ಆರೋಪ ಬಂದಾಗ ಖರ್ಗೆ, ಸಿಎಂ ಸೈಟ್ ವಾಪಸ್ ಕೊಟ್ರು, ನಮ್ಮ ಮಾದರಿ ಬಿಜೆಪಿ ಅನುಸರಿಸಲಿ: ಐವನ್ ಡಿಸೋಜಾ

ಇ ಡಿಯವರು ತಮ್ಮ ಪರಿಮಿತಿಯನ್ನು ಮೀರಿ ರೈಡ್ ಮಾಡುತ್ತಿದ್ದಾರೆ. ಇ ಡಿ ಅವರಲ್ಲಿ ಅದೇನೋ ಅತ್ಯುತ್ಸಾಹ ಕಾಣುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕಿಡಿಕಾರಿದರು.

ED Raid on mysuru muda case MLC Ivan D'Souza reacts at udupi rav

ಉಡುಪಿ (ಅ.19): ಇ ಡಿಯವರು ತಮ್ಮ ಪರಿಮಿತಿಯನ್ನು ಮೀರಿ ರೈಡ್ ಮಾಡುತ್ತಿದ್ದಾರೆ. ಇ ಡಿ ಅವರಲ್ಲಿ ಅದೇನೋ ಅತ್ಯುತ್ಸಾಹ ಕಾಣುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕಿಡಿಕಾರಿದರು.

ನಿವೇಶನ ಹಂಚಿಕೆಯಲ್ಲಿ ಹಗರಣ ಹಿನ್ನೆಲೆ ಮೈಸೂರು ನಗರಾಭಿವೃದ್ಧಿ ಕಚೇರಿ ಮೇಲೆ ಇಡಿ ದಾಳಿ ನಡೆಸಿದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಇ ಡಿಯವರ ದ್ವೇಷದ ಕ್ರಮ, ರಾಜಕೀಯ ಪ್ರೇರಿತ ದಾಳಿಯಾಗಿದೆ. ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಈಗಾಗಲೇ ನ್ಯಾಯಾಲಯದ ಆದೇಶದಂತೆ ತನಿಖೆ ನಡೆಸುತ್ತಿದೆ. ಹೀಗಿರುವಾಗ, ಇ ಡಿ ಅವರು ಯಾಕೆ ದಾಳಿ ಮಾಡಿದ್ದು, ಅಲ್ಲಿ ಏನು ಕೆಲಸ? ಎಂದು ಪ್ರಶ್ನಿಸಿದರು.

ಇಡಿ ಅವರು ತಮ್ಮ ಕಾಯ್ದೆ, ಅಧಿಕಾರ ಪರಿಮಿತಿ ಮೀರಿ ಬಿಜೆಪಿಯವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ರಾಜ್ಯ ಸರ್ಕಾರದ ಹೆಸರು ಕೆಡಿಸಲು ಈ ರೀತಿ ಮಾಡಲು ಬಿಜೆಪಿ ಪ್ರೇರಣೆ ನೀಡಿದೆ ಎಂದು ದೂರಿದರು.

ಶೋಭಾ ಕರಂದ್ಲಾಜೆ ರಾಜಕಾರಣದಲ್ಲಿ ಬೆಂಕಿ ಹಚ್ಚೋದು ಬಿಟ್ಟು ಬೇರೇನೂ ಮಾಡಿಲ್ಲ:  ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ

ಇನ್ನು ಮುಡಾ ಹಗರಣದ ಫೈಲ್‌ಗಳನ್ನು ಸಚಿವ ಭೈರತಿ ಸುರೇಶ್ ಸುಟ್ಟಿರುವ ಆರೋಪ ಮಾಡಿರುವ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಣಿಯಲು ಆಗದವನು ನೆಲ ಡೊಂಕು ಎಂದರಂತೆ. ಶೋಭಾ ಕರಂದ್ಲಾಜೆಗೆ ಮಾಹಿತಿಯ ಕೊರತೆ ಇದೆ. ನೀವು ಯಾಕೆ ಹಿಟ್ ಅಂಡ್ ರನ್ ಮಾಡುತ್ತೀರಿ? ಎಲ್ಲಾ ವಿಚಾರಗಳಿಗೂ ನಮ್ಮಲ್ಲಿ ದಾಖಲೆಗಳು ಇವೆ. ಮೂರು- ನಾಲ್ಕು ಏಜೆನ್ಸಿಗಳಲ್ಲಿ ಈ ಎಲ್ಲ ವಿಚಾರ ಚರ್ಚೆ ಆಗಿದೆ. ದಾಖಲೆ ಸಾಗಿಸಿದ್ದಾರೆ ಅನ್ನೋದೇ ಸುಳ್ಳು. ಯಾವುದಾದರೂ ಒಂದು ಸಾಕ್ಷಿ ತೋರಿಸಲಿ, ನಾನು ಪ್ರಮಾಣ ಮಾಡಲು ತಯಾರಿದ್ದೇನೆ ಎಂದು ಭೈರತಿ ಹೇಳಿದ್ದಾರೆ. ಬಿಜೆಪಿಯವರಿಗೆ ತಾಕತ್ತಿದ್ದರೆ ಆ ಸವಾಲಿಗೆ ಉತ್ತರ ಕೊಡಲಿ ಎಂದರು.

ಇನ್ನು ಪಹ್ಲಾದ್ ಜೋಶಿ ಸಹೋದರ ಟಿಕೆಟ್ ಅಕ್ರಮ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ನನಗೆ ಸಹೋದರ ಗೊತ್ತೇ ಇಲ್ಲ 30 ವರ್ಷದಿಂದ ಪರಿಚಯ ಇಲ್ಲ ಎಂದು ಜೋಶಿ ಹೇಳಿದ್ದಾರೆ. ಬಿಜೆಪಿಯವರ ಈ ಎಲ್ಲ ವಿಚಾರ ನಮಗೆ ಈಗ ಗೊತ್ತಾಗಿದೆ. ಸಹೋದರ ಸಹೋದರಿಯರನ್ನು 30 ವರ್ಷ ನೋಡುವುದಿಲ್ಲ ಎಂದು ಈಗ ಗೊತ್ತಾಗಿದ್ದು. ಈ ಬಗ್ಗೆ ಶೋಭಾ ಕೆರಂದ್ಲಾಜೆ ತನಿಖೆ ನಡೆಸಲಿ..ಉತ್ತರ ಕೊಡಲಿ ಎಂದು ತಿರುಗೇಟು ನೀಡಿದರು.

ಇನ್ನು ಮಲ್ಲಿಕಾರ್ಜುನ ಖರ್ಗೆ ಸೈಟ್ ವಾಪಸ್ ಕೊಟ್ಟಿರುವ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಮಾದರಿ ಬಿಜೆಪಿ ಫಾಲೋ ಮಾಡಲಿ. ಸಿದ್ದರಾಮಯ್ಯ ಹ್ಯೂಬ್ಲೆಟ್ ವಾಚ್ ಬಗ್ಗೆ ಆರೋಪ ಬಂದಾಗ ಕ್ಯಾಬಿನೆಟ್ ನಲ್ಲಿ ಇಟ್ರು, ಸೈಟ್ ಬಗ್ಗೆ ಆರೋಪ ಬಂದಾಗ ವಾಪಾಸ್ ಕೊಟ್ಟರು, ಪತ್ನಿ ಸೈಟ್ ವಾಪಸ್ ಕೊಟ್ಟಾಗ ಗಂಡನಾಗಿ ಅದನ್ನು ಸ್ವಾಗತ ಮಾಡಿದರು. ದುಡ್ಡು ಕೊಟ್ಟು ನಿಯಮ ಪ್ರಕಾರ ಸೈಟ್ ತೆಗೆದುಕೊಂಡರೂ ಖರ್ಗೆಯವರು ವಾಪಾಸ್ ಕೊಟ್ಟರು. ನಮ್ಮ ನಾಯಕರು ವಾಪಸ್ ಕೊಟ್ಟು ಮಾದರಿಯಾಗಿದ್ದಾರೆ ಎಂದ ಐವನ್ ಡಿಸೋಜಾ.

ಮುಡಾ ಹಗರಣ: ಇಡಿ ತನಿಖೆವರೆಗೂ ಕಾಯ್ದು ನೋಡೋಣ ಯಾವುದೇ ಅರ್ಜಂಟ್ ಇಲ್ಲ, ಸಚಿವ ಜಾರಕಿಹೊಳಿ

ಸಿಎಂ ಆಗಲು ಖರ್ಗೆಗೆ ಆಸೆ ಬಿಜೆಪಿ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಆಸೆ ಯಾರಿಗೆ ಇಲ್ಲ ಹೇಳಿ? ಬಿಜೆಪಿಯಲ್ಲೂ 150 ಜನ ಆಸೆ ಹೊತ್ತವರು ಇದ್ದಾರೆ,  ಆರ್ ಅಶೋಕ ಕೂಡ ಸೈಟ್  ಹಿಂದೆ ಕೊಟ್ಟಿದ್ದಾರೆ. ನ್ಯಾಯಾಲಯ ಆಮೇಲೆ ಏನು ತೀರ್ಮಾನ ಕೊಟ್ಟಿತು? ಕೇಸ್ ಮುಂದುವರಿಸುವ ಅವಶ್ಯಕತೆ ಇಲ್ಲ ಎಂದು ಆಗ ನ್ಯಾಯಾಲಯ ಹೇಳಿತ್ತು. ನ್ಯಾಯ ಎಲ್ಲರಿಗೂ ಒಂದೇ ಅಲ್ವಾ? ಹಾಗಾದರೆ ಇ ಡಿಯವರು ರೇಡ್ ಮಾಡೋದು ಯಾಕೆ? ಈ ರೈಡ್ ದಾಳಿ ಎಲ್ಲ ಸಿದ್ದರಾಮಯ್ಯರಿಗೆ ಇದೆಲ್ಲ ತಾಗೋದೇ ಇಲ್ಲ. ಸಿದ್ದರಾಮಯ್ಯ ಹಿಂದೆ 136 ಶಾಸಕರಿದ್ದಾರೆ ಏನು ಮಾಡಲು ಆಗೊಲ್ಲ ಎಂದರು.

Latest Videos
Follow Us:
Download App:
  • android
  • ios