ಬ್ಯಾನರ್‌ನಲ್ಲಿ ನಾಯಕರ ಫೋಟೋ ಅಳವಡಿಕೆ ವಿಚಾರದಲ್ಲಿ ಜಟಾಪಟಿ ನಡೆದಿದೆ. ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಗುಂಪು ಮತ್ತು ಕಾಂಗ್ರೆಸ್ ಮುಖಂಡ ಊರುಬಾಗಿಲು ಶ್ರೀನಿವಾಸ್ ಗುಂಪಿನ ನಡುವೆ ಬಡಿದಾಟ ನಡೆದಿದೆ. 

ಕೋಲಾರ(ಫೆ.13):  ಬ್ಯಾನರ್‌ನಲ್ಲಿ ನಾಯಕರ ಫೋಟೋ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. ಕೋಲಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಘಟನೆ ನಡೆದಿದೆ. 

ಬ್ಯಾನರ್‌ನಲ್ಲಿ ನಾಯಕರ ಫೋಟೋ ಅಳವಡಿಕೆ ವಿಚಾರದಲ್ಲಿ ಜಟಾಪಟಿ ನಡೆದಿದೆ. ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಗುಂಪು ಮತ್ತು ಕಾಂಗ್ರೆಸ್ ಮುಖಂಡ ಊರುಬಾಗಿಲು ಶ್ರೀನಿವಾಸ್ ಗುಂಪಿನ ನಡುವೆ ಬಡಿದಾಟ ನಡೆದಿದೆ. 
ಕೋಲಾರ‌ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆದಿದೆ. ಕೆಪಿಸಿಸಿ ಕೋಲಾರ ಕಾಂಗ್ರೆಸ್ ಉಸ್ತುವಾರಿ ರಾಜ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದೆ. ಚುನಾವಣಾ ದಿನದಂದು ಬೂತ್‌ಗಳಿಗೆ ಏಜೆಂಟ್ ನೇಮಕ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. 

‘ನಾವು ಯಾರಪ್ಪನ ಹಣ ಕೇಳ್ತಿಲ್ಲ, ತೆರಿಗೆ ಹಣ ಕೇಳ್ತಿದ್ದೇವೆ’: ಸಚಿವ ಭೈರತಿ ಸುರೇಶ್

ಫ್ಲೆಕ್ಸ್‌ನಲ್ಲಿ ಯಾವುದೇ ನಾಯಕರ ಫೋಟೋ ಇಲ್ಲದಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಈ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ.