೆ ಬಂದಾಗ ಬರೋಬ್ಬರಿ ಸಂಜೆಯ 4 ಗಂಟೆಯಾಗಿತ್ತು. ಅಷ್ಟೊತ್ತಿಗಾಗಲೇ ಆಗಸ ದಟ್ಟಮೋಡಗಳಿಂದ ತುಂಬಿ ಕುಳಿತಿತ್ತು.
ಮಳೆ ಹನಿಗಳು ಶುರುವಾಗುತ್ತಿದ್ದಂತೆಯೇ ಭಾರಿ ಮಳೆಯ ಮುನ್ಸೂಚನೆ ಅರಿತ ಸಿಎಂ ಬೊಮ್ಮಾಯಿ ತಾವೇ ಮುಂದಾಗಿ ಮೈಕ್ ಮುಂದೆ ಹೋಗಿ ನೇರವಾಗಿ ಭಾಷಣ ಶುರು ಮಾಡಿಯೇ ಬಿಟ್ಟರು. ಇತ್ತ ಸಿಎಂ ಬಾಷಣ ಜೋರು ಪಡೆಯುತ್ತಿದ್ದಂತೆಯೇ ಅತ್ತ ಗುಡುಗು, ಸಿಡಿಲಿನ ಸಮೇತ ವರುಣ ಆರ್ಭಟವೂ ಮುಂವರಿಯಿತು. ಮಲೆ ತಕ್ಷಣ ನಿಲ್ಲೋ ಲಕ್ಷಣಗಳು ಕಾಣದೆ ಹೋದಾಗ ಸಿಎಂ ಹತ್ತು ನಿಮಿಷ ಮಾತನ್ನಾಡಿ ಮುಗಿಸಿ ಅಲ್ಲಿಂದ ನಡೆದೋ ಬಿಟ್ಟರು. ತರಾತುರಿಯಲ್ಲಿ ತಮ್ಮ ಭಾಷಣ ಮಾಡಿ ವೇದಿಕೆ ಇಳಿದು ಹೋಗುತ್ತಿದ್ದ ಬೊಮ್ಮಾಯಿಯವರಿಗೆ ಸಂಘಟಕರು ಜ್ಯೋತಿ ಬೆಳಗಿಸುವ ಬಗ್ಗೆ ಗಮನ ಸೆಳೆದು ಮತ್ತೆ ಅದನ್ನು ವೇದಿಕೆಗೆ ಕರೆತಂದ ಪ್ರಸಂಗ ನಡೆಯಿತು.
ಕಾಂಗ್ರೆಸ್ ಮುಳಗುವಾಗ ಖರ್ಗೆ ಕೈಯಲ್ಲಿ ಸ್ಟಿಯರಿಂಗ್
ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಮುಳುಗಿ ಹೋಗುತ್ತಿರುವ ಹೊತ್ತಲ್ಲಿ ಕನ್ನಡಿಗ ಡಾ.ಮಲ್ಲಿಕಾರ್ಜುನ ಖರ್ಗೆ ಕೈಗೆ ಪಕ್ಷದ ಸ್ಟಿಯರಿಂಗ್ ಕೊಟ್ಟಿದ್ದಾರೆ’ ಕನ್ನಡಿಗ ಡಾ.ಮಲ್ಲಿಕಾರ್ಜುನ ಖರ್ಗೆ ದೇಶದ ಅತೀ ಹಳೆ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಂತಹ ಈ ಸಂದರ್ಭದಲ್ಲಿ ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಪ್ರತಿಕ್ರಿಯೆ ಇದು.
ಬುಧವಾರ ಜಿಲ್ಲೆಯ ಮಹಾಗಾಂವ್‌ನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಬೊಮ್ಮಾಯಿ, ಪಲಾನುವಾದದ ನಾಯಕತ್ವದಿಂದ ಕಾಂಗ್ರೆಸ್ ಪಕ್ಷ ತತ್ತರಿಸಿ ಹೋಗಿರುವ ಈ ಸಂದರ್ಭದಲ್ಲಿ ಖರ್ಗೆಯವರ ಕೈಗೆ ಸ್ಟಿಯರಿಂಗ್ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಕೇಂದ್ರಲ್ಲಿ 10 ವರ್ಷ ಅಧಿಕಾರದಲ್ಲಿದ್ದಾಗ ಯಾಕೆ ಇಂತಹ ಮಹತ್ವದ ಅಧಿಕಾರ ಅವರಿಗೆ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಕಲಬುರಗಿ: ಯಾವುದೇ ಸರ್ಕಾರಗಳಿದ್ದರೂ ರೈತರಿಗೆ ಮೋಸ, ಬಿರಾದಾರ
ಈಗಾಗಲೇ ಮುಳುಗುವ ಹಂತದಲ್ಲಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷತೆ ಖರ್ಗೆಯವರಿಗೆ ನೀಡಿದ್ದಾರೆ. ಪಕ್ಷ ಇನ್ನೂ ಹೀನಾಯ ಸ್ಥಿತಿ ತಲುಪಿದರೆ ಇದಕ್ಕೇ ಖರ್ಗೆಯವರೇ ಕಾರಣ ಅನ್ನೋ ಗೂಬೆ ಕೂರಿಸುವ ಹುನ್ನಾರವೂ ಇರಬಹುದು ಎಂದು ಬೊಮ್ಮಾಯಿ ಶಂಕೆ ವ್ಯಕ್ತಪಡಿಸಿದರು.
ಡಾ. ಮಲ್ಲಿಕಾರ್ಜುನ ಖರ್ಗೆಯವರು ತುಂಬ ಹಿರಿಯರು, ಅವರ ಬಗ್ಗೆ ಅಪಾರ ಗೌರÜವ ತಮಗಿದೆ ಎಂದು ಹೇಳುತ್ತಲೇ ಅವರು ಕಲಂ 371 (ಜೆ) ಜಾರಿಗೆ ತರುವಲ್ಲಿ ವಹಿಸಿದ್ದ ಪಾತ್ರವನ್ನು ಮುಕ್ತವಾಗಿ ಕೊಂಡಾಡಿದರು. ಆದರೆ ನಮ್ಮ ಕರ್ನಾಟಕದ ನಾಯಕರಿಗೆ ಕಾಂಗ್ರೆಸ್ ಮುಳುಗುವಂತಹ ಸಂದರ್ಭದಲ್ಲಿ ಅಧಿಕಾರ ಕೊಟ್ಟಿರುವುದು ಕರ್ನಾಟಕದವರು ನಾವು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದರು.