ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಗೆಲ್ಲಬೇಕು: ಸಚಿವ ಮುನಿಯಪ್ಪ

ದೇಶದಲ್ಲಿ ಮೋದಿ ಪ್ರಧಾನಿಯಾಗಿರುವುದು ದುರ್ವಿಧಿ. ಬಿಜೆಪಿ ಸರ್ಕಾರದಲ್ಲಿ ಸಂವಿಧಾನಕ್ಕೆ ಬೆಲೆ ಇಲ್ಲ. ಸಂವಿಧಾನವನ್ನೆ ಬದಲಾಯಿಸಲು ಹೊರಟಿರುವುದು ದುರಂತವಾಗಿದ್ದು, ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಗೆಲ್ಲಬೇಕಿದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.

Chitradurga Lok sabha election If democracy survive Congress must win says Minister Muniyappa rav

ಚಿತ್ರದುರ್ಗ (ಏ.12) ದೇಶದಲ್ಲಿ ಮೋದಿ ಪ್ರಧಾನಿಯಾಗಿರುವುದು ದುರ್ವಿಧಿ. ಬಿಜೆಪಿ ಸರ್ಕಾರದಲ್ಲಿ ಸಂವಿಧಾನಕ್ಕೆ ಬೆಲೆ ಇಲ್ಲ. ಸಂವಿಧಾನವನ್ನೆ ಬದಲಾಯಿಸಲು ಹೊರಟಿರುವುದು ದುರಂತವಾಗಿದ್ದು, ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಗೆಲ್ಲಬೇಕಿದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.

ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯನ್ನದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಂದಾಗಿನಿಂದ ದೇಶದಲ್ಲಿ ಕೊಮುಗಲಭೆಗಳು ಹೆಚ್ಚಾಗಿವೆ. ಶಾಂತಿ ನೆಲೆಸಬೇಕಿದೆ.ಬಿಜೆಪಿ ಅಧರ್ಮದ ಮಾರ್ಗದಲ್ಲಿ‌ ದೇಶವನ್ನು ಕೊಂಡೊಯ್ಯುತ್ತಿದ್ದು, ನಾವೆಲ್ಲಾ ಭಾವನಾತ್ಮಕವಾಗಿ‌ ಜೀವನ‌ ನಡೆಸಬೇಕು ಇದಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

ದೇಶ ಕಾಯಲು ಮೋದಿ, ಕಾವೇರಿ ಕಾಯಲು ಕುಮಾರಣ್ಣ ಆಯ್ಕೆ ಆಗಬೇಕು

ರಾಜ್ಯದಲ್ಲಿ ಗ್ಯಾರೆಂಟಿ‌ ಯೋಜನೆಗಳನ್ನು ಗಟ್ಟಿಯಾಗಿ ಅನುಷ್ಠಾನ ಮಾಡುವ ಮೂಲಕ ಅಭಿವೃದ್ದಿಗೆ ಸಹಕಾರ‌ ಮಾಡಿದ್ದೆವೆ. ಇದರಿಂದಾಗಿ ರಾಜ್ಯದ 28 ಸ್ಥಾನಗಳನ್ನು ಗೆಲ್ಲಲಿದ್ದು, ಕರ್ನಾಟಕದಲ್ಲಿ ಮೊಟ್ಟ ಮೊದಲ ಕ್ಷೇತ್ರ ಚಿತ್ರದುರ್ಗ ಗೆಲ್ಲಲಿದ್ದೇವೆ ಎಂದರು. ಚಿತ್ರದುರ್ಗ ಕಾಂಗ್ರೇಸ್ ಪಕ್ಷದ ಭದ್ರ ಕೋಟೆ. ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಚಂದ್ರಪ್ಪ ಸರಳ ಸಜ್ಜನಿಕೆಗೆ ಹೆಸರಾಗಿದ್ದಾರೆ. ಸೌಮ್ಯ ಸ್ವಾಭಾವ ಹಾಗೂ ಎಲ್ಲಾ ವರ್ಗದ ಜನರೊಂದಿಗೆ ಬೆರೆಯುವ ವ್ಯಕ್ತಿ. ರಾಜಕೀಯದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಿರುವ ವ್ಯಕ್ತಿಯಾಗಿದ್ದು, ಜನರು ಅವರನ್ಮು ಗೆಲ್ಲಿಸಲಿದ್ದಾರೆ. 

ಕಾಂಗ್ರೆಸ್ ಪಕ್ಷ ಏನು ಘೋಷಣೆ ಮಾಡಿತ್ತೋ ಅದನ್ನು ಅನುಷ್ಠಾನಕ್ಕೆ ತಂದಿದೆ. ರಾಜ್ಯದಲ್ಲಿನ‌ ಎಲ್ಲಾ ಜನರಿಗೆ ಸೌಲಭ್ಯ ಸಿಕ್ಕಿದೆ.  ಹಾಗಾಗಿ ನಾವು ಮತ ಕೇಳಲು ಅರ್ಹರಿದ್ದೇವೆ ಎಂದರು. ಗ್ಯಾರಂಟಿ ಯೋಜನೆಗಳಿಗೆ ೩೬‌ಸಾವಿರ ಕೋಟಿ ಖರ್ಚು ಮಾಡಿದ್ದು, ಇದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಬರಪರಿಹಾರ ನಿಭಾಯಿಸಲು ಸೂಕ್ತ ವ್ಯವಸ್ಥೆ ಮಾಡಿದ್ದೆವೆ. ಜಿಲ್ಲಾಡಳಿತಕ್ಕೆ ಪೂರ್ಣ ಅಧಿಕಾರ ಕೊಟ್ಟಿದ್ದೇವೆ 

ಬಾಡೂಟ ವಶಕ್ಕೆ ಪಡೆದು ರಸ್ತೆ ಚೆಲ್ಲಿದ ಫ್ಲೈಯಿಂಗ್ ಸ್ಕ್ವಾಡ್; ಬಿಸಾಡಿದ್ದನ್ನೇ ತಟ್ಟೆಗೆ ಹಾಕಿ ತಿಂದ ಕಾಂಗ್ರೆಸ್ ಕಾರ್ಯಕರ್ತರು!

ಕುಡಿಯುವ ನೀರಿನ ಅಹಾಕಾರ ನೀಗಿಸಲು ಯಾರಿಗೂ ಕಾಯುವ ಅಶ್ಯಕತೆ ಇಲ್ಲ ಆ ರೀತಿ ಸಕಲ ವ್ಯವಸ್ಥೆ ಮಾಡಿದ್ದೇವೆ. ಎಂದು ಹೇಳಿದ ಅವರು, ಕೇಂದ್ರ ಸರ್ಕಾರ ಬರಪರಿಹಾರ ನೀಡಲು ಸಂಪೂರ್ಣ ವಿಫಲ ಆಗಿದೆ. ಅನಿವಾರ್ಯವಾಗಿ ನ್ಯಾಯಲಯ ಮೆಟ್ಟಿಲು ಏರಬೇಕಾಗಿದೆ. ಬೇರೆ ರಾಜ್ಯಗಳಿಗೆ ಹೊಲಿಸಿದರೆ ನಮಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದರು. 

Latest Videos
Follow Us:
Download App:
  • android
  • ios