Asianet Suvarna News Asianet Suvarna News

‘ನಾವು ಯಾರಪ್ಪನ ಹಣ ಕೇಳ್ತಿಲ್ಲ, ತೆರಿಗೆ ಹಣ ಕೇಳ್ತಿದ್ದೇವೆ’: ಸಚಿವ ಭೈರತಿ ಸುರೇಶ್

ನಾವು ಯಾರಪ್ಪಂದು ಹಣ ಕೇಳ್ತಿಲ್ಲ, ನಮ್ಮ ದುಡಿಮೆಯ ಹಣದ ತೆರಿಗೆ ಕೇಳ್ತಿದ್ದೇವೆ, ನಮ್ಮ ತೆರಿಗೆ ಹಣ ನಾವೇನು ಬೇಕಾದ್ರು ಮಾಡ್ತೀವಿ ಎಂದು ಸಚಿವ ಭೈರತಿ ಸುರೇಶ್ ಮಾಜಿ ಸಚಿವ ಮುನಿರತ್ನ ರವರ ಹೇಳಿಕೆಗೆ ತಿರುಗೇಟು ನೀಡಿದರು. 

Minister Byrathi Suresh Slams On Mla Munirathna At Kolar gvd
Author
First Published Feb 7, 2024, 8:29 AM IST | Last Updated Feb 7, 2024, 8:29 AM IST

ಕೋಲಾರ (ಫೆ.07): ನಾವು ಯಾರಪ್ಪಂದು ಹಣ ಕೇಳ್ತಿಲ್ಲ, ನಮ್ಮ ದುಡಿಮೆಯ ಹಣದ ತೆರಿಗೆ ಕೇಳ್ತಿದ್ದೇವೆ, ನಮ್ಮ ತೆರಿಗೆ ಹಣ ನಾವೇನು ಬೇಕಾದ್ರು ಮಾಡ್ತೀವಿ ಎಂದು ಸಚಿವ ಭೈರತಿ ಸುರೇಶ್ ಮಾಜಿ ಸಚಿವ ಮುನಿರತ್ನ ರವರ ಹೇಳಿಕೆಗೆ ತಿರುಗೇಟು ನೀಡಿದರು. ನಗರದ ಜಿಪಂ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಟ್ಯಾಕ್ಸ್ ಹಣ ನಾವು ಏನ್ ಬೇಕಾದರೂ ಮಾಡ್ತೀವಿ, ದಾನವಾದರೂ ಮಾಡ್ತೀವಿ, ಪುಕ್ಸಟ್ಟೆನಾದ್ರು ಕೊಡ್ತೀವಿ, ಅದು ನಮ್ಮ ಸರ್ಕಾರದ ಅಧಿಕಾರ, ಮುನಿರತ್ನ ಅವರಿಗೆ ಭಿಕ್ಷೆ ಬೇಡಿ ಅಭ್ಯಾಸ ಇರಬಹುದೇನೊ ಆದ್ರೆ ನಾವು ಭಿಕ್ಷೆ ಬೇಡ್ತಿಲ್ಲ ಎಂದರು. ದೆಹಲಿಯಲ್ಲಿ ಫೆ.೭ರಂದು ಶಾಸಕರಿಂದ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಾಲಿನ ತೆರಿಗೆ ಹಣ ನೀಡುವಲ್ಲಿ ಕೇಂದ್ರ ತಾರತಮ್ಯ ಮಾಡ್ತಿದೆ, ನಮ್ಮ ತೆರಿಗೆ ನಮ್ಮ ಹಕ್ಕು ಘೋಷಣೆಯಡಿ ಹೋರಾಟ ಮಾಡ್ತೀವಿ ಎಂದರು.

ಇತರ ರಾಜ್ಯಗಳಿಂದಲೂ ಪ್ರತಿಭಟನೆ: ಕೇಂದ್ರಕ್ಕೆ ಎಷ್ಟು ಬಾರಿ ಮನವಿ ಮಾಡಿದ್ರು ಸ್ಪಂದಿಸುತ್ತಿಲ್ಲ. ನಾವೇನು ಕೇಂದ್ರದಿಂದ ಭಿಕ್ಷೆ ಬೇಡ್ತಿಲ್ಲ, ನಮ್ಮ ತೆರಿಗೆ ಹಣ ನಮಗೆ ಕೊಡಿ ಎಂದು ಕೇಳುತ್ತಿದ್ದೇವೆ, ನಮ್ಮನ್ನ ನೋಡಿಕೊಂಡು ಕೇರಳ, ತಮಿಳುನಾಡು, ತೆಲಂಗಾಣ ರಾಜ್ಯವು ಪ್ರತಿಭಟನೆಗೆ ಮುಂದಾಗಿದೆ ಎಂದು ಹೇಳಿದರು. ಲೋಕಸಭೆ ಚುನಾವಣೆ ಬಳಿಕವೂ ಗ್ಯಾರಂಟಿಗಳಲ್ಲಿ ಬದಲಾವಣೆ ಇಲ್ಲ, ಐದು ವರ್ಷ ರಾಜ್ಯದ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ನೂರಕ್ಕೆ ನೂರರಷ್ಟು ಐದೂ ಜನಪರ ಯೋಜನೆಗಳು ಇರುತ್ತವೆ, ಇದು ಸತ್ಯ ಹಾಗಾಗಿ ಜೋರಾಗಿಯೇ ಹೇಳುತ್ತಿದ್ದೇನೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 22 ಸ್ಥಾನ: ಸಚಿವ ಈಶ್ವರ ಖಂಡ್ರೆ

ಸಿದ್ದರಾಮಯ್ಯ ಸಿಎಂ ಆಗದೆ ಇದ್ದಿದ್ರೆ ಗ್ಯಾರೆಂಟಿ ಜಾರಿ ಅಸಾಧ್ಯ: ಸಿದ್ದರಾಮಯ್ಯ ಸಿಎಂ ಆಗದೆ ಇದ್ದಿದ್ರೆ,ಬೇರೆ ಯಾರೇ ಆಗಿದ್ರೆ ರಾಜ್ಯದಲ್ಲಿ ಐದು ಗ್ಯಾರಂಟಿ ಜಾರಿಗೆ ತರಲು ಆಗುತ್ತಿರಲಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು. ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಶ್ರೀ ಕನಕದಾಸ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ೫೨೪ ನೇ ಶ್ರೀ ಕನಕದಾಸ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಸಿದ್ದರಾಮಯ್ಯ ಬಡವರ ಪರವಾಗಿದ್ದರಿಂದಲೇ ಐದು ಗ್ಯಾರಂಟಿಗಳನ್ನು ೮ ತಿಂಗಳಲ್ಲಿ ಜಾರಿಗೊಳಿಸಿದರು ಎಂದರು. ಸಿದ್ದರಾಮಯ್ಯ ಬಸವಾದಿ ಶರಣರು, ದಾಸ ಶ್ರೇಷ್ಠರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಸಮ ಸಮಾಜದ ನಿರ್ಮಾಣದ ಕನಸಿನಂತೆ ರಾಜ್ಯವನ್ನು ಆಳುತ್ತಿದ್ದಾರೆ. ಸಿದ್ದರಾಮಯ್ಯ ಇರೋ ತನಕ ಬಡವರ ಪರವಾಗಿಯೇ ಇರುತ್ತಾರೆ ಎಂದರು.

ಭ್ರಷ್ಟ ಕಾಂಗ್ರೆಸ್‌ನ ಬಾಲಕೃಷ್ಣ ನೀಡುವ ಸರ್ಟಿಫಿಕೇಟ್ ನಮಗೆ ಅಗತ್ಯವಿಲ್ಲ: ಸಂಸದ ಮುನಿಸ್ವಾಮಿ

ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಜನಪರ. ನಾನು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿರುವುದೇ ನನಗೆ ಹೆಮ್ಮೆ. ಬಡವರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಇರೋ ಕಾಳಜಿ, ಪ್ರೀತಿ, ವಿಶ್ವಾಸ ಬೇರೆ ರಾಜಕಾರಣಿಗಳಲ್ಲಿ ಕಾಣುವುದು ಕಷ್ಟ, ನುಡಿದಂತೆ ನಡೆದ ಸರ್ಕಾರ ಮತ್ತು ಸಿದ್ದರಾಮಯ್ಯ ಮಾತ್ರ ಎಂದರು. ಸಿದ್ದರಾಮಯ್ಯ ಬಡವರು ಆರ್ಥಿಕವಾಗಿ ಸಬಲರಾಗಲಿ ಎಂದು ಐದು ಗ್ಯಾರಂಟಿಗಳಿಗೆ ೬೦ ಸಾವಿರ ಕೋಟಿಯನ್ನು ಬಜೆಟ್‌ನಲ್ಲಿ ಮೀಸಲು ಇಟ್ಟಿದ್ದಾರೆ. ಸಿದ್ದರಾಮಯ್ಯ ಸರ್ವ ಜನೋ ಸುಖಿನೋ ಭವಂತು ಎನ್ನುವ ಬದ್ಧತೆ ಹಾಗೂ ಸಾಮಾಜಿಕ ನ್ಯಾಯ ಪರವಾಗಿ ಇದ್ದಾರೆ ಎಂದರು.

Latest Videos
Follow Us:
Download App:
  • android
  • ios