Asianet Suvarna News Asianet Suvarna News

Chikkaballapura Election Result 2023: ಕರ ಹಿಡಿದ ಪ್ರದೀಪನ ಮುಂದೆ ಸೋತ ಡಾ. ಸುಧಾಕರ್!

Chikkaballapur Election Results 2023: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಲಭ್ಯವಾಗಿದ್ದು, ಸ್ವತಃ ತನ್ನ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ಪ್ರಚಾರ ಮಾಡಿದ್ದ ಡಾ. ಕೆ.ಸುಧಾಕರ್‌ ಹೀನಾಯ ಸೋಲು ಕಂಡಿದ್ದಾರೆ.
 

chikkaballapura dr sudhakar Karnataka election results 2023 live updates winning candidates san
Author
First Published May 13, 2023, 12:56 PM IST

ಚಿಕ್ಕಬಳ್ಳಾಪುರ (ಮೇ.13): ಪ್ರಧಾನಿ ನರೇಂದ್ರ ಮೋದಿ, ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ನಟಿಯರು, ತೆಲುಗು ಚಿತ್ರರಂಗದ ಅಗ್ರ ನಟ-ನಟಿಯರನ್ನು ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಅದರಲ್ಲೂ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಕರೆಸಿ ಪ್ರಚಾರ ನಡೆಸಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೀನಾಯ ಸೋಲು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ ಭರ್ಜರಿ ಗೆಲುವು ಕಂಡಿದ್ದಾರೆ. ಆಂಧ್ರಪ್ರದೇಶದ ಗಡಿಯ ಅಂಚಿನಲ್ಲಿರುವ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯ ವೇಳೆ ಸಾಕಷ್ಟು ವಿಚಾರಗಳು ಚರ್ಚೆಗೆ ಬಂದಿದ್ದವು. ಹಣ, ಜಾತಿ ಜೊತೆಗೆ ಅಭಿವೃದ್ಧಿಯ ಕುರಿತಾಗಿಯೂ ಚರ್ಚೆ ನಡೆದಿದ್ದವು. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್‌ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಗೆಲುವು ಕಂಡಿದ್ದರು. ಬಳಿಕ ಆಪರೇಷನ್‌ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದ ಅವರು ಉಪಚುನಾವಣೆಯಲ್ಲಿ ಗೆಲುವು ಕಂಡು ಬಿಜೆಪಿ ಸರ್ಕಾರದಲ್ಲಿ ಆರೋಗ್ಯಸ ಸಚಿವರಾಗಿದ್ದರು.

ಒಟ್ಟು 18 ಸುತ್ತುಗಳ ಮತಎಣಿಕೆಯಲ್ಲಿ 15 ಸುತ್ತುಗಳ ಮತಎಣಿಕೆಯ ಅಂತ್ಯಕ್ಕೆ ಕಾಂಗ್ರೆಸ್‌ನ ಪ್ರದೀಪ್‌ ಈಶ್ವರ್‌ 73165 ಮತಗಳನ್ನು ಸಂಪಾದನೆ ಮಾಡಿದ್ದರೆ, ಬಿಜೆಪಿಯ ಡಾ.ಕೆ ಸುಧಾಕರ್‌ 61847 ಮತಗಳನ್ನು ಪಡೆದುಕೊಂಡಿದ್ದಾರೆ. ಬರೋಬ್ಬರಿ 11318 ಮತಗಳ ಮುನ್ನಡೆಯಲ್ಲಿರುವ ಪ್ರದೀಪ್‌ ಈಶ್ವರ್‌ ಕೊನೆಯ ಮೂರು ಸುತ್ತಿನಲ್ಲೂ ಹೆಚ್ಚಿನ ಸಂಪಾದನೆ ಮಾಡುವ ಸಾಧ್ಯತೆ ಇದೆ. ಜೆಡಿಎಸ್‌ನ ಕೆ.ಪಿ ಬಚ್ಚೇಗೌಡ 14240 ಮತಗಳನ್ನು ಪಡೆದುಕೊಂಡು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

Karnataka Election 2023 Live: 130 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಭಾರಿ ಮುನ್ನಡೆ, ಸಂಭ್ರಮ ಎಲ್ಲೆಡೆ ...

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

Bellary B Sriramulu election results 2023 LIVE: ಬಳ್ಳಾರಿಯಲ್ಲಿ ರಾಮುಲು ಹೀನಾಯ, ನಾಗೇಂದ್ರನಿಗೆ ಜನರ ನ್ಯಾಯ!

Follow Us:
Download App:
  • android
  • ios