Asianet Suvarna News Asianet Suvarna News

ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್..ಡ್ಯಾಶ್..: ಡಿಕೆಶಿಗೆ ತಿವಿದ ಮಾಜಿ ಸಚಿವ ಸಿ.ಟಿ. ರವಿ

ನಾನು ಸಿಎಂ, ಡಿಸಿಎಂ, ಪ್ರಧಾನಿ ಎನ್ನುವವರಾರೂ ಕಾನೂನಿಗೆ ಅತಿಥರಲ್ಲ. ಊರಿಗೆ ಬಂದೋಳು ನೀರಿಗೆ ಬರಲ್ವಾ..., ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್....ಡ್ಯಾಶ್....

Chikkamagaluru Former minister CT Ravi criticize to DCM DK Shivakumar illegal property case sat
Author
First Published Oct 19, 2023, 12:55 PM IST

ಚಿಕ್ಕಮಗಳೂರು (ಅ.19): ಸತ್ಯವನ್ನ ಹೂತಾಕಲು ಆಗಲ್ಲ, ಕೆಲ ಕಾಲ ಮುಚ್ಚಿಡಬಹುದು ಆದರೆ ಸತ್ಯ ಎಂದಿದ್ದರೂ ಹೊರಬಂದೇ ಬರುತ್ತದೆ. ಯಾರಾದ್ರು ತಪ್ಪುಮಾಡಿರೋರು ಇದ್ರೆ ಶಿಕ್ಷೆ ಆಗಲೇಬೇಕು. ನಾನು ಸಿಎಂ, ಡಿಸಿಎಂ, ಪ್ರಧಾನಿ ಎನ್ನುವವರಾರೂ ಕಾನೂನಿಗೆ ಅತಿಥರಲ್ಲ. ಊರಿಗೆ ಬಂದೋಳು ನೀರಿಗೆ ಬರಲ್ವಾ..., ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್....ಡ್ಯಾಶ್.... ಎಂದು ಡಿ.ಕೆ. ಶಿವಕುಮಾರ್‌ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಂಬಂಧಪಟ್ಟಂತೆ ಮಾಜಿ ಸಚಿವ ಸಿ.ಟಿ. ರವಿ ಟಾಂಗ್‌ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಿಂದ ಸಿಬಿಐ ತನಿಖೆ ಮುಮದುವರೆಸುವಂತೆ ಆದೇಶ ನೀಡಿದ ಬಗ್ಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಹೆಸರೇಳದೆ ತಿವಿದಿದ್ದಾರೆ. ಹಾಲಿಂದು ಹಾಲಿಗೆ, ನೀರಿಂದು ನೀರಿಗೆ, ಉಪ್ಪು ತಿಂದೋನು ನೀರು ಕುಡೀಬೇಕು. ಇವೆಲ್ಲಾ ಹಳೇ ಕಾಲದ ಗಾದೆ ಮಾತುಗಳು. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು, ಪ್ರಮಾಣಿಕರಿಗೆ ತೊಂದರೆ ಆಗಬಾರದು ಎಂದು ಹೇಳಿದ್ದಾರೆ.

ಡಿಸಿಎಂ ಡಿಕೆಶಿವಕುಮಾರ್‌ಗೆ ಬಿಗ್‌ ಶಾಕ್‌: ಅಕ್ರಮ ಆಸ್ತಿ ಪ್ರಕರಣ ಸಿಬಿಐ ತನಿಖೆಗೆ ಮುಂದುವರೆಸಲು ಹೈಕೋರ್ಟ್‌ ಅಸ್ತು

ಯಾರಾದ್ರು ಅಕ್ರಮ ಮಾಡಿದ್ರೆ ಅದು ಇಂದಲ್ಲ ನಾಳೆ ಬಯಲಿಗೆ ಬರಲೇಬೇಕು. ಸುಮ್ನೆ...ಸುಮ್ನೆ ಗಾದೆ ಹುಟ್ಟುತ್ತಾ.... ತಲೆತಲಾಂತರದ ಸತ್ಯ ಇರುತ್ತದೆ. ಊರಿಗೆ ಬಂದೋಳು ನೀರಿಗೆ ಬರಲ್ವಾ... ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್....ಡ್ಯಾಶ್.... ಸತ್ಯವನ್ನ ಹೂತಾಕಲು ಆಗಲ್ಲ, ಕೆಲ ಕಾಲ ಮುಚ್ಚಿಡಬಹುದು ಆದರೆ ಎಂದಿದ್ದರೂ ಸತ್ಯ ಹೊರಬರುತ್ತದೆ. ಯಾರಾದ್ರು ತಪ್ಪುಮಾಡಿರೋರು ಇದ್ರೆ ಶಿಕ್ಷೆ ಆಗಲೇಬೇಕು. ಕಾನೂನಿಗಿಂತ ಅತಿಥರಾದವರು ಯಾರಾದರೂ ಇದ್ದೀವಾ...? ನಾನು ಸಿಎಂ, ಡಿಸಿಎಂ, ಪ್ರಧಾನಿ ಎನ್ನುವವರು ಯಾರೂ ಕಾನೂನಿಗೆ ಅತಿಥರಲ್ಲ. ಯಾರಾದ್ರು ನಾವು ಕಾನೂನಿಗಿಂತ ಮೇಲೆ (above the law) ಎಂದುಕೊಂಡರೆ ಅದಕ್ಕೆ ಸಂವಿಧಾನ ಅವಕಾಶ ನೀಡಿಲ್ಲ ಎಂದು ಟೀಕೆ ಮಾಡಿದ್ದಾರೆ.

ಇಂದಿನಿಂದ 13,500 ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪುನಾರಂಭ: ದೈಹಿಕ ಶಿಕ್ಷಕರ ನೇಮಕಾತಿ ಶೀಘ್ರ ಆರಂಭ

ಅಂಬೇಡ್ಕರ್ ಅವರು ಬರೆದ ಸಂವಿಧಾನದ ಕಾನೂನಿನ ದೃಷ್ಟಿಯಿಂದ ಎಲ್ಲರೂ ಸಮಾನರು ಎಂದಿದ್ದಾರೆ. ಇವರಿಗೆ ಕಾನೂನು ಅನ್ವಯ ಆಗಲ್ಲ, ಏನ್ ಮಾಡುದ್ರೆ ನಡೆಯುತ್ತೆ ಅನ್ನೋದು ನಮ್ಮ ದೇಶದಲ್ಲಿ ಇಲ್ಲ. ಯಾರು ತಪ್ಪು ಮಾಡಿದರೂ ಶಿಕ್ಷೆ ಆಗಲೇಬೇಕು. ಯಾರು ತಪ್ಪು ಮಾಡಿದ್ದಾರೆಂದು ಹೇಳುವ ಅಧಿಕಾರ ನನಗೆ ಇಲ್ಲ, ನ್ಯಾಯಾಲಯಕ್ಕೆ ಇದೆ. ನಾವು ಮಾಡಿರಬಹುದು ಅಂತ ಆರೋಪ ಮಾಡಬಹುದು. ಆದರೆ, ಮಾಡಿದ್ದಾರೆ ಅಂತ ಹೇಳಕ್ಕೆ ಆಗಲ್ಲ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

Follow Us:
Download App:
  • android
  • ios