ಜನತೆಗೆ ನೀವೇನು ಮಾಡಿದ್ದೀರಿ ಹೇಳಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏನು ಮಾಡಿದ್ದಾರೆ ಎನ್ನುವುದನ್ನು ನಾನು ಹೇಳುತ್ತೇನೆ. ಪ್ರಾಮಾಣಿಕರಾಗಿದ್ದರೆ ಬನ್ನಿ ಸಾರ್‌. ನಾನು ಮೊದಲ ಬಾರಿ ಶಾಸಕನಾಗಿದ್ದೇನೆ. ಪ್ರತಾಪ್‌ ಸಿಂಹ, ನೀವು ಮೈಸೂರು ಸಂಸದರಾಗಿ ಒಂಬತ್ತು ವರ್ಷ ಆಯಿತಲ್ವಾ? ನಿಮಗೆ ಬಿಜೆಪಿಯವರು ಮಾತಾಡುವುದನ್ನು ಕಲಿಸಿಲ್ವಾ?’ ಎಂದು ಪ್ರಶ್ನಿಸಿದ ಪ್ರದೀಪ್‌ ಈಶ್ವರ್‌ 

ಚಿಕ್ಕಬಳ್ಳಾಪುರ(ಜೂ.24):  ‘ಪ್ರತಾಪ ಸಿಂಹ, ನಿಮಗೆ ಓಪನ್‌ ಚಾಲೆಂಜ್‌ ಮಾಡುತ್ತಿದ್ದೇನೆ. ತಾಕತ್‌ ಇದ್ದರೆ, ನೀವು ಪ್ರಾಮಾಣಿಕರಾದರೆ ಬಹಿರಂಗ ಚರ್ಚೆಗೆ ಬನ್ನಿ’ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಅವರು ಬಿಜೆಪಿ ಸಂಸದ ಪ್ರತಾಪ್‌ ಸಿಂಹಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘ಜನತೆಗೆ ನೀವೇನು ಮಾಡಿದ್ದೀರಿ ಹೇಳಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏನು ಮಾಡಿದ್ದಾರೆ ಎನ್ನುವುದನ್ನು ನಾನು ಹೇಳುತ್ತೇನೆ. ಪ್ರಾಮಾಣಿಕರಾಗಿದ್ದರೆ ಬನ್ನಿ ಸಾರ್‌. ನಾನು ಮೊದಲ ಬಾರಿ ಶಾಸಕನಾಗಿದ್ದೇನೆ. ಪ್ರತಾಪ್‌ ಸಿಂಹ, ನೀವು ಮೈಸೂರು ಸಂಸದರಾಗಿ ಒಂಬತ್ತು ವರ್ಷ ಆಯಿತಲ್ವಾ? ನಿಮಗೆ ಬಿಜೆಪಿಯವರು ಮಾತಾಡುವುದನ್ನು ಕಲಿಸಿಲ್ವಾ?’ ಎಂದು ಪ್ರಶ್ನಿಸಿದರು.

ಅನ್ನದಾತರಲ್ಲಿ ರಾಜಕೀಯ ಬೇಡ, ತಿಂಗಳಿಗೊಮ್ಮೆ ರೈತರ ಸಮಾವೇಶ: ಶಾಸಕ ಪ್ರದೀಪ್‌ ಈಶ್ವರ್‌

ಇದೇ ವೇಳೆ, ಕೋಲಾರದ ಬಿಜೆಪಿ ಸಂಸದ ಮುನಿಸ್ವಾಮಿ ಅವರು ಒಂಥರಾ ಚೈಲ್ಡ್‌ ಆರ್ಟಿಸ್ಟ್‌ ಇದ್ದ ಹಾಗೆ. ಅವರು ಮುನಿಸ್ವಾಮಿ ಅಲ್ಲ, ‘ಮನಿ’ ಸ್ವಾಮಿ ಎಂದು ಲೇವಡಿ ಮಾಡಿದರು. ಮುನಿಶಾಮಣ್ಣ ನನಗೆ 5 ವರ್ಷಕ್ಕೆ ಇರೋದು ಮಾರಿಹಬ್ಬ, ನಿಮಗೆ ಮುಂದಿನ ವರ್ಷವೇ ಇದೆ ಮಾರಿಹಬ್ಬ’ ಎಂದು ಚುಚ್ಚಿದರು.