ಸಿಎಂ ಸೀಟಿನ ಮೇಲೆ ಕಣ್ಣಿಟ್ಟವರಿಗೆ ಶಾಕ್ ಕೊಟ್ಟ ರಾಯರೆಡ್ಡಿ; ಮುಂದಿನ 3 ವರ್ಷ 10 ತಿಂಗಳ ಸಿದ್ದರಾಮಯ್ಯನವರೇ ಸಿಎಂ!

ರಾಜ್ಯದಲ್ಲಿ ಮುಂದಿನ 3 ವರ್ಷ 10 ತಿಂಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

Chief minister Finance advisor Basavaraj Rayareddy says Siddaramaiah is continue 3 year CM post sat

ಬೆಂಗಳೂರು (ಆ.09): ಕಾಂಗ್ರೆಸ್ ಸರ್ಕಾರದ ಬಾಕಿ ಅವಧಿಯಾಗಿರುವ ಮುಂದಿನ 3 ವರ್ಷ 10 ತಿಂಗಳುಗಳ ಕಾಲವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಹೇಳುವ ಮೂಲಕ ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟವರಿಗೆ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಶಾಕ್ ನೀಡಿದ್ದಾರೆ. 

ಈ ಕುರಿತು ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನು ಮೂರು ವರ್ಷ ಹತ್ತು ತಿಂಗಳು ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಯಾರೂ ಕೂಡ ಅವರ ರಾಜೀನಾಮೆ ಪಡೆಯಲು ಆಗುವುದಿಲ್ಲ. ಹೈಕಮಾಂಡ್ ಕೂಡ ಅಂತಹ ಮನಸ್ಸು ಮಾಡುವುದಿಲ್ಲ. ರಾಜೀನಾಮೆ ಕೊಡುತ್ತೇನೆ ಅಂತ ಯಾರಾದರೂ ಬಾಂಡ್ ಪೇಪರ್ ನಲ್ಲಿ ಬರೆದು ಕೊಟ್ಟಿದ್ದಾರಾ? ರಾಜೀನಾಮೆ ಕೊಡ್ತೀನಿ ಅಂತ ಯಾರು ಬಾಂಡ್ ಪೇಪರ್ ಬರೆದು ಕೊಟ್ಟಿಲ್ಲ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಗಂಡನೊಂದಿಗೆ ಜಗಳ ಮಾಡುತ್ತಿದ್ದ ಹೆಂಡತಿಯನ್ನ ಎಳೆದೊಯ್ದು ತಿಂದು ತೇಗಿದ ಹುಲಿ!

ಸಿದ್ದರಾಮಯ್ಯ ಅವರೇ ಮುಂದಿನ ಮೂರು ವರ್ಷ ಹತ್ತು ತಿಂಗಳು ಸಿಎಂ ಆಗಿರುತ್ತಾರೆ, ಆಗಿರಲೇಬೇಕು. ಮುಡಾ ಹಗರಣದ ಆರೋಪ ಸೇರಿದಂತೆ ವಿವಿಧ ಆರೋಪಗಳನ್ನು ನಿರಾಕರಣೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಪಕ್ಷದ ವರಿಷ್ಠ ಮಂಡಳಿ ಬೆನ್ನಿಗ ನಿಂತು ಬೆಂಬಲ ನೀಡುತ್ತಿದ್ದಾರೆ. ಈ ಬಗ್ಗೆ ನನಗೂ ಮಾಹಿತಿ ಬಂದಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಯಾರು ಕೂಡ ನಮ್ಮಲ್ಲಿ ಪ್ರಯತ್ನ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಮುಡಾ ಹಗರಣದಲ್ಲಿ ನೋಟೀಸ್ ಕೊಟ್ಟ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಿ: ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರಿಗೆ ಖಾಸಗಿ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಪರಿಶೀಲನೆ ಮಾಡದೇ ರಾಜ್ಯಪಾಲರು ಏಕಾಏಕಿ ಸಿಎಂ ಸಿದ್ದರಾಮಯ್ಯ ಅವರಿಒಗೆ ಪ್ರಾಸಿಕ್ಯೂಷನ್ ನೊಟೀಸ್ ಜಾರಿ ಮಾಡಿದ್ದಾರೆ. ಹೀಗಾಗಿ, ರಾಜ್ಯಪಾಲ ಥಾವರ ಚಂದ್ ಗೆಲಲೋಟ್ ಅವರನ್ನು ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಳ್ಳಬೇಕು ಎಂದು. ಕೂಡಲೇ ರಾಷ್ಟ್ರಪತಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಭೇಟಿಗೆ ಬಂದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ವಾಹನದಲ್ಲಿ ಹೆಬ್ಬಾವು!

ಮಹಾ ಮಹಿಮೆ ರಾಷ್ಟ್ರಪತಿ ದ್ರೌಪದಿ ಅವರು ನಮ್ಮ ರಾಜ್ಯದ ರಾಜ್ಯಪಾಲ ಥಾವರ ಚಂದ್ ಗೆಹಲೋಟ್ ಅವರನ್ನು ವಾಪಸ್ ಕರೆಸಿಕೊಳ್ಳಬೇಕು. ಕರ್ನಾಟಕದಲ್ಲಿ ರಾಜ್ಯಪಾಲರು ಪಕ್ಷಪಾತವಾಗಿ ನಡೆದುಕೊಳ್ಳುತ್ತಿದ್ದಾರೆ. ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಮ್ಮ ಸರ್ಕಾರಕ್ಕೆ ಈ ರಾಜ್ಯಪಾಲರ ಮೇಲೆ ನಂಬಿಕೆಯಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios