ಸಂಸದ ಡಾ ಸುಧಾಕರ್‌ಗೆ ನೀಟ್ ಪರೀಕ್ಷೆ ಬಗ್ಗೆ ಕನಿಷ್ಠ ಜ್ಞಾನ ಇಲ್ಲ: ಶಾಸಕ ಪ್ರದೀಪ್ ಈಶ್ವರ್
ನೀಟ್ ಎಕ್ಸಾಮ್ ಅನ್ನೋದು ಸೆಂಟ್ರಲ್ ಏಜೆನ್ಸಿ ನಡೆಸುತ್ತೆ. ಅದನ್ನ ಎಂಸಿ ಸುಧಾಕರ್ ನಡೆಸೊಲ್ಲ ಅನ್ನೋದು ಸಂಸದ ಡಾ ಕೆ ಸುಧಾಕರ್‌ಗೆ ಗೊತ್ತಿರಬೇಕು ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಟಾಂಗ್ ನೀಡಿದರು.
ಬೆಂಗಳೂರು (ಜೂ.30):ನೀಟ್ ಎಕ್ಸಾಮ್ ಅನ್ನೋದು ಸೆಂಟ್ರಲ್ ಏಜೆನ್ಸಿ ನಡೆಸುತ್ತೆ. ಅದನ್ನ ಎಂಸಿ ಸುಧಾಕರ್ ನಡೆಸೊಲ್ಲ ಅನ್ನೋದು ಸಂಸದ ಡಾ ಕೆ ಸುಧಾಕರ್‌ಗೆ ಗೊತ್ತಿರಬೇಕು ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಟಾಂಗ್ ನೀಡಿದರು.
ನೀಟ್ ಪರೀಕ್ಷೆಯನ್ನು ಇಲಾಖೆ ಸರಿಯಾಗಿ ನಡೆಸುತ್ತಿಲ್ಲ ಎಂಬ ಸಂಸದ ಡಾ ಕೆ ಸುಧಾಕರ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಅವರು ರ್ಯಾಕಿಂಗ್ ಕೊಟ್ಟು ಸ್ಟೇಟ್ ಗೌರ್ನಮೆಂಟ್ ಗೆ ಕೊಟ್ರೆ ಸೀಟ್ ಆಲಾಟ್ಮೆಂಟ್ ಅಷ್ಟೆ ಎಂಸಿ ಸುದಾಕರ್ ಗೆ ಬರೋದು. ಈ ಕನಿಷ್ಠ ಜ್ಞಾನ ಸಹ ಸಂಸದರಿಗಿಲ್ಲ. ಸೋಲು ಅನ್ನೋದು ಓದುವ ಅಭ್ಯಾಸ ಕಡಿಮೆ ಮಾಡುತ್ತೆ. ಡಾ ಕೆ ಸುಧಾಕರ್ ಓದೋದು ನಿಲ್ಲಿಸಿ ತುಂಬಾ ದಿನ ಆಗಿದೆ ಎಂದು ಗೇಲಿ ಮಾಡಿದರು.
ಸಿಎಂ ಬದಲಾವಣೆ ಮಾಡೋದಾದ್ರೆ ಬಿಕೆ ಹರಿಪ್ರಸಾದ್ ಅವರನ್ನೇ ಮುಖ್ಯಮಂತ್ರಿ ಮಾಡಿ: ಪ್ರಣವಾನಂದಶ್ರೀ ಆಗ್ರಹ
ನಾನು ಖಾಸಗಿ ಕೋಚಿಂಗ್ ಸೆಂಟರ್‌ವೊಂದರ ಮಾಲೀಕನಾಗಿ ಹೇಳುತ್ತಿದ್ದೇನೆ. ನೀಟ್ ಪರೀಕ್ಷೆ ಬಗ್ಗೆ ವಿವಾದ ಎದ್ದಿರೋದು, ಈಗಾಗಲೇ ನೀಟ್ ಅಕ್ರಮ ಸಿಬಿಐಗೆ ಕೊಟ್ಟಿರೋದು ಗೊತ್ತೇ ಇದೆ. ಪರೀಕ್ಷೆಯಲ್ಲಿ 1600 ಜನಕ್ಕೆ ಗ್ರೇಸ್ ಕೊಟ್ಟಿದ್ದಾರೆ. ಇದರಲ್ಲಿ ಅಕ್ರಮ ನಡೆದಿರುವುದುಸ್ಪಷ್ಟವಾಗಿದೆ. ಕೇಂದ್ರ ಸರ್ಕಾರದ ಹಿಡಿತದಲ್ಲಿರುವ ಸಿಬಿಐ ತನಿಖೆ ಅಲ್ಲಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.