Asianet Suvarna News Asianet Suvarna News

ಹಾನಗಲ್ ಸೋಲು, ಸಿಎಂಗೆ ಮುಖಭಂಗ: ಬಿಜೆಪಿ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆ

* ಸಿಂದಗಿ, ಹಾನಗಲ್ ಉಪಚುನಾವಣೆ ಫಲಿತಾಂಶ ಪ್ರಕಟ
* ಸಿಎಂ ತವರು ಜಿಲ್ಲೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್
* ಬಸವರಾಜ ಬೊಮ್ಮಾಯಿಗೆ ಭಾರೀ ಮುಖಂಭಗ
* ಬಿಜೆಪಿ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆ

Congress Wins In Hangal By Poll Setback for CM Basavaraj Bommai rbj
Author
Bengaluru, First Published Nov 2, 2021, 6:53 PM IST

ಬೆಂಗಳೂರು, (ನ.02): ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಫಲಿತಾಂಶ(By Election Result) ಪ್ರಕಟವಾಗಿದ್ದು. ಸಿಂದಗಿಯಲ್ಲಿ ಬಿಜೆಪಿ ಅಭೂತ ಪೂರ್ವ ವಿಜಯ ದಾಖಲಿಸಿದ್ರೆ, ಹಾನಗಲ್‌ನಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಈ ಮೂಲಕ ಮೊದಲ ಪರೀಕ್ಷೆಯಲ್ಲೇ ಸಿಎಂ ಬಸವರಾಜ ಬೊಮ್ಮಾಯಿಗೆ (Basavaraj Bommai) ಸೋಲಾಗಿದೆ.

ಹೌದು...ತವರು ಜಿಲ್ಲೆಯಲ್ಲಿ ತಮ್ಮ ಕ್ಷೇತ್ರ ಶಿಗ್ಗಾಂವಿ ಪಕ್ಕದಲ್ಲಿಯೇ ಇರುವ ಹಾನಗಲ್‌ನಲ್ಲಿ (Hangal) ಬಿಜೆಪಿ (BJP) ಸೋತಿರುವುದು ಬೊಮ್ಮಾಯಿಗೆ ಭಾರೀ ಮುಖಭಂಗವಾಗಿದೆ. ಈ ಸೋಲು ಅದರಲ್ಲಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅತ್ಯಂತ ದೊಡ್ಡ ಹಿನ್ನಡೆ.

ಸಿಂದಗಿ, ಹಾನಗಲ್ ಬೈ ಎಲೆಕ್ಷನ್ ರಿಸಲ್ಟ್: ಬೊಮ್ಮಾಯಿ ಹನಿಮೂನ್ ಅವಧಿ ಕೊನೆಗೊಂಡಿದೆ ಎಂದ ಸಿದ್ದು

ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸತತ ಪ್ರಚಾರದ ಬಳಿಕವೂ ಹಾನಗಲ್‌ನಲ್ಲಿ ಬಿಜೆಪಿ ಸೋತಿದೆ. ಇಡೀ ಸರ್ಕಾರವೇ ಹಾನಗಲ್‌ನಲ್ಲಿ ಬೀಡು ಬಿಟ್ಟಿತ್ತು. ಅದರಲ್ಲಿಯೂ ಬಿಜೆಪಿಗೆ ವಲಸೆ ಬಂದು ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾದವರು ಹಾನಗಲ್‌ನಲ್ಲಿಯೇ ಉಳಿದುಕೊಂಡು ಪ್ರಚಾರ ನಡೆಸಿದ್ದರು. ಇಷ್ಟೆಲ್ಲ ಶಕ್ತಿ ಇದ್ದಾಗಲೂ ಹಾನಗಲ್‌ನಲ್ಲಿ ಬಿಜೆಪಿ ಸೋತಿದೆ.

ಬಿಜೆಪಿ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆ
ಹಾನಗಲ್ ಸೋಲಿಗೆ ಬಿಜೆಪಿ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆಯಾಗುತ್ತಿದ್ದು, ಸಿಎಂಗೆ ಮುಜುಗರ ಮಾಡಲೆಂದೇ ಕೆಲವರು ಹುನ್ನಾರ ಮಾಡಿದ್ರು ಎನ್ನುವ ಚರ್ಚೆಗಳು ಸಹ ಒಂದು ಗುಂಪಿನಲ್ಲಿ ನಡೆದಿದೆ.

ನಿರಾಣಿಗೆ ಉಸ್ತುವಾರಿ ನೀಡಿದ್ರು ಪಂಚಮಸಾಲಿ ಮತಗಳ ಕ್ರೂಡಿಕರಣ ಮಾಡಿಲ್ಲ, ಬದಲಾಗಿ ನಿರಾಣಿ ಕೇವಲ ಪ್ರೆಸ್ ಮಾಡೋಕೆ ಮಾತ್ರ ಸೀಮಿತವಾಗಿದ್ರು. ಇನ್ನು ಜಗದೀಶ್ ಶೆಟ್ಟರ್ ಮೇಲ್ನೋಟಕ್ಕೆ ಕೆಲಸ ಮಾಡಿದ್ರು ಅಂತೆಲ್ಲಾ ಅಂಶಗಳು ಬಿಜೆಪಿ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆಯಾಗುತ್ತಿವೆ. 

ಶಿವಕುಮಾರ್ ಉದಾಸಿ ಕೊರೋನಾ ಸಮಯದಲ್ಲಿ ಕ್ಷೇತ್ರದಲ್ಲಿ ಜನರಿಗೆ ಸ್ಪಂದಿಸಿಲ್ಲ ಎನ್ನುವ ಅಂಶ ಸೋಲಿಗೆ ಪ್ರಮುಖ ಕಾರಣ ಅಂತ ಕೇಳಿಬರುತ್ತಿದೆ. ಇನ್ನು ವಿಜಯೇಂದ್ರಗೆ ಒತ್ತಡ ಹಾಕಿದ ಮೇಲೆ ಹಾನಗಲ್  ಉಸ್ತುವಾರಿ ಮಾಡಿದ್ರು. ಅದು ಬೇರೆ ಸಂದೇಶ ನೀಡಿದೆ ಎನ್ನಲಾಗಿದೆ.

 ಕೆಲ ಪ್ರಮುಖ ಲೀಡರ್ಸ್ ಬೊಮ್ಮಾಯಿಗೆ ತವರಿನಲ್ಲಿ ಸೋಲಿಸಲು ಪಣ ತೊಟ್ಟಿದ್ರು ಎನ್ನುವುದು ಬೊಮ್ಮಾಯಿ ಕಿವಿಗೆ ಬಿದ್ದಿದ್ದರಿಂದ ಹಾನಗಲ್‌ನಲ್ಲಿ ಅವರು ಠಿಕಾಣಿ ಹೂಡಿ ಶಿವರಾಜ್ ಸಜ್ಜನ್ ಗೆಲುವಿಗೆ ತಂತ್ರರೂಪಿಸಿದರು. ಆದರೂ ಸಹ ಆ ತಂತ್ರಗಳು ಫೇಲ್ ಆಗಿರುವುದು ಬೊಮ್ಮಾಯಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಹಾನಗಲ್ ನಲ್ಲಿ ಸ್ಥಳೀಯ ನಾಯಕರು ಹಾಗೂ ಪ್ರಚಾರಕ್ಕೆ ಬಂದಿದ್ದ ರಾಜ್ಯ ನಾಯಕರ ಮಧ್ಯೆ ಹೊಂದಾಣಿಕೆ ಇರಲಿಲ್ಲ ಎನ್ನುವುದು ಒಂದು ಸೋಲಿಗೆ ಕಾರಣ ಎಂದು  ಬಿಜೆಪಿಯಲ್ಲಿನ ಆಂತರಿಕ ಚರ್ಚೆಯಲ್ಲಿ ತಿಳಿದುಬಂದಿದೆ.

ಮತಗಳ ವಿವರ
ಸಿಂದಗಿಯಲ್ಲಿ  ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರಗೆ 93,865 ಮತ ಲಭಿಸಿದ್ದು, ಅವರು 31,185 ಮತಗಳ ಅಂತರದಿಂದ ವಿಜಯ ದಾಖಲಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿಗೆ 62,680 ಮತ ಲಭ್ಯವಾಗಿದೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಕೇವಲ 4,353 ಮತಗಳಿಗೆ ತೃಪ್ತಿಯಾಗಬೇಕಾಗಿ ಬಂದಿದೆ. ನೋಟಾಗೆ 1,031 ಮತಗಳ ಚಲಾವಣೆ ಆಗಿದೆ.

ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಶ್ರೀನಿವಾಸ ಮಾನೆಗೆ ಒಟ್ಟು 87,490 ಮತಗಳು ಲಭಿಸಿದ್ದು, 7,373 ಮತಗಳ ಅಂತರದಿಂದ ಗೆಲುವು ಸಿಕ್ಕಿದೆ.  ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ 80,117 ಮತಗಳನ್ನು ಪಡೆದುಕೊಂಡಿದ್ದಾರೆ. ಜೆಡಿಎಸ್​ ಅಭ್ಯರ್ಥಿ ನಿಯಾಜ್ ಶೇಖ್​ಗೆ ಕೇವಲ 927 ಮತಗಳು ಸಿಕ್ಕಿವೆ. ನೋಟಾಗೆ 529 ಮತಗಳ ಬಿದ್ದಿವೆ.

ಒಟ್ಟಿನಲ್ಲಿ ಬಿಜೆಪಿ ಭದ್ರಕೋಟೆಯನ್ನು ಈ ಬಾರಿ ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಕೆಡವಿದ್ದು, ಬೊಮ್ಮಾಯಿಗೆ ಆರಂಭಿಕ ಆಘಾತಕ ಕೊಟ್ಟಿದೆ

Follow Us:
Download App:
  • android
  • ios