ಚಂದ್ರಶೇಖರ್ ಸ್ವಾಮೀಜಿ ಸಲಹೆ ಪರಿಶೀಲನೆ ಮಾಡ್ತೀನಿ, ಪ್ರಧಾನಿ ಆಗ್ತೀನಿ ಅಂತ ದೇವೇಗೌಡರಿಗೆ ಗೊತ್ತಿರಲಿಲ್ಲ: ಸಚಿವ ರಾಜಣ್ಣ
ಚಂದ್ರಶೇಖರ್ ಸ್ವಾಮೀಜಿ ಸಲಹೆ ಒಳ್ಳೇದು ಇದೆ ಪರಿಶೀಲನೆ ಮಾಡ್ತೀನಿ ಅಂತ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಹಳ ಜನ ಸ್ವಾಮೀಜಿಗಳು ಇದ್ದಾರೆ.
ತುಮಕೂರು (ಜೂ.28): ಚಂದ್ರಶೇಖರ್ ಸ್ವಾಮೀಜಿ ಸಲಹೆ ಒಳ್ಳೇದು ಇದೆ ಪರಿಶೀಲನೆ ಮಾಡ್ತೀನಿ ಅಂತ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಹಳ ಜನ ಸ್ವಾಮೀಜಿಗಳು ಇದ್ದಾರೆ, ಆದ್ರೆ ಚಂದ್ರಶೇಖರ್ ಸ್ವಾಮೀಜಿ ಒಳ್ಳೆ ಸಲಹೆ ಮಾಡಿದ್ದಾರೆ. ಆ ಸಲಹೆಯನ್ನ ನಾನು ಪರಿಶೀಲನೆ ಮಾಡ್ತಿನಿ, ಒಳ್ಳೆಯ ಸಲಹೆ ಇದೆ, ಯಾವ್ ಬೇವರು ಸುರಿಸದೇ, ಜೀವನ ಮಾಡೋವಂತಹ ಕೆಲಸವನ್ನ ಸ್ವಾಮೀಜಿಗಳು ಸಲಹೆ ಮಾಡಿದ್ದಾರೆ. ಅವರ ಸಲಹೆ ಅನ್ನು ನಾನು ಪರಿಶೀಲನೆ ಮಾಡ್ತಿನಿ ಎಂದಿದ್ದಾರೆ.
ಹೆಚ್ಚುವರಿ ಡಿಸಿಎಂ ಕೇಳೋದ್ರಲ್ಲಿ ತಪ್ಪೇನಿದೆ, ನಾವು ಕೇಳ್ತೀವಿ ಅಂತಿಮವಾಗಿ ನಿರ್ಣಯ ಮಾಡೋದು ಕಾಂಗ್ರೆಸ್ ಪಕ್ಷದಲ್ಲಿನ ಹೈಕಮಾಂಡ್, ನಾವು ಕೇಳದೇ ಇದ್ರೆ ಅವರ ಗಮನಕ್ಕೆ ಹೇಗೆ ಹೋಗುತ್ತೆ. ಅಂತಿಮವಾಗಿ ಹೈಕಮಾಂಡ್ ನವರು ಏನ್ ನಿರ್ಣಯ ತಗೋಳ್ತಾರೋ ಎಲ್ಲರು ಅದಕ್ಕೆ ಬದ್ದರಾಗಿರ್ತಾರೆ. ಅದಕ್ಕೊಸ್ಕರ ಫೈಟ್ ಮಾಡೋದ್ರಲ್ಲಿ ಯಾವುದೇ ಪಾಲ್ಟ್ ಇಲ್ಲ, ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್ ಡೆಲ್ಲಿಲಿ ಇದ್ದಾರೆ, ನಿನ್ನೆ ಎಲ್ಲಾ ಪಾರ್ಲಿಮೆಂಟ್ ಲೀಡರ್ ಗಳನ್ನ ಭೇಟಿ ಮಾಡಿದ್ದಾರೆ. ಇವತ್ತು ನಮ್ಮ ರಾಜ್ಯಕ್ಕೆ ಸಂಬಂಧದಪಟ್ಟಂತೆ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರನ್ನ ಭೇಟಿ ಮಾಡುವಂತಹ ಕಾರ್ಯಕ್ರಮ ಇದೆ, ಅದನ್ನೆಲ್ಲಾ ಮುಗಿಸಿಕೊಂಡು ರಾಜ್ಯಕ್ಕೆ ವಾಪಸ್ ಬರ್ತಾರೆ, ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರನ್ನ ಅಭಿನಂದಿಸುವ ಕೆಲಸ ಮಾಡ್ತಾರೆ.
ಸಿಎಂ ಸಿದ್ದರಾಮಯ್ಯ ಕೈಕಟ್ಟಿ ಹಾಕುವ ಕೆಲಸ ನಡೆಯುತ್ತಿದೆ: ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದೇನು?
ಚಂದ್ರಶೇಖರ್ ಸ್ವಾಮೀಜಿ ಮೂಲಕ ಡಿಕೆಶಿ ಸಿಎಂ ಕೂಗು ಎಂಬ ವಿಚಾರ: ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಸೋಲಲಿಕ್ಕೆ ಇವರೆಲ್ಲಾ ಕಾರಣ, ಈ ಮಠ ಯಾರು ಮಾಡಿದ್ದು, ಎಚ್.ಡಿ ದೇವೆಗೌಡರು ಬಾಲಗಂಗಾಧರನಾಥ್ ಸ್ವಾಮೀಜಿ ವಿರುದ್ಧ ದೇವೆಗೌಡರು ಈ ಮಠ ಮಾಡಿದ್ರು. ಮಠ ಪ್ರಾರಂಭ ಮಾಡಿದ ದಿನ ಭಾಷಣ ಮಾಡಿದ ಕ್ಲಿಪಿಕ್ಸ್ ಯಾರ ಹತ್ರ ಏನಾದ್ರು ಇದ್ರೆ ಕೇಳಿ ಎಲ್ಲಾ ಅರ್ಥ ಆಗುತ್ತೆ, ದೇವೆಗೌಡರ ಕೃಪಾಶಿರ್ವಾದ ದಿಂದ ಮಠ ಮಾಡಿದ್ದು, ಈಗ ದೇವೆಗೌಡರ ಅಳಿಯನಿಗೆ ಸಪೋರ್ಟ್ ಮಾಡಿ, ಡಿಕೆ ಸುರೇಶ್ ಸೋಲಲಿಕ್ಕೆ ಇವರುಗಳೇ ಕಾರಣ.
ಇವರುಗಳೆಲ್ಲಾ ಮಾಡಿದ ತಪ್ಪು ಮುಚ್ಚಿ ಹಾಕಿಕೊಳ್ಳಲಿಕ್ಕೆ, ಇದೀಗ ಡಿಕೆ ಶಿವಕುಮಾರ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಿ ಅಂತ ಇವಾಗ ಕೇಳಿತ್ತಿದ್ದಾರೆ, ಡಿ.ಕೆ ಸುರೇಶ್ನಾ ಸೋಲಿಸಿದ್ದು ಯಾರು ? ದೇವೆಗೌಡರು ಮಠ ಮಾಡಿದ್ರು ಅದಕ್ಕೆ ಉಪಕಾರ ಸ್ಮರಣೆ ಇರಬೇಕಲ್ಲಾ, ಉಪಕಾರ ಸ್ಮರಣೆಯಿಂದನೇ ಮಂಜುನಾಥನ ಪರ ನಿಂತುಕೊಂಡು ಡಿಕೆ ಸುರೇಶ್ ನಾ ಸೋಲಿಸಿರೋದು, ಮತ್ತೆ ಒಕ್ಕಲಿಗರೆಲ್ಲಾ ವೋಟ್ ಹಾಕಿದ ಮೇಲೆ ಡಿಕೆ ಸುರೇಶ್ ಯಾಕೆ ಸೋತ್ರು. ಯಾಕೆ ಡಿಕೆ ಸುರೇಶ್ ಕೆಲಸ ಮಾಡಿರಲಿಲ್ವಾ, ಕ್ಷೇತ್ರದಲ್ಲಿ ಎಲ್ಲಾ ಎಂ.ಪಿ ಗಳಿಂತ ಹೆಚ್ಚು ಕೆಲಸ ಮಾಡಿದ್ದಾರೆ.
ಅಷ್ಟೇಲ್ಲಾ ಕೆಲಸ ಮಾಡಿದ್ರು ಸೋಲೋದು ಅಂದ್ರೆ ಎಲ್ಲರು ಪಿತೂರಿಗಳನ್ನ ಮಾಡಿರ್ತಾರೆ. ನ್ಯಾಷನಲ್ ಪಾರ್ಟಿಯಾದ ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ ಇವಕ್ಕೆ ಹೈಕಮಾಂಡ್ ಗಳಿದ್ದಾವೆ. ಯಾರದ್ದು ಏನೇ ಅನಿಸಿಕೆ ಇರಬಹುದು, ಸಿದ್ದರಾಮಯ್ಯನವರು ಎಲ್ಲಿಯವರೆಗೂ ಮುಂದುವರಿಯೋಕೆ ಅವಕಾಶ ಕೊಡ್ತಾರೋ ಅಲ್ಲಿಯವರೆಗೆ ಇರ್ತಾರೆ, ಯಾವಾಗ ಅವಕಾಶ ತಪ್ಪುತ್ತೋ ಅವಾಗ ಹೈಕಮಾಂಡ್ ನವರು ಮಾತು ಕೇಳಬೇಕಾಗುತ್ತೆ. ಅವರು ಕೇಳಬೇಕು, ಇನ್ನೊಬ್ಬರು ಕೇಳಬೇಕು ಅನ್ನೋದು ಕಾಂಗ್ರೆಸ್ ಪಾರ್ಟಿನಲ್ಲಿ ಇಲ್ಲ, ಅಂತಿಮ ನಿರ್ಧಾರ ಹೈ ಕಮಾಂಡಿನದ್ದೆ.
ಕೆಂಪೇಗೌಡ ಜಂಯತಿ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನ ಕೂರಿಸಿಕೊಂಡು, ಒಂದು ಧಾರ್ಮಿಕ ಸಭೆನಲ್ಲಿ ಈ ರೀತಿಯಲ್ಲಿ ಮಾತನಾಡೋದು ಯಾರಿಗೂ ಶೋಭೆ ತರುತ್ತಾ..? ಸಿದ್ದರಾಮಯ್ಯ, ಇನ್ನೊಬ್ಬರು ಅವರನ್ನ ಕೂರಿಸಿಕೊಂಡು, ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಎಲ್ಲರೂ ಆಸಕ್ತಿಯಿಂದ, ಶ್ರದ್ಧಾಭಕ್ತಿಯಿಂದ ಆಚರಣೆ ಮಾಡುವಂತಹ ದಿನಾಚರಣೆ ಅಂತ ನಾನು ಅನ್ಕೊಂಡಿದಿನಿ, ಅಂತಹದ್ರಲ್ಲಿ ರಾಜಕೀಯ ಎಲ್ಲಾ ಮಾತಾಡ್ಕೊಂಡು ಬರತಕ್ಕಂತಹದ್ದು ಯಾರಿಗೂ ಶೋಭೆ ತರುವಂತಹದಲ್ಲ, ಸ್ವಾಮೀಜಿಗಳೆಲ್ಲಾ ಯಾರು ಅಂದ್ರೆ, ಸಮಾಜಕ್ಕೆ ಒಳಿತನ್ನಾ ಮಾಡುವವರು, ಸಮಾಜ ಅಂದ್ರೆ ಜಾತಿಗಲ್ಲ, ಇಡೀ ಮಾನವ ಕುಲಕ್ಕೆ ಒಳಿತನ್ನ ಮಾಡುವಂತಹದ್ದು. ಆ ಸಮಾಜದಲ್ಲಿ ಸಾಮಾಜಿಕ ಪಿಡುಗನ್ನ ದೂರ ಮಾಡುವಂತಹದ್ದು, ಮಕ್ಕಳಿಗೆ ವಿದ್ಯಾಭ್ಯಾಸವನ್ನ ಕೊಡುವಂತಹದ್ದು, ಅದು ಸನಾತನ ಧರ್ಮ ಇರಬಹುದು,
ಅದು ಇನ್ನೊಂದು ಇರಬಹುದು, ಅದೆಷ್ಟೋ ಶತಮಾನಗಳಿಂದ ನಡೆದುಕೊಂಡು ಬಂದಿರುವಂತಹ ಪದ್ದತಿ, ಆದರೆ ಒಂದಷ್ಟು ಜನ ಸ್ವಾಮೀಜಿಗಳು ಲೇ ಟೆಸ್ಟ್, ಹೈಟೆಕ್ ಸ್ವಾಮೀಜಿಗಳು ಬಹಳ ಜನ ಬಂದಿದ್ದಾರೆ. ಅವರುಗಳ ಥಿಂಕಿಂಗ್ ಒಂದೊಂದು ರೀತಿ ಇರುತ್ತೆ, ಅದಕ್ಕೆ ನಾವೇನು ಹೇಳೊಕೆ ಆಗಲ್ಲ ಅದು ಅವರಿಗೆ ಸೇರಿರುವಂತಹದ್ದು, ಅವರ ನಡವಳಿಕೆಗಳು ಅವರು ಮಾತನಾಡುವಂತಹದ್ದು ಅವರಿಗೆ ಸೇರಿದ್ದು, ಇದು ಬ್ಲಾಕ್ ಮೈಲ್ ಅಂತ ನಾನು ಹೇಳೊದಿಲ್ಲ, ನಾವು ಸ್ವಾಮೀಜಿಗಳು ಅಂದ್ರೆ ದೇವರ ಅಪರವತಾರ ಅಂತ ಹೇಳಿ ಕಾಲಿಗೆ ಬಿದ್ದು, ನಮಸ್ಕಾರ ಮಾಡಿ ಆಶಿರ್ವಾದ ಪಡೆಯಬೇಕು ಅನ್ನುವ ನಡವಳಿಕೆಯನ್ನ ನಾವು ನಡೆದುಕೊಂಡು ಬಂದಿದ್ದೇವೆ. ನಾವು ಅವರನ್ನ ಎರಡನೇ ದೇವರು ಅಂತಾನೆ ನಮ್ಮ ಭಾವನೆ, ಅವರು ಒಬ್ಬ ಮನುಷ್ಯನ ಮಟ್ಟಕ್ಕೆ ಇಳಿದರೆ ಯಾರು ಏನು ಬೇಡ ಅನ್ನೋಕೆ ಆಗುತ್ತೆ, ಅದು ಅವರಿಗೆ ಸೇರಿರುವಂತಹದ್ದು.
ಹೈಕಮಾಂಡ್ ಲೆವೆಲ್ ನಲ್ಲಿ ಏನ್ ಆಗಿದಿಯೋ ಅನ್ನೋದು ಯಾರಿಗಪ್ಪ ಗೊತ್ತು, ನಾನು ಪದೇ ಪದೇ ಹೇಳುವಂತಹದ್ದು ಏನಂದರೆ, ನಾಯಕನ ಆಯ್ಕೆ ವಿಚಾರದಲ್ಲಿ , ದೆಹಲಿಯಲ್ಲಿ ತಿರ್ಮಾನ ಮಾಡಿವಂತಹ ಸಂದರ್ಭದಲ್ಲಿ ಕೆಸಿ ವೇಣುಗೋಪಾಲ್ ಹೇಳಿದ್ದು, ಸಿದ್ದರಾಮಯ್ಯ ವಿಲ್ ಬಿ ದಿ ಲೀಡರ್ ಅಂಡ್ ಚೀಫ್ ಮಿನಿಸ್ಟರ್ , ಎರಡನೇ ವಿಚಾರ ಡಿಕೆ ಶಿವಕುಮಾರ್ ವಿಲ್ ಬಿ ದಿ ಅಲೋನ್ ಡಿಸಿಎಂ ಎಂದಿದ್ದರು, ಮೂರನೇ ವಿಚಾರ ಏನು ಅಂದ್ರೆ, ಡಿಕೆ ಶಿವಕುಮಾರ್ ವಿಲ್ ಕಂಟಿನ್ಯೂ ಪ್ರೆಸಿಡೆಂಟ್ ಟೀಲ್ ಪಾರ್ಲಿಮೆಂಟ್ ಎಲೆಕ್ಷನ್ ಅಂತ ಹೇಳಿದ್ರು. ಅದನ್ನ ಹೇಳಿದ್ರು, ಅವರಿಗೆ ಜ್ಞಾಪಿಸಿದೆ ಅದು ನನ್ನ ಡಿಮ್ಯಾಂಡ್ ಅಲ್ಲ, ಅವರು ಹೇಳಿದ್ದಪ್ಪ, ಪಾರ್ಲಿಮೆಂಟ್ ಎಲೆಕ್ಷನ್ ಆದಮೇಲೆ ಚೆಂಜ್ ಆಗ್ಬೇಕು ಅಂತ ಇದರಲ್ಲಿ ಒತ್ತಾಯ ಇಲ್ಲ.
ಸಚಿವ ಸಂಪುಟ ರಚನೆ ಹೈ ಕಮಾಂಡ್ ಗೆ ಬಿಟ್ಟ ವಿಚಾರ: ಹೊಸಬರನ್ನು ಮಂತ್ರಿಗಳನ್ನಾಗಿ ಮಾಡೋದು, ಸಂಪುಟ ವಿಸ್ತರಣೆ ಮಾಡೋದು, ಇದೆಲ್ಲಾವನ್ನು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ನವರು ನಿರ್ಣಯ ಮಾಡ್ತಾರೆ, ಇವತ್ತು ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಹೆಚ್ಚುವರಿ ಡಿಸಿಎಂ ಸ್ಥಾನ ಪ್ರಸ್ತಾಪ ಮಾಡ್ತಾರೋ ಇಲ್ಲೋ ಗೊತ್ತಿಲ್ಲ, ಕೆಲವರು ಪದೇ ಪದೇ ಹೇಳ್ತಿರ್ತಾರೆ. ಆದರೆ ಹೈಕಮಾಂಡ್ ನಲ್ಲಿ ಚರ್ಚೆಗೆ ಬಂದರು ಬರಬಹುದು, ಬರದೇ ಇದ್ದರು ಇರಬಹುದು,ನಾನು ಅದರ ಬಗ್ಗೆ ನಿಖರವಾಗಿ ಹೇಳೋದಿಕ್ಕೆ ಆಗಲ್ಲ ಎಂದರು.
ಪ್ರಧಾನಿ ಆಗ್ತೀನಿ ಅಂತ ದೇವೇಗೌಡರಿಗೆ ಗೊತ್ತಿರಲಿಲ್ಲ: ರಾಜ್ಯ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ನಡೀತಿದ್ಯಾ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ, ಇದರಲ್ಲಿ ಬಣ ರಾಜಕೀಯ ಎಲ್ಲಿದೆಯಪ್ಪ, ಹೈ ಕಮಾಂಡ್ ಹೇಳಿದ ಹಾಗೆ ಕೇಳ್ತಿವಿ ಅಂದ್ಮೇಲೆ, ಬಣ ಎಲ್ಲಿದೆ. ನಾನೇನು ಸಿದ್ದರಾಮಯ್ಯ ಬಣ ಅಂತಾ ಗುರುತಿಸಿಕೊಂಡಿಲ್ಲ, ಅವರು ಗುರುತಿಸಿಕೊಂಡ್ರೆ ನಾನೇನು ಮಾಡೋಕಾಗುತ್ತೆ.ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುವ ಆಶಯ ಇದೆ, ರಾಜಕೀಯದಲ್ಲಿ ಯಾವುದು ಏನು ಬೇಕಾದ್ರೂ ನಡೆಯಬಹುದು, ದೇವೇಗೌಡರು ಪ್ರಧಾನಿ ಮಂತ್ರಿ ಆಗ್ತೀನಿ ಅಂತಾ ಅವರಿಗೇ ಗೊತ್ತಿರಲಿಲ್ಲ, ರಾಜಕಾರಣದಲ್ಲಿ ಪವಾಡಗಳು ನಡೀತಾ ಇರ್ತವೆ, ಯಾವುದು ಆಗಲ್ಲ, ಯಾವುದು ಆಗುತ್ತೆ ಅನ್ನೋದನ್ನ ರಾಜಕಾರಣದಲ್ಲಿ ನಿಖರವಾಗಿ ಹೇಳೋಕಾಗಲ್ಲ, ಯಾರಾದ್ರೂ ಮಂತ್ರಿಗಳಾಗ್ತೀರಾ ಅಂತಾ ಕೇಳಿದಾಗ ನಾನು ಆಗ್ತೀನಿ ಅಂತಾ ಹೇಳಿದ್ದೀನಿ, ಬಿಡ್ತೀರಾ ಅಂತಾ ಕೇಳಿದ್ರೆ ಬಿಡ್ತೀನಿ ಅಂತಲೂ ಹೇಳಿದ್ದೇನೆ.
ನೀಟ್ ಬಗ್ಗೆ ಅಧ್ಯಯನ ಬೇಕೇ? ಬೇಡವೇ ಚರ್ಚೆಯಾಗಲಿ: ಸಚಿವ ದಿನೇಶ್ ಗುಂಡೂರಾವ್
ಯಾರಾದ್ರೂ ಮಂತ್ರಿ ಪಟ್ಟ ಬಿಟ್ಟು ಕೆಪಿಸಿಸಿ ಅಧ್ಯಕ್ಷ ಆಗ್ತೀನಿ ಅಂತಾರಾ? ಯಾರೂ ಹೇಳಲ್ಲ, ಆದರೆ ನಾನ್ ಹೇಳಿದೀನಿ, ನಾನು ಮಂತ್ರಿ ಪಟ್ಟ ಬಿಡ್ತೀನಿ, ರಾಜೀನಾಮೆ ಕೊಡ್ತೀನಿ, ಯಾವಾಗ ಬದಲಾವಣೆ ಅನ್ನೋದನ್ನ ಮೇಲಿನವರು ನಿರ್ಧಾರ ಮಾಡ್ತಾರೆ. ನಾನು ಯಾವುದೇ ಅಧಿಕಾರಕ್ಕೆ ಅಂಟಿಕೊಂಡೋನಲ್ಲ, ಆ ಸ್ಥಾನದಲ್ಲಿ ನಾನು ಎಷ್ಟು ದಿನ ಇರ್ತೀನೋ ಅಷ್ಟು ದಿನ, ಜನರಿಗೆ ನ್ಯಾಯ ಒದಗಿಸೋ ಕೆಲಸಾನ ಪ್ರಾಮಾಣಿಕವಾಗಿ ಮಾಡ್ತೀನಿ, ಜನರಿಗೆ, ಸಮುದಾಯಕ್ಕೆ ಏನೆಲ್ಲಾ ನ್ಯಾಯ ಒದಗಿಸಬೇಕು ಅನ್ನೋದನ್ನ, ಯಾವುದೇ ಒತ್ತಡ ಬಂದ್ರೂ ಮಾಡ್ತೀನಿ, ನ್ಯಾಯ ಒದಗಿಸೋದ್ರಲ್ಲಿ ಹಿಂದೆ ಬೀಳಲ್ಲ, ಸಿಎಂ, ಡಿಸಿಎಂ ವಿಚಾರಕ್ಕೆ ಕಿತ್ತಾಟ ಶುರುವಾಗಿರೋ ವಿಚಾರದಲ್ಲಿ ಯಾವುದೇ ಕಿತ್ತಾಟ ಇಲ್ಲ, ಕೇಳ್ದಲೇ ಇದ್ರೆ ಏನೂ ಕೊಡಲ್ಲ, ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡೋದು. ಕೇಳ್ಬೇಕು, ಕೇಳಿದ್ದೀವಿ, ಕೊಡೋದು ಬಿಡೋದು. ಹೈ ಕಮಾಂಡ್ ಗೆ ಬಿಟ್ಟಿದ್ದು ಅಂತ ಹೇಳಿದ್ರು.