ಬಾಡೂಟ ವಶಕ್ಕೆ ಪಡೆದು ರಸ್ತೆ ಚೆಲ್ಲಿದ ಫ್ಲೈಯಿಂಗ್ ಸ್ಕ್ವಾಡ್; ಬಿಸಾಡಿದ್ದನ್ನೇ ತಟ್ಟೆಗೆ ಹಾಕಿ ತಿಂದ ಕಾಂಗ್ರೆಸ್ ಕಾರ್ಯಕರ್ತರು!

ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ಬರುವ ಹಿನ್ನೆಲೆ ಸಭೆಗೆ ಬರುವ ಜನರಿಗಾಗಿ ಭರ್ಜರಿ ಬಾಡೂಟ ಮಾಡಿಸಿದ್ದರು. ಇದೇ ವೇಳೆ ಗ್ರಾಮಕ್ಕೆ ಬಂದ ಫ್ಲೈಯಿಂಗ್ ಸ್ಕ್ವಾಡ್ ತಂಡ ದಾಳಿ ನಡೆಸಿ ಬಾಡೂಟ ವಶಕ್ಕೆ ಪಡೆದುಕೊಂಡ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

Lok sabha election Non-veg food confiscation by FST officials at in kodigehali hassa rav

ಹಾಸನ (ಏ.12): ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ಬರುವ ಹಿನ್ನೆಲೆ ಸಭೆಗೆ ಬರುವ ಜನರಿಗಾಗಿ ಭರ್ಜರಿ ಬಾಡೂಟ ಮಾಡಿಸಿದ್ದರು. ಇದೇ ವೇಳೆ ಗ್ರಾಮಕ್ಕೆ ಬಂದ ಫ್ಲೈಯಿಂಗ್ ಸ್ಕ್ವಾಡ್ ತಂಡ ದಾಳಿ ನಡೆಸಿ ಬಾಡೂಟ ವಶಕ್ಕೆ ಪಡೆದುಕೊಂಡ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೋಡಿಹಳ್ಳಿ ಗ್ರಾಮಕ್ಕೆ ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ಪಟೇಲ್. ಕಾಂಗ್ರೆಸ್ ಅಭ್ಯರ್ಥಿ ಬರುತ್ತಿರುವ ಹಿನ್ನೆಲೆ ಪ್ರಚಾರ ಸಭೆಗೆ ಬರುವ ಜನರಿಗೆ ಭರ್ಜರಿ ಬಾಡೂಟ ಮಾಡಿಸಿದ್ದ ಕಾಂಗ್ರೆಸ್ ಮುಖಂಡರು. ಇದೇ ವೇಳೆ ಕೋಡಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಫ್ಲೈಯಿಂಗ್ ಸ್ಕ್ವಾಡ್ ತಂಡ. ಪರಿಶೀಲಿಸಿದಾಗ ಬಾಡೂಟದ ವ್ಯವಸ್ಥೆ ಮಾಡಿರುವುದು ಬೆಳಕಿಗೆ ಬಂದಿದೆ. ಚುನಾವಣಾ ನೀತಿ ಸಂಹಿತಿ ಉಲ್ಲಂಘನೆ ಹಿನ್ನೆಲೆ ಬಾಡೂಟ ವಶಕ್ಕೆ ಪಡೆದುಕೊಂಡು ನಂತರ ರಸ್ತೆಗೆ ಸುರಿದು ನಾಶಪಡಿಸಿರುವ ತಂಡ. ಬಳಿಕ ಘಟನೆ ಸಂಬಂಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಗ್ರಾಮದ ಓರ್ವ ಕಾಂಗ್ರೆಸ್ ಮುಖಂಡನ ವಿರುದ್ಧ ದೂರು ದಾಖಲಿಸಲಾಗಿದೆ.

ಯುಗಾದಿ ಹಬ್ಬಕ್ಕೆ ಸಿಕ್ತು ಭರ್ಜರಿ ಬೇಟೆ; ಮಟನ್ ಚೀಟಿ ಹಣದೊಂದಿಗೆ ಎಸ್ಕೇಪ್ ಆಗಿದ್ದ ಪುಟ್ಟಸ್ವಾಮಿಗೌಡ ಲಾಕ್

ರಸ್ತೆಗೆ ಎಸೆದ ಬಾಡೂಟ ತಿಂದ ಜನ!

ಫ್ಲೈಯಿಂಗ್ ಸ್ಕ್ವಾಡ್ ಬಾಡೂಟ ವಶಕ್ಕೆ ಪಡೆದುಕೊಂಡ ಬಳಿಕ ರಸ್ತೆಯ ಬದಿ ಚೆಲ್ಲಿ ಹೋಗಿದ್ದರು. ಆದರೆ ನಾನ್‌ವೆಜ್ ಚೆಲ್ಲಿದ ಸ್ಥಳಕ್ಕೆ ಹೋಗಿರುವ ಗ್ರಾಮಸ್ಥರು ರಸ್ತೆಗೆ ಚೆಲ್ಲಿದ ಬಾಡೂಟವನ್ನೇ ತಟ್ಟೆಗೆ ಹಾಕಿಕೊಂಡು ತಿಂದಿದ್ದಾರೆ. ಇನ್ನೂ ಕೆಲವರು ನೇರವಾಗಿ ಅಲ್ಲಿಯೇ ನೆಲದ ಮೇಲೆ ಬಿದ್ದ ಅನ್ನ ಬಾಡೂಟ ಸವಿದಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ್ದಕ್ಕೆ ಕೆಲವರು ವಿಡಿಯೋ ಮಾಡಿ ಎಚ್‌ಡಿ ರೇವಣ್ಣ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದಾಳಿಯ ಹಿಂದೆ ರೇವಣ್ಣ ಕುಮ್ಮಕ್ಕು ಇದೆ. ಅವರ ಕುಮ್ಮಕ್ಕಿನಿಂದಲೇ ದಾಳಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು.

Latest Videos
Follow Us:
Download App:
  • android
  • ios