2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ (ಮದುವೆಗೂ ಮುನ್ನ) 75 ಕೋಟಿ ಹಾಗೂ 2023ರ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ 104.96 ಕೋಟಿ ರು. ಆಸ್ತಿ ಹೊಂದಿದ್ದರು. ಕೇವಲ ಒಂದೂವರೆ ವರ್ಷದಲ್ಲಿ ಇವರ ಆಸ್ತಿ 8.44 ಕೋಟಿ ರು.ಗಳಷ್ಟು ವೃದ್ಧಿಯಾಗಿದೆ.    

ರಾಮನಗರ(ಅ.26):  ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯ ಜೆಡಿಎಸ್ -ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರು 113.40 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ. ಈ ಪೈಕಿ 29.34 ಕೋಟಿ ರು.ಚರಾಸ್ತಿ ಹಾಗೂ 78.14 ಕೋಟಿ ರು.ಸ್ಥಿರಾಸ್ತಿ. ನಿಖಿಲ್ ಅವರ ವಾರ್ಷಿಕ ಆದಾಯ 1.69 ಕೋಟಿ ರು. ನಿಖಿಲ್ ಬಳಿ ಸದ್ಯ 27,760 ರು. ನಗದು ಇದ್ದರೆ, ಅವರ ಪತ್ನಿ ರೇವತಿ ಬಳಿ 3.53 ಲಕ್ಷ ರು.ಇದೆ. ಠೇವಣಿ ಸೇರಿ ವಿವಿಧ ಬ್ಯಾ0ಕ್‌ಗಳಲ್ಲಿ 24.23 ಕೋಟಿ ರು.ಇದೆ. 

ಇನ್ನು, ನಿಖಿಲ್ ಅವರು ತಮ್ಮ ಮಾಲೀಕತ್ವದ ಚನ್ನಾಂಬಿಕ ಫಿಲಂಸ್ ನಲ್ಲಿ 5.92 ಲಕ್ಷ ರು., ಎನ್.ಕೆ. ಎಂಟರ್‌ಟೇನ್ ಮೆಂಟ್ ನಲ್ಲಿ 20.48 ಲಕ್ಷ ರು., ಕಸ್ತೂರಿ ಮೀಡಿಯಾ ಪ್ರೈ.ಲಿನಲ್ಲಿ 76 ಲಕ್ಷ ರು. ಹಾರಿಜಾನ್ ರಿಯಾಲಿಟಿ ಸಂಸ್ಥೆಯಲ್ಲಿ 60 ಲಕ್ಷ ರೂ. ನಾರ್ಥ ಆರ್ಕ್ ಸಂಸ್ಥೆಯಲ್ಲಿ 30 ಲಕ್ಷ ರು.ಹೂಡಿಕೆ ಮಾಡಿದ್ದಾರೆ. ಬಿಡದಿಯ ಹೋಬಳಿ ಸರ್ವೆ ಸಂಖ್ಯೆ 26ರಲ್ಲಿ 4 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ 1.34 ಕೋಟಿ ರು. ಬೆಂಗಳೂರಿನ ರಿಚಮಂಡ್ ಟೌನ್ ನಲ್ಲಿ 21,500 ಚದರಡಿಯ ವಾಣಿಜ್ಯ ಕಟ್ಟಡವಿದೆ. ಇದರ ಮಾರುಕಟ್ಟೆ ಮೌಲ್ಯ 38 ಕೋಟಿ ರು. 

ಸಿಪಿ ಯೋಗೇಶ್ವರ್ ವಿರುದ್ದ ಗೆದ್ದು ಬೀಗ್ತಾರ ನಿಖಿಲ್ ಕುಮಾರಸ್ವಾಮಿ? ಚನ್ನಪಟ್ಟಣದ ಚದುರಂಗ!

ತಂದೆ-ತಾಯಿಗೆ ಸಾಲ ಕೊಟ್ಟ ನಿಖಿಲ್: 

ಜೊತೆಗೆ, ನಿಖಿಲ್, ವಿವಿಧ ಬ್ಯಾಂಕ್‌ಗಳಿಂದ ಒಟ್ಟು 70.44 ಕೋಟಿ ರು. ಸಾಲ ತೆಗೆದುಕೊಂಡಿದ್ದಾರೆ. ಇನ್ನು, ತಾಯಿ ಅನಿತಾ ಕುಮಾರಸ್ವಾಮಿಗೆ 4.65 ಕೋಟಿ ರು., ತಂದೆ ಎಚ್.ಡಿ. ಕುಮಾರಸ್ವಾಮಿಗೆ 9.18 ಲಕ್ಷ ರು. ಸಾಲ ಕೊಟ್ಟಿದ್ದಾರೆ. ನಿಖಿಲ್ ಬಳಿ 39.84 ಲಕ್ಷ ರು.ಮೌಲ್ಯದ ಇನ್ನೋವಾ ಹೈಕ್ರಾಸ್ ಕಾರಿದೆ. ಜೊತೆಗೆ, ತಮ್ಮ ಮಾಲೀಕತ್ವದ ಎನ್. ಕೆ.ಎಂಟರ್‌ಟೇನ್ ಮೆಂಟ್ ಸಂಸ್ಥೆಯ ಮೂಲಕ ರೇಂಜ್ ರೋವರ್‌ ಕಾರು, ವ್ಯಾನಿಟಿ ವ್ಯಾನ್ (ಜಿಮ್), ಇನ್ನೋವಾ ಕ್ರಿಸ್ಟಾ ಕಾರು, ವ್ಯಾನಿಟಿ ವ್ಯಾನ್ (ಕ್ಯಾರವಾನ್ ) ಹೊಂದಿದ್ದಾರೆ. 

ನಿಖಿಲ್ ಬಳಿ 1.49 ಕೆಜಿ ಚಿನ್ನವಿದ್ದು, ಇದರ ಮಾರುಕಟ್ಟೆ ಮೌಲ್ಯ 1.96 ಕೋಟಿ ರು., 16 ಕೆಜಿ ಬೆಳ್ಳಿ ಆಭರಣಗಳಿದ್ದು, ಅವುಗಳ ಮೌಲ್ಯ 15.55 ಲಕ್ಷರು. ಗಳಾಗಿವೆ. ಪತ್ನಿಯೂ ಶ್ರೀಮಂತೆ: ಇವರ ಪತ್ನಿ ರೇವತಿ ಬಳಿ 1.41 ಕೆಜಿ ಚಿನ್ನವಿದ್ದು, ಇದರ ಮೌಲ್ಯ 1.04 ಕೋಟಿ ರು.ಗಳು. ಇವರು 33.5 ಕೆಜಿ ಬೆಳ್ಳಿ ಆಭರಣ ಹೊಂದಿದ್ದು, ಇದರ ಮೌಲ್ಯ 32.56 ಲಕ್ಷ ರು.ಗಳು, ಜೊತೆಗೆ, 12.59 ಕ್ಯಾರೆಟ್ ನ ವಜ್ರದ ಆಭರಣ ಇವರ ಬಳಿ ಇದ್ದು, ಇದರ ಮೌಲ್ಯ 12.46 ಲಕ್ಷ ರು.ಗಳಾಗಿದೆ. ಬೆಂಗಳೂರು ಅತ್ತೆ ಗುಪ್ಪೆಯಲ್ಲಿರುವ ತಿರುಮಲ ಲಕ್ಟೋರಿಯಾ ಅಪಾರ್ಟ್ ಮೆಂಟ್ ನಲ್ಲಿ ಒಂದು ಫ್ಲಾಟ್ ಇದ್ದು, ಇದರ ಮಾರುಕಟ್ಟೆ ಮೌಲ್ಯ 43.43 ಲಕ್ಷ ರು.ಗಳು. 

ಒಂದೂವರೆ ವರ್ಷದಲ್ಲಿ 8 ಕೋಟಿ ಏರಿಕೆ: 

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ (ಮದುವೆಗೂ ಮುನ್ನ) 75 ಕೋಟಿ ಹಾಗೂ 2023ರ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ 104.96 ಕೋಟಿ ರು. ಆಸ್ತಿ ಹೊಂದಿದ್ದರು. ಕೇವಲ ಒಂದೂವರೆ ವರ್ಷದಲ್ಲಿ ಇವರ ಆಸ್ತಿ 8.44 ಕೋಟಿ ರು.ಗಳಷ್ಟು ವೃದ್ಧಿಯಾಗಿದೆ.

ಚನ್ನಪಟ್ಟಣದ ಸೈನಿಕನ ಚಕ್ರವ್ಯೂಹ ಬೇಧಿಸಲು ಅಭಿಮನ್ಯು ಕಳಿಸಿದ ಎನ್‌ಡಿಎ ಮೈತ್ರಿಕೂಟ!

ಶಿಗ್ಗಾಂವಿ ಪಕ್ಷೇತರ ಅಭ್ಯರ್ಥಿ ಖಾದ್ರಿಯ ಆಸ್ತಿ 1.15 ಕೋಟಿ ರು. 

ಶಿಗ್ಗಾಂವಿ: ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಾಜಿ ಶಾಸಕ ಅಜ್ಜಂಫೀರ್‌ಖಾದ್ರಿಯವರ ಆಸ್ತಿ ಮೌಲ್ಯ ₹1.15 ಕೋಟಿ, ಖಾದ್ರಿ ಬಳಿ 50 ಸಾವಿರ ನಗದು ಇದೆ. 830 ಲಕ್ಷ ಮೌಲ್ಯದ ಟೊಯೋಟಾ ಕಾರಿದೆ. ತಿಗ್ಗಾಂವಿ ತಾಲೂಕಿನ ಕ್ಯಾಲಕೊಂಡಲಕೊಂಡ ಗ್ರಾಮದಲ್ಲಿ ಶೇ 25 ಲಕ್ಷ ಮೌಲ್ಯದ 17 ಎಕರೆ ಕೃಷಿ ಭೂಮಿಯಿದೆ. 

ಹುಲಗೂರು ಗ್ರಾಮದಲ್ಲಿ ಮನೆ, ಹುಬ್ಬಳ್ಳಿಯಲ್ಲಿ ಪ್ಲಾಟ್, ಬೆಂಗಳೂರಿನಲ್ಲಿ ಬಿಡಿಎಯಲ್ಲಿ ನಿವೇಶನ ಹೊಂದಿದ್ದು, ಇವುಗಳ ಮೌಲ್ಯ 84 ಲಕ್ಷ ರು. ಎಂದು ತಿಳಿಸಿದ್ದಾರೆ. 16 ಲಕ್ಷ ರು. ಸಾಲ ಮಾಡಿಕೊಂಡಿದ್ದಾರೆ. ಹುಲಗೂರು ಠಾಣೆಯಲ್ಲಿ ಇವರ ವಿರುದ್ಧ ಒಂದು ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಜನಪ್ರತಿನಿಧಿಗಳ ನ್ಯಾಯಾಲಯದಿಂದ ಇದಕ್ಕೆ ತಡೆ ಯಾಜ್ಞೆ ತಂದಿದ್ದಾರೆ. ಇವರ ಪತ್ನಿ ಬಳಿ 10 ಸಾವಿರ ನಗದು, ₹1.20 ಲಕ್ಷ ಮೌಲ್ಯದ ಚಿನ್ನಾಭರಣವಿದೆ.