Asianet Suvarna News Asianet Suvarna News

ಬೆಂಗಳೂರು ಉಸ್ತುವಾರಿಗಾಗಿ ಸೋಮಣ್ಣ-ಅಶೋಕ್ ಫೈಟ್: ಮಧ್ಯೆ ಪ್ರವೇಶಿದ ಸಿಎಂ

* ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಫೈಟ್
* ಸಚಿವರು ನಡುವೆ ಶುರುವಾಯ್ತು ಪೈಪೋಟಿ
* ಈ ಬಗ್ಗೆ ಸ್ಪಷ್ಟನೆ ಕೊಟ್ಟ ಬಸವರಾಜ ಬೊಮ್ಮಾಯಿ

CM Basavaraj Bommai Reacts On Somanna Ashok Fight For Bengaluru In Charge rbj
Author
Bengaluru, First Published Oct 9, 2021, 8:30 PM IST

ಬೆಂಗಳೂರು, (ಅ.09): ರಾಜ್ಯ ರಾಜಧಾನಿ ಬೆಂಗಳೂರು (Bengaluru) ನಗರ ಜಿಲ್ಲೆ ಉಸ್ತುವಾರಿಯ ಬಗ್ಗೆ ವಸತಿ ಸಚಿವ ವಿ.ಸೋಮಣ್ಣ (V Somanna) ಹಾಗೂ ಕಂದಾಯ ಸಚಿವ ಆರ್ ಅಶೋಕ್ (R Ashok) ನಡುವೆ ಬಹಿರಂಗ ವಾಕ್ಸಮರ ಶುರುವಾಗಿದೆ.

ಬೆಂಗಳೂರು ನಗರ ಉಸ್ತುವಾರಿಯನ್ನು (Bengaluru In-charge ) ತಮಗೆ ನೀಡುವಂತೆ ಸೋಮಣ್ಣ ಸಿಎಂಗೆ ಮನವಿ ಮಾಡಿದ್ರೆ, ಅತ್ತ ಅಶೋಕ್ ಸಹ ಸದ್ದಿಲ್ಲದೇ ಬೆಂಗಳೂರು ಉಸ್ತುವಾರಿ ಸ್ಥಾನಕ್ಕೆ ಕಸರತ್ತು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಪೈಪೋಟಿ ಜೋರಾಗಿದೆ.

ಅತ್ತ ಸಿಎಂ ನಡ್ಡಾ ಭೇಟಿ, ಇತ್ತ ಬೆಂಗಳೂರು ಉಸ್ತುವಾರಿಗಾಗಿ ಸಚಿವರ ಗುದ್ದಾಟ

 ನವದೆಹಲಿಯಿಂದ (New Delhi) ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದಂತೆಯೇ  ನಗರ ಉಸ್ತುವಾರಿಗಾಗಿ ಫೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ಕೊಡಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡ್ತೇವೆ. ಸಂಪುಟ ಸಚಿವರ ಜೊತೆ ಸೌಹಾರ್ದಯುತವಾಗಿ ಚರ್ಚೆ ಮಾಡಿ ತೀರ್ಮಾನ ಮಾಡ್ತೇನೆ ಎಂದು ಸ್ಪಷ್ಟಪಡಿಸಿದರು.

ಎಲ್ಲರೂ ನಮ್ಮವರೇ ಇದ್ದಾರೆ. ಯಾವುದೇ ರೀತಿಯ ತೊಂದರೆ ಆಗದ ರೀತಿ ನಿರ್ಧಾರ ಮಾಡುತ್ತೇನೆ. ಬೆಂಗಳೂರು ‌ಬಹಳ ಮಹತ್ವದ್ದು. ಇದರ ಬಗ್ಗೆ ಎಲ್ಲರ ಜೊತೆ ಚರ್ಚಿಸಿ, ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು. 

ಅಶೋಕ್‍ಗೆ ಬೆಂಗಳೂರು (Bangaluru) ಉಸ್ತುವಾರಿ ಕೊಟ್ಟರೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾನೊಂದು ಮನವಿ ಮಾಡಿದ್ದೇನೆ. ಬೆಂಗಳೂರು ಉಸ್ತುವಾರಿ ಕೊಡುವಾಗ ನನ್ನನ್ನು ಪರಿಗಣಿಸುವಂತೆ ಮನವಿ ಮಾಡಿರುವುದಾಗಿ ಸೋಮಣ್ಣ ಹೇಳಿದ್ದಾರೆ.
 

Follow Us:
Download App:
  • android
  • ios